ವಿದೇಶ

2024ರಲ್ಲಿ ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ವಿವೇಕ್ ರಾಮಸ್ವಾಮಿ

Lingaraj Badiger

ವಾಷಿಂಗ್ಟನ್/ಲಂಡನ್: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನದಲ್ಲಿ ಗೆಲ್ಲದಿದ್ದರೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು ಎಂದು ಭಾರತೀಯ ಮೂಲದ ಅಮೆರಿಕದ ಸಂಸದ ವಿವೇಕ್ ರಾಮಸ್ವಾಮಿ ಅವರು ಹೇಳಿದ್ದಾರೆ. 

38 ವರ್ಷದ ಮಿಲಿಯನೇರ್ ಬಯೋಟೆಕ್ ಉದ್ಯಮಿ, ರಾಜಕಾರಣಿ ವಿವೇಕ್ ರಾಮಸ್ವಾಮಿ ಅವರು, ಅಧ್ಯಕ್ಷ ಸ್ಥಾನ ಹೊರತುಪಡಿಸಿ ಬೇರೆ ಯಾವುದೇ ಹುದ್ದೆಯಲ್ಲಿ ಆಸಕ್ತಿ ಇಲ್ಲ ಎಂದು ಇತ್ತೀಚಿಗೆ ಹೇಳಿದ್ದರು. ಆದರೆ ಈಗ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷನಾಗಿ "ಈ ದೇಶವನ್ನು ಮತ್ತೆ ಒಂದುಗೂಡಿಸಬಹುದು" ಎಂದು ನಾನು ಭಾವಿಸಿದ್ದೇನೆ. ಆದರೆ ಮಾಜಿ ಅಧ್ಯಕ್ಷ, 77 ವರ್ಷದ ಟ್ರಂಪ್ ಅವರು ಮೂರನೇ ಬಾರಿಗೆ ಪಕ್ಷದ ನಾಮನಿರ್ದೇಶನದಲ್ಲಿ ಗೆದ್ದರೆ ಅವರೊಂದಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವನ್ನು ತಳ್ಳಿಹಾಕುವುದಿಲ್ಲ ಎಂದಿದ್ದಾರೆ.

ಬ್ರಿಟನ್‌ನ ಜಿಬಿ ನ್ಯೂಸ್‌ನಲ್ಲಿ, ಟ್ರಂಪ್ ಅವರೊಂದಿಗೆ ಉಪಾಧ್ಯಕ್ಷರಾಗಲು ನಿಮಗೆ ಸಂತೋಷವೇ? ಎಂಬ ಪ್ರಶ್ನೆಗೆ ಉತ್ತರಿಸಿದ ರಾಮಸ್ವಾಮಿ, ಖಂಡಿತವಾಗಿಯೂ ಇದು ನನ್ನ ವಯಸ್ಸಿಗೆ ಉತ್ತಮ ಸ್ಥಾನವಾಗಿದೆ. ನಮ್ಮ ದೇಶವನ್ನು ಪುನರುಜ್ಜೀವನಗೊಳಿಸುವ ಪ್ರಶ್ನೆ. ಇದನ್ನು ಶ್ವೇತಭವನದಿಂದ ನಾಯಕನಾಗಿ ಮತ್ತು ಅಭಿಯಾನದ ಮುಖ್ಯಸ್ಥನಾಗಿ ಮಾತ್ರ ನಾನು ಈ ದೇಶವನ್ನು ಮತ್ತೆ ಒಂದುಗೂಡಿಸಬಹುದು" ಎಂದಿದ್ದಾರೆ.

SCROLL FOR NEXT