ವಿದೇಶ

ಅಮೆರಿಕ ವಲಸೆ ಉಪಸಮಿತಿಗೆ ಭಾರತೀಯ ಮೂಲದ ಪ್ರಮೀಳಾ ಜಯಪಾಲ್ ನೇಮಕ

Lingaraj Badiger

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಕಾಂಗ್ರೆಸ್ ಮಹಿಳೆ ಪ್ರಮೀಳಾ ಜಯಪಾಲ್ ಅವರು ಪ್ರಬಲ ಹೌಸ್ ಜುಡಿಷಿಯರಿ ಸಮಿತಿ ವಲಸೆ ಸಮಿತಿಯ ರ್ಯಾಂಕಿಂಗ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಈ ಮೂಲಕದ ಅಮೆರಿಕ ವಲಸೆ ಉಪಸಮಿತಿಗೆ ನೇಮಕವಾದ ಮೊದಲ ವಲಸಿಗರಾಗಿದ್ದಾರೆ.

ವಾಷಿಂಗ್ಟನ್ ರಾಜ್ಯದ 7ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಅನ್ನು ಪ್ರತಿನಿಧಿಸುತ್ತಿರುವ 57 ವರ್ಷದ ಪ್ರಮೀಳಾ ಜಯಪಾಲ್ ಅವರು, ವಲಸೆ ಸಮಗ್ರತೆ, ಭದ್ರತೆ ಮತ್ತು ಜಾರಿ ಮೇಲಿನ ಉಪಸಮಿತಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

"ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಚುನಾಯಿತರಾದ ಮೊದಲ ದಕ್ಷಿಣ ಏಷ್ಯಾದ ಮಹಿಳೆಯಾಗಿ, ವಲಸೆ ಸಮಗ್ರತೆ, ಭದ್ರತೆ ಮತ್ತು ಜಾರಿ ಕುರಿತ ಹೌಸ್ ಉಪಸಮಿತಿಯ ರ್ಯಾಂಕಿಂಗ್ ಸದಸ್ಯರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ" ಎಂದು ಜಯಪಾಲ್ ಹೇಳಿದ್ದಾರೆ.

ನಾನು 16 ವರ್ಷದವಳಾಗಿದ್ದಾಗ, ನನ್ನ ಜೇಬಿನಲ್ಲಿ ಏನೂ ಇಲ್ಲದೆ ಒಬ್ಬಂಟಿಯಾಗಿ ಈ ದೇಶಕ್ಕೆ ಬಂದೆ ಎಂದು ಜಯಪಾಲ್ ಅವರು ತಾವು ನಡೆದುಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ.

SCROLL FOR NEXT