ವಿದೇಶ

ರಷ್ಯಾ-ಉಕ್ರೇನ್ ಯುದ್ಧ ಖೈದಿಗಳ ವಿನಿಮಯ: ನೂರಾರು ಸೈನಿಕರ ಬಿಡುಗಡೆ

Lingaraj Badiger

ಕೈವ್: ರಷ್ಯಾ ಮತ್ತು ಉಕ್ರೇನ್ ಯುದ್ಧ ಖೈದಿಗಳನ್ನು ವಿನಿಮಯ ಮಾಡಿಕೊಂಡಿದ್ದು, ಉಭಯ ದೇಶಗಳು ಡಜನ್ ಗಟ್ಟಲೆ ಸೈನಿಕರು ಮನೆಗೆ ಮರಳಿದ್ದಾರೆ ಎಂದು ಎರಡೂ ಕಡೆಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಉಕ್ರೇನಿಯನ್ ಅಧ್ಯಕ್ಷರ ಉನ್ನತ ಸಹಾಯಕ ಆಂಡ್ರಿ ಯೆರ್ಮಾಕ್ ಅವರು ಟೆಲಿಗ್ರಾಮ್ ಪೋಸ್ಟ್‌ನಲ್ಲಿ 116 ಉಕ್ರೇನಿಯನ್ನರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬಿಡುಗಡೆಯಾದ ಯುದ್ಧ ಖೈದಿಗಳಲ್ಲಿ ಮಾಸ್ಕೋದ ಮೇಲೆ ತಿಂಗಳುಗಳ ಕಾಲ ನಡೆದ ಮುತ್ತಿಗೆಯ ಸಮಯದಲ್ಲಿ ಮಾರಿಯುಪೋಲ್‌ನಲ್ಲಿ ಸೆರೆಸಿಕ್ಕ ಪಡೆಗಳು ಹಾಗೂ ಖೆರ್ಸನ್ ಪ್ರದೇಶದ ಗೆರಿಲ್ಲಾ ಹೋರಾಟಗಾರರು ಮತ್ತು ಪೂರ್ವ ನಗರವಾದ ಬಖ್ಮುತ್‌ಗಾಗಿ ನಡೆಯುತ್ತಿರುವ  ಯುದ್ಧದಲ್ಲಿ ಸೆರೆಹಿಡಿಯಲ್ಪಟ್ಟ ಸ್ನೈಪರ್‌ಗಳು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ರಷ್ಯಾ ಸೇನಾ ಪಡೆಯ 63 ಯುದ್ಧ ಖೈದಿಗಳು ಉಕ್ರೇನ್‌ನಿಂದ ಮರಳಿದ್ದಾರೆ ಎಂದು ರಷ್ಯಾ ರಕ್ಷಣಾ ಅಧಿಕಾರಿಗಳು ಘೋಷಿಸಿದ್ದಾರೆ. ಇದರಲ್ಲಿ ಕೆಲವು "ವಿಶೇಷ ವರ್ಗ" ಖೈದಿಗಳು ಯುನೈಟೆಡ್ ಅರಬ್ ಎಮಿರೇಟ್ಸ್ ಮಧ್ಯಸ್ಥಿಕೆಯ ನಂತರ ಬಿಡುಗಡೆಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಷ್ಯಾದ ರಕ್ಷಣಾ ಸಚಿವಾಲಯವು ಶನಿವಾರ ಹೊರಡಿಸಿದ ಪ್ರಕಟಣೆಯಲ್ಲಿ ಈ "ವಿಶೇಷ ವರ್ಗ" ಖೈದಿಗಳ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ.

SCROLL FOR NEXT