ಬಿಸಿಲಿನ ಝಳಕ್ಕೆ ತಲೆ ತಿರುಗಿ ಬಿದ್ದ ಯೋಧ 
ವಿದೇಶ

ಲಂಡನ್: ಬಿಸಿಲಿನ ಝಳಕ್ಕೆ ಪ್ರಿನ್ಸ್ ವಿಲಿಯಮ್ಸ್ ಮುಂದೆಯೇ ಕುಸಿದು ಬಿದ್ದ ಬ್ರಿಟೀಷ್ ರಾಯಲ್ ಯೋಧ!

ಬ್ರಿಟನ್ ನಲ್ಲಿ ಬಿಸಿಲಿನ ಝಳ ತಾರಕಕ್ಕೇರಿದ್ದು, ಪ್ರಿನ್ಸ್ ವಿಲಿಯಮ್ಸ್ ಗೌರವಾರ್ಥ ಪರೇಡ್ ನಲ್ಲಿದ್ದಾಗಲೇ ರಾಯಲ್ ಯೋಧನೋರ್ವ ತಲೆತಿರುಗಿ ನೆಲಕ್ಕೆ ಬಿದ್ದ ಘಟನೆ ನಡೆದಿದೆ.

ಲಂಡನ್: ಬ್ರಿಟನ್ ನಲ್ಲಿ ಬಿಸಿಲಿನ ಝಳ ತಾರಕಕ್ಕೇರಿದ್ದು, ಪ್ರಿನ್ಸ್ ವಿಲಿಯಮ್ಸ್ ಗೌರವಾರ್ಥ ಪರೇಡ್ ನಲ್ಲಿದ್ದಾಗಲೇ ರಾಯಲ್ ಯೋಧನೋರ್ವ ತಲೆತಿರುಗಿ ನೆಲಕ್ಕೆ ಬಿದ್ದ ಘಟನೆ ನಡೆದಿದೆ.

ಹೌದು.. ಬಿಸಿಲಿನ  ತಾಪದ ನಡುವೆ  ಮಾರ್ಚಿಂಗ್ ಮಾಡುತ್ತಿದ್ದ ಬ್ರಿಟಿಷ್ ಸೈನಿಕರು ಪ್ರಿನ್ಸ್ ವಿಲಿಯಂನ ಮುಂದೆಯೇ ಮೂರ್ಛೆ ಹೋದ ಘಟನೆ ನಡೆದಿದ್ದು, ಸುಮಾರು 30 ಡಿಗ್ರಿ ಸೆಲ್ಸಿಯಸ್ ಲಂಡನ್ ಶಾಖವನ್ನು ತಡೆದುಕೊಳ್ಳಲಾಗದೇ ಸೈನಿಕರು ತಲೆ ತಿರುಗಿ ಬೀಳುತ್ತಿರುವ ವೀಡಿಯೋಗಳು ಇದೀಗ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಪ್ರಜ್ಞೆ ತಪ್ಪಿ ಯೋಧನೋರ್ವ ಕೆಳಗೆ ಬಿದ್ದಿದ್ದು, ಈ ವೇಳೆ ಆತನನ್ನು ಮೇಲೆತ್ತಲು ಸ್ಟ್ರೆಚರ್ ತೆಗೆದುಕೊಂಡು ಬಂದು ಆತನನ್ನು ಮೇಲೇಳಿಸುತ್ತಾರೆ. ಆದರೆ ಕೂಡಲೇ ಎದ್ದು ನಿಂತ ಆತ ಮತ್ತೆ ತನ್ನ ಕರ್ತವ್ಯ ನಿಭಾಯಿಸಲು ಮುಂದಾಗುತ್ತಾನೆ. ಆದರೆ ಆತನಿಗೆ ಮತ್ತೆ ಪ್ರಜ್ಞೆ ತಪ್ಪಿದ್ದು, ಆತನನ್ನು ಅಲ್ಲಿಂದ ಕರೆದೊಯ್ಯಲಾಗುತ್ತದೆ.

ಸೈನಿಕರು ಉಣ್ಣೆಯ ಟವೆಲ್ ಮತ್ತು ಕರಡಿ ಚರ್ಮದ ಟೋಪಿಗಳನ್ನು(bearskin hats) ಧರಿಸುವುದರಿಂದ ಇವು ಬಿಸಿಲಿನ ತಾಪದ ಜೊತೆದೇಹದ ಉಷ್ಣತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಪರಿಣಾಮ ಯೋಧರು ಮೆರವಣಿಗೆ ಮಧ್ಯೆಯೇ ತಲೆ ತಿರುಗಿ ಬೀಳುತ್ತಿದ್ದಾರೆ. ಶನಿವಾರ ಒಂದೇ ದಿನ 3 ಸೈನಿಕರು ಈ ರೀತಿ ತಲೆ ಸುತ್ತಿ ಬಿದ್ದಿದ್ದಾರೆ ಎಂದು ವರದಿಯಾಗಿದೆ.

ಶನಿವಾರ ವಾರ್ಷಿಕ ಟ್ರೂಪಿಂಗ್ ದಿ ಕಲರ್ ಪರೇಡ್‌ಗಾಗಿ ಪ್ರಿನ್ಸ್ ವಿಲಿಯಂ ಅವರ ಮುಂದೆ ಸೈನಿಕರು ಅಂತಿಮ ಪೂರ್ವಾಭ್ಯಾಸ ನೀಡುತ್ತಿದ್ದಾಗ ಈ ಘಟನೆ ನಡೆದಿದೆ.  ಈ ವೇಳೆ ಸುಮಾರು 30 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಇದರೊಂದಿಗೆ ಸೈನಿಕರು ಉಣ್ಣೆಯ ಬಟ್ಟೆ ಮತ್ತು ಕರಡಿ ಚರ್ಮದ ಟೋಪಿಗಳನ್ನು ಧರಿಸಿದ್ದರು. ಶನಿವಾರದಂದು ಲಂಡನ್‌ನಲ್ಲಿ ತಾಪಮಾನವು 30 C ಗೆ ತಲುಪಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಬ್ರಿಟನ್ ಪ್ರಿನ್ಸ್ (Prince William) ಟ್ವಿಟ್ ಮಾಡಿದ್ದು, ಇಂದು ಬೆಳಗ್ಗೆ ಶಾಖದ ನಡುವೆಯೂ ಈ ಪರೇಡ್‌ನಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಸೈನಿಕನಿಗೆ ದೊಡ್ಡ ಧನ್ಯವಾದಗಳು. ಇದೊಂದು ಕಷ್ಟದ ಪರಿಸ್ಥಿತಿಯಾಗಿದ್ದರೂ ನೀವೆಲ್ಲರೂ ನಿಜವಾಗಿಯೂ ಉತ್ತಮ ಕೆಲಸ ಮಾಡಿದ್ದೀರಿ. ಧನ್ಯವಾದಗಳು.. ಎಂದು ಪ್ರಿನ್ಸ್ ವಿಲಿಯಂ ಟ್ವಿಟ್ ಮಾಡಿದ್ದಾರೆ. ಮುಂದುವರೆದು ಮತ್ತೊಂದು ಟ್ವಿಟ್ ಮಾಡಿದ್ದು, ಇವತ್ತಿನ ಈ ಕಠಿಣ ಪರಿಸ್ಥಿತಿಯ ಮಧ್ಯೆಯೂ ಇಂತಹದೊಂದು ಕಾರ್ಯಕ್ರಮವಾಗಲೂ ಅಭ್ಯಾಸದಲ್ಲಿ ಭಾಗವಹಿಸಿದ ಎಲ್ಲರಿಗೂ ಈ ಕಾರ್ಯಕ್ರಮದ ಕ್ರೆಡಿಟ್ ಹೋಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT