ಪ್ರಾತಿನಿಧಿಕ ಚಿತ್ರ 
ವಿದೇಶ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಸ್ ಪಲ್ಟಿ; 15 ಮಂದಿ ಸಾವು, 60 ಮಂದಿಗೆ ಗಾಯ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮದುವೆ ಪಾರ್ಟಿಯನ್ನು ಮುಗಿಸಿಕೊಂಡು ವೇಗವಾಗಿ ಹಿಂತಿರುಗುತ್ತಿದ್ದ ಬಸ್ ಪಲ್ಟಿಯಾಗಿ, ನಂತರ ಕಣಿವೆಗೆ ಬಿದ್ದಿದೆ. ಘಟನೆಯಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮದುವೆ ಪಾರ್ಟಿಯನ್ನು ಮುಗಿಸಿಕೊಂಡು ವೇಗವಾಗಿ ಹಿಂತಿರುಗುತ್ತಿದ್ದ ಬಸ್ ಪಲ್ಟಿಯಾಗಿ, ನಂತರ ಕಣಿವೆಗೆ ಬಿದ್ದಿದೆ. ಘಟನೆಯಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಇಸ್ಲಾಮಾಬಾದ್‌ನಿಂದ ಲಾಹೋರ್‌ಗೆ ಪ್ರಯಾಣಿಸುತ್ತಿದ್ದ ಬಸ್, ಲಾಹೋರ್‌ನಿಂದ 240 ಕಿಮೀ ದೂರದಲ್ಲಿರುವ ಕಲ್ಲರ್ ಕಹಾರ್ ಸಾಲ್ಟ್ ರೇಂಜ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಪಲ್ಟಿಯಾಗಿದೆ.

ಬಸ್ ಪಲ್ಟಿಯಾಗುವ ಮುನ್ನ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ರಕ್ಷಣಾ 1122 ಅಧಿಕಾರಿ ಮುಹಮ್ಮದ್ ಫಾರೂಕ್ ಸೋಮವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಬಸ್‌ನಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಜನರಿದ್ದರು.

ಬ್ರೇಕ್ ವೈಫಲ್ಯ ಆಗಿದ್ದೇ ಅಪಘಾತಕ್ಕೆ ಕಾರಣ ಎಂದು ರಕ್ಷಣಾ 1122 ತುರ್ತು ಸೇವೆಯು ಆರೋಪಿಸಿದೆ.

ಬಸ್‌ ಅನ್ನು ಕತ್ತರಿಸುವ ಮೂಲಕ ಸತ್ತ ಮತ್ತು ಅನೇಕ ಗಾಯಗೊಂಡವರನ್ನು ಹೊರತೆಗೆಯಬೇಕಾಯಿತು. ಗಾಯಾಳುಗಳನ್ನು ಅವಳಿ ನಗರಗಳಾದ ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಅವರಲ್ಲಿ 11 ಜನರ ಸ್ಥಿತಿ ಗಂಭೀರವಾಗಿದೆ. ಸತ್ತವರಲ್ಲಿ ಆರು ಮಹಿಳೆಯರು ಎಂದು ಫಾರೂಕ್ ಹೇಳಿದರು.

ಅಪಘಾತದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ವಿಷಾದ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಾಕಿಸ್ತಾನದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ ಮತ್ತು ಮುಖ್ಯವಾಗಿ ಕಳಪೆ ರಸ್ತೆಗಳು, ಕಳಪೆ ನಿರ್ವಹಣೆಯ ವಾಹನಗಳು ಮತ್ತು ವೃತ್ತಿಪರವಲ್ಲದ ಚಾಲನೆಯಿಂದ ಅಪಘಾತಗಳು ಉಂಟಾಗುತ್ತವೆ.

ಕಳೆದ ತಿಂಗಳು, ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ಪ್ಯಾಸೆಂಜರ್ ಕೋಚ್ ಕಂದರಕ್ಕೆ ಬಿದ್ದು ಕನಿಷ್ಠ 41 ಜನರು ಮೃತಪಟ್ಟಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, 2018 ರಲ್ಲಿ ಪಾಕಿಸ್ತಾನದ ರಸ್ತೆ ಅಪಘಾತಗಳಲ್ಲಿ 27,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT