ಎಡವಿ ಬಿದ್ದ ಅಮೆರಿಕಾ ಅಧ್ಯಕ್ಷರನ್ನು ಮೇಲಕ್ಕೆತ್ತಿದ ಭದ್ರತಾ ಪಡೆಗಳು. 
ವಿದೇಶ

ಮತ್ತೆ ಮುಗ್ಗರಿಸಿ ಬಿದ್ದ ಅಮೆರಿಕಾ ಅಧ್ಯಕ್ಷ ಜೋ ಬೈಡನ್: ವಿಡಿಯೋ ವೈರಲ್

ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಅಮೆರಿಕಾ ಅಧ್ಯಕ್ಷ ಎಡವಿ ಬಿದ್ದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಅಮೆರಿಕಾ ಅಧ್ಯಕ್ಷ ಎಡವಿ ಬಿದ್ದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಯುಎಸ್ ಏರ್‌ಫೋರ್ಸ್ ಅಕಾಡೆಮಿ ಪದವಿ ಸಮಾರಂಭದಲ್ಲಿ ವೇದಿಕೆಯ ಮೇಲೆ ಜೋ ಬೈಡನ್ ಅವರು ಮುಗ್ಗರಿಸಿ ಬಿದ್ದಿದ್ದಾರೆ.

90 ನಿಮಿಷಗಳ ಕಾಲ ಕೆಡೆಟ್‌ಗಳನ್ನು ಅಭಿನಂದಿಸಿ ಪ್ರಮಾಣಪತ್ರಗಳನ್ನು ವಿತರಿಸಿದ ನಂತರ ಅವರು ತಮ್ಮ ಆಸನಕ್ಕೆ ತೆರಳುತ್ತಿದ್ದರು. ಆದರೆ, ಈ ವೇಳೆ ಸಮತೋಲನ ಕಳೆದುಕೊಂಡು ನೆಲಕ್ಕೆ ಬಿದ್ದಿದ್ದಾರೆ.

80 ವರ್ಷ ವಯಸ್ಸಿನ ಬೈಡನ್ ದೇಶದ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದುಸ ಕೆಡೆಟ್‌ನೊಂದಿಗೆ ಕೈಕುಲುಕಿದ ನಂತರ ಬೈಡನ್ ಕುಸಿದುಬಿದ್ದರು, ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಭಾಷಣ ಮಾಡಿದ ನಂತರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೆಡೆಟ್‌ಗಳೊಂದಿಗೆ ಹಸ್ತಲಾಘವ ಮಾಡಿದರು. ಬಳಿಕ ತಮ್ಮ ಆಸನಕ್ಕೆ ತೆರಳುತ್ತಿದ್ದಾಗ ಎಡವಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಭದ್ರತಾ ಪಡೆಗಳು ಅವರನ್ನು ಮೇಲಕ್ಕೆತ್ತಿದರು. ಈ ವೇಳೆ ಭದ್ರತಾ ಪಡೆಗಳಿಗೆ ಬೆರಳು ತೋರಿ ಆ ವಸ್ತುವಿನಿಂದ ಕೆಳಗೆ ಬಿದ್ದಿರುವುದಾಗಿ ಹೇಳಿದರು. ವೇದಿಕೆಯ ಮೇಲೆ ಸಣ್ಣ ಕಪ್ಪು ಮರಳಿನ ಚೀಲವನ್ನು ಹಾಕಲಾಗಿತ್ತು. ಇದರಿಂದಲೇ ಮುಗ್ಗರಿಸಿ ಬಿದ್ದರು ಎಂದು ಹೇಳಲಾಗುತ್ತಿದೆ.

80 ವರ್ಷದ ಬೈಡನ್​ ದೇಶದ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದು, ಈ ರೀತಿ ಮುಗ್ಗರಿಸಿ ಬೀಳುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿ, ಬಿಡೆನ್ ತನ್ನ ಸಾಕು ನಾಯಿಯೊಂದಿಗೆ ಆಟವಾಡುವಾಗ ಬಿದ್ದು ಕಾಲು ಮುರಿದುಕೊಂಡಿದ್ದರು.

ಅದಾದ ಬಳಿಕ ಏರ್​ಫೋರ್ಸ್​ ಒನ್ ವಿಮಾನ ಏರುವ ಸಂದರ್ಭದಲ್ಲಿ ಎಡವಿ ಬೀಳುವಂತಾದ ಘಟನೆ ನಡೆದಿತ್ತು. ಪೋಲೆಂಡ್​ಗೆ ತೆರಳುವ ನಿಟ್ಟಿನಲ್ಲಿ ಬೈಡನ್ ವಿಮಾನವೇರುತ್ತಿದ್ದರು, ಅದರ ವಿಡಿಯೋ ವೈರಲ್ ಆಗಿತ್ತು.

ಎರಡು ವಾರಗಳ ಅವಧಿಯಲ್ಲಿ ಅಮೆರಿಕ ಅಧ್ಯಕ್ಷರಿಗೆ ಲಾಸ್​ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಅನುಭವ ಉಂಟಾಗಿತ್ತು.

ಈ ಘಟನೆಯ ಬಳಿಕ ಶ್ವೇತಭವನಕ್ಕೆ ಅವರು ತೆರಳಿದ್ದಾರೆ. "ಅಧ್ಯಕ್ಷರು ಚೆನ್ನಾಗಿದ್ದಾರೆ" ಎಂದು ಶ್ವೇತಭವನದ ಸಂವಹನ ನಿರ್ದೇಶಕ ಬೆನ್ ಲಾಬೋಲ್ಟ್ ಟ್ವೀಟ್ ಮಾಡಿದ್ದಾರೆ. ವೇದಿಕೆಯ ಮೇಲೆ ಸ್ಪೀಕರ್‌ಗಳು ಬಳಸುವ ಟೆಲಿಪ್ರೊಂಪ್ಟರ್​ ಆಧಾರವಾಗಿ ಮರಳಿನ ಚೀಲವನ್ನು ಇರಿಸಲಾಗಿತ್ತು. ಅದು ತಾಗಿ ಎಡವಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT