ವಿದೇಶ

ಯೂರೋಪ್, ಜರ್ಮನಿ, ಬ್ರಿಟನ್ ಗಳಲ್ಲಿ 3,800 ಉದ್ಯೋಗ ಕಡಿತಕ್ಕೆ ಫೋರ್ಡ್ ಮುಂದು

Srinivas Rao BV

ಪ್ಯಾರಿಸ್: ಅಮೇರಿಕಾದ ಆಟೋಮೊಬೈಲ್ ಉತ್ಪಾದಕ ಸಂಸ್ಥೆ ಫೋರ್ಡ್ 3,800 ಉದ್ಯೋಗಗಳನ್ನು ಕಡಿತಗೊಳಿಸುವುದಕ್ಕೆ ಮುಂದಾಗಿದೆ. 

ಅತಿ ಹೆಚ್ಚು ಉದ್ಯೋಗ ಕಡಿತ ಬ್ರಿಟನ್, ಜರ್ಮನಿ, ಯುರೋಪ್ ಗಳಲ್ಲಿ ಉಂಟಾಗಲಿದೆ. ವಿದ್ಯುತ್ ಚಾಲಿತ ಕಾರುಗಳ ವಿಭಾಗದಲ್ಲಿ ಪೈಪೋಟಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಫೋರ್ಡ್ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. 

ಜರ್ಮನಿ ಒಂದರಲ್ಲೇ 2,300 ಹುದ್ದೆಗಳನ್ನು ಉತ್ಪನ್ನ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಕಾರ್ಯನಿರ್ವಹಣೆಗೆ ಸಂಬಂಧಿಸಿದ ವಿಭಾಗಗಳಲ್ಲಿ ತೆಗೆದುಹಾಕಲಾಗುತ್ತಿದ್ದರೆ, ಬ್ರಿಟನ್ ನಲ್ಲಿ 1,300 ಹಾಗೂ ಯುರೋಪ್ ನಲ್ಲಿ 200 ಹುದ್ದೆಗಳಲ್ಲಿನ ಉದ್ಯೋಗಿಗಳನ್ನು ಇನ್ನು 3 ವರ್ಷಗಳಲ್ಲಿ ವಜಾಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಇದು ಅತ್ಯಂತ ಕಠಿಣ ನಿರ್ಧಾರವಾಗಿದ್ದು, ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಫೋರ್ಡ್ ನ ಯುರೋಪ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಮಾರ್ಟಿನ್ ಸ್ಯಾಂಡರ್ ಹೇಳಿದ್ದಾರೆ.

ಇದನ್ನೂ ಓದಿ: ಮುಂದುವರಿದ ಟೆಕ್ ಕಂಪೆನಿಗಳ Layoff ಪ್ರಕ್ರಿಯೆ: ಜಾಗತಿಕವಾಗಿ 6,650 ಉದ್ಯೋಗಿಗಳ ವಜಾಕ್ಕೆ ಡೆಲ್ ನಿರ್ಧಾರ
 
ಈ ನಿರ್ಧಾರದಿಂದ ನಮ್ಮ ತಂಡದವರಿಗೆ ಉಂಟಾಗಲಿರುವ ಅಸ್ಥಿರತೆಯ ಬಗ್ಗೆ ನಮಗೆ ಅರಿವಿದೆ ಹಾಗೂ ಮುಂದಿನ ತಿಂಗಳುಗಳಲ್ಲಿ ನಾವು ಅವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸ್ಯಾಂಡರ್ ತಿಳಿಸಿದ್ದಾರೆ.
 
ಸಂಸ್ಥೆಯ ಹೇಳಿಕೆಯ ಪ್ರಕಾರ ಫೋರ್ಡ್ ಉದ್ಯಮವನ್ನು ಯುರೋಪ್ ನಲ್ಲಿ ಪುನಶ್ಚೇತನಗೊಳಿಸುತ್ತಿದೆ ಹಾಗೂ ಪ್ರಯಾಣಿಕ ವಾಹನಗಳ ಹೊಸ ಶ್ರೇಣಿಯೊಂದಿಗೆ ಲಾಭದಾಯಕವಾಗಿ ಸ್ಪರ್ಧಿಸುತ್ತಿದೆ.

ಜರ್ಮನಿಯಲ್ಲಿ ಜನವರಿ ತಿಂಗಳಲ್ಲಿ IG ಮೆಟಲ್ ಯೂನಿಯನ್ ನಿರೀಕ್ಷಿಸಿದ್ದಕ್ಕಿಂತಲೂ ಅಂದರೆ 3,200 ಕ್ಕಿಂತ ಕಡಿಮೆ ಉದ್ಯೋಗ ಕಡಿತವಾಗುತ್ತಿದೆ. "ಕಂಪನಿಯು ಯುರೋಪ್ನಲ್ಲಿ ತನ್ನ ವ್ಯವಹಾರವನ್ನು ಪುನರ್ರಚಿಸಲು ಕ್ರಮ ತೆಗೆದುಕೊಳ್ಳುತ್ತಿದೆ, ಹೆಚ್ಚು ಸ್ಪರ್ಧಾತ್ಮಕ ವೆಚ್ಚದತ್ತ ಸಂಸ್ಥೆ ಗಮನಹರಿಸುತ್ತಿದೆ" ಎಂದು ಫೋರ್ಡ್ ಹೇಳಿದೆ.

SCROLL FOR NEXT