ವಿದೇಶ

ಪ್ಯಾರಿಸ್: ಭಾರತ ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗುವತ್ತ ಕಾರ್ಯೋನ್ಮುಖ- ಪ್ರಧಾನಿ ಮೋದಿ

Nagaraja AB

ಪ್ಯಾರಿಸ್: ಭಾರತ ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗುತ್ತ ಕಾರ್ಯೋನ್ಮುಖವಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲಿನ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತ ಪ್ರತಿಭಾವಂತರ ನೆಲೆಯಾಗಿದೆ ಎಂದು ಅಂತಾರಾಷ್ಟ್ರೀಯ ಏಜೆನ್ಸಿಗಳು ಹೇಳುತ್ತಿವೆ. ಭಾರತ ಹೂಡಿಕೆಗೆ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ. ವಿದೇಶದಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ಸೌಲಭ್ಯಗಳು ಮತ್ತು ಸುರಕ್ಷತೆಯನ್ನು ಒದಗಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದರು.

ಉಕ್ರೇನ್ ಅಥವಾ ಸುಡಾನ್ ಆಗಿರಲಿ, ಅಫ್ಘಾನಿಸ್ತಾನ ಅಥವಾ ಇರಾಕ್ ಆಗಿರಲಿ, ನಮ್ಮ ದೇಶವಾಸಿಗಳನ್ನು ರಕ್ಷಿಸಲು  ಯಾವಾಗಲೂ ಮುಂದೆ ಬಂದಿದ್ದೇವೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರು  ಭಾರತದ ನಾಗರಿಕರಂತೆ ನಮಗೆ ಯಾವಾಗಲೂ ಮುಖ್ಯ ಎಂದ ಪ್ರಧಾನಿ, ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ 5 ವರ್ಷಗಳ ದೀರ್ಘಾವಧಿಯ ಅಧ್ಯಯನ ವೀಸಾ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಫ್ರಾನ್ಸ್‌ನಲ್ಲಿ ಯುಪಿಐ ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. ಮುಂಬರುವ ದಿನಗಳಲ್ಲಿ, ಇದು ಐಫೆಲ್ ಟವರ್‌ನಿಂದ ಪ್ರಾರಂಭವಾಗುತ್ತದೆ ಅಂದರೆ ಭಾರತೀಯ ಪ್ರವಾಸಿಗರು ರೂಪಾಯಿಗಳಲ್ಲಿ ಪಾವತಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ತಿಳಿಸಿದರು.

SCROLL FOR NEXT