ವಿದೇಶ

ಅಮೆರಿಕಾ ಅಧ್ಯಕ್ಷ ಬೈಡನ್ ಪುತ್ರನ ವಿರುದ್ಧ ತೆರಿಗೆ, ಶಸ್ತ್ರಾಸ್ತ್ರ ಅಕ್ರಮ ಆರೋಪ

Srinivas Rao BV

ವಾಷಿಂಗ್ ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಪುತ್ರನ ವಿರುದ್ಧ ತೆರಿಗೆ ಶಸ್ತ್ರಾಸ್ತ್ರ ಅಕ್ರಮ ಆರೋಪ ಕೇಳಿಬಂದಿದೆ. 

ಬೈಡನ್ ಎರಡನೇ ಪುತ್ರ ಹಂಟರ್ ವಿರುದ್ಧ ಫೆಡರಲ್ ಆದಾಯ ತೆರಿಗೆ ಪಾವತಿಸಲು ವಿಫಲವಾಗಿರುವ ಆರೋಪ ಹಾಗೂ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆರೋಪವೂ ಕೇಳಿಬಂದಿರುವುದನ್ನು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಆದರೆ ಡೆಲವೇರ್ ನಲ್ಲಿರುವ ಅಮೇರಿಕಾ ಜಿಲ್ಲಾ ಕೋರ್ಟ್ ಗೆ ಸಲ್ಲಿಕೆ ಮಾಡಲಾಗಿರುವ ಪತ್ರದ ಪ್ರಕಾರ ಜ್ಯೂನಿಯರ್ ಬೈಡನ್ ನ್ಯಾಯಾಂಗ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಂಟರ್ ಬೈಡನ್ ನ್ನು ತೆರಿಗೆ ಅಪರಾಧಗಳ ದುಷ್ಕೃತ್ಯಗಳಿಗೆ ತಪ್ಪಿತಸ್ಥನೆಂದು ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಾದಕವಸ್ತು ಬಳಕೆದಾರನಾಗಿ ಅಕ್ರಮವಾಗಿ ಬಂದೂಕು ಹೊಂದಿರುವ ಆರೋಪದ ಮೇಲೆ, ಅವರು ಇನ್ನೂ ತಪ್ಪು ಒಪ್ಪಿಕೊಂಡಿಲ್ಲ.

ಪ್ರಧಾನಿ ನರೇಂದ್ರ ಮೋದಿ ಪ್ರವಾಸಕ್ಕಾಗಿ ಯುಎಸ್‌ಗೆ ತೆರಳುತ್ತಿರುವುದರ ನಡುವೆ ಈ ಸುದ್ದಿ ಬಂದಿದೆ. ಪ್ರಧಾನಿ ಮೋದಿಗೆ ಬಿಡೆನ್ಸ್‌ನಿಂದ ಆತಿಥ್ಯ ನೀಡಲಿದ್ದಾರೆ.

SCROLL FOR NEXT