ಚೀನಾ- ತೈವಾನ್ 
ವಿದೇಶ

ಕೋವಿಡ್ ವೈರಾಣುವಿಂದ ಹೈರಾಣು: ಯುದ್ಧ ಮಾಡ್ತೀನಿ ಅಂತಿದ್ದ ಚೀನಾಗೆ ನೆರವಿನ ಹಸ್ತ ಚಾಚಿದ ತೈವಾನ್! 

ಕೋವಿಡ್-19 ಸೋಂಕಿನಿಂದ ನಲುಗುತ್ತಿರುವ ಚೀನಾ ಏಕಾ ಏಕಿ ತನ್ನ ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟ ಬೆನ್ನಲ್ಲೇ  ತೈವಾನ್ ತನ್ನ ಶತ್ರುರಾಷ್ಟ್ರದಂತಿರುವ ಚೀನಾಗೆ ನೆರವಿನ ಹಸ್ತ ಚಾಚಿದೆ. 

ತೈವಾನ್: ಕೋವಿಡ್-19 ಸೋಂಕಿನಿಂದ ನಲುಗುತ್ತಿರುವ ಚೀನಾ ಏಕಾ ಏಕಿ ತನ್ನ ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟ ಬೆನ್ನಲ್ಲೇ  ತೈವಾನ್ ತನ್ನ ಶತ್ರುರಾಷ್ಟ್ರದಂತಿರುವ ಚೀನಾಗೆ ನೆರವಿನ ಹಸ್ತ ಚಾಚಿದೆ. 

ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ತೈವಾನ್ ಚೀನಾಗೆ  ನೆರವು ನೀಡಲು ಸಿದ್ಧ ಎಂದು ತೈವಾನ್ ನ ಅಧ್ಯಕ್ಷ್ಯೆ ತ್ಸೈ ಇಂಗ್-ವೆನ್ ಘೋಷಿಸಿದ್ದು, "ಮಾನವೀಯ ಆಧಾರದಲ್ಲಿ ಚೀನಾಗೆ ನಾವು ಅಗತ್ಯ ನೆರವು ನೀಡಲು ಬಯಸುತ್ತಿದ್ದೇವೆ, ಈ ಮೂಲಕ ಹೆಚ್ಚು ಜನರು ಪ್ಯಾಂಡಮಿಕ್ ನಿಂದ ಹೊರಬಂದು ಹೊಸ ವರ್ಷವನ್ನು  ಆರೋಗ್ಯಕರ, ಶಾಂತಿಯುತವಾಗಿ ಬದುಕಬಹುದು ಎಂದು ತ್ಸೈ ಹೇಳಿದ್ದಾರೆ.

ತ್ಸೈ ನೆರವು ನೀಡುವಿದಾಗಿಯೇನೋ ಹೇಳಿದ್ದಾರೆ, ಆದರೆ ಚೀನಾಗೆ ತೈವಾನ್ ನೀಡಲು ಬಯಸುತ್ತಿರುವುದು ಎಂತಹ ನೆರವು ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. 

ಚೀನಾ ಕೋವಿಡ್ ಸೋಂಕಿನಿಂದ ಈಗಾಗಲೇ ಸಾಕಷ್ಟು ನಲುಗಿದೆ. ಅಲ್ಲಿನ ಆರೋಗ್ಯ ವ್ಯವಸ್ಥೆ ಕುಸಿಯತೊಡಗಿದ್ದು, ಔಷಧಗಳ ಕೊರತೆ ಉಂಟಾಗಿದೆ. ಇಷ್ಟೆಲ್ಲದರ ನಡುವೆ ಚೀನಾ ತನ್ನಲ್ಲಿಗೆ ಬರುವ ವಿದೇಶಿಗರಿಗೆ ಕ್ವಾರಂಟೈನ್ ನಿಯಮಗಳನ್ನು ಸಡಿಲಿಸಿದೆ ಹಾಗೂ ಜ.08 ರಿಂದ ತನ್ನಲ್ಲಿಂದ ವಿದೇಶಗಳಿಗೆ ಹೋಗುವವರಿಗೆ ಅವಕಾಶವನ್ನೂ ಕಲ್ಪಿಸಲಿದೆ. ಒಂದು ಅಂದಾಜಿನ ಪ್ರಕಾರ ಚೀನಾದಲ್ಲಿ ದಿನವೊಂದಕ್ಕೆ 9,000 ಮಂದಿ ಸಾವನ್ನಪ್ಪುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್