ಪಿಎಂ ನರೇಂದ್ರ ಮೋದಿ 
ವಿದೇಶ

ಭಾರತ ಬಲಿಷ್ಠವಾದರೆ ಜಗತ್ತಿನ ಬೇರೆ ದೇಶಗಳಿಗೆ ಲಾಭವಿದೆ: ವಾಷಿಂಗ್ಟನ್ ಡಿಸಿಯಲ್ಲಿ ಉದ್ಯಮಿಗಳನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

ಭಾರತ ಮತ್ತು ಅಮೆರಿಕ ಸರ್ಕಾರಗಳು ಉಭಯ ದೇಶಗಳ ವ್ಯಾಪಾರ ಸಮುದಾಯಕ್ಕೆ ತಳಹದಿಯನ್ನು ಮಾಡಿವೆ. ಈಗ ಇದರ ಲಾಭವನ್ನು ಪಡೆದುಕೊಳ್ಳುವುದು, ಪ್ರಚಾರ ಮಾಡುವುದು ಕಾರ್ಪೊರೇಟ್ ವಲಯದ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾಷಿಂಗ್ಟನ್ ಡಿಸಿ: ಭಾರತ ಮತ್ತು ಅಮೆರಿಕ ಸರ್ಕಾರಗಳು ಉಭಯ ದೇಶಗಳ ವ್ಯಾಪಾರ ಸಮುದಾಯಕ್ಕೆ ತಳಹದಿಯನ್ನು ಮಾಡಿವೆ. ಈಗ ಇದರ ಲಾಭವನ್ನು ಪಡೆದುಕೊಳ್ಳುವುದು, ಪ್ರಚಾರ ಮಾಡುವುದು ಕಾರ್ಪೊರೇಟ್ ವಲಯದ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಿನ್ನೆ ಶುಕ್ರವಾರ ವಾಷಿಂಗ್ಟನ್, DC ಯ ಕೆನಡಿ ಸೆಂಟರ್‌ನಲ್ಲಿ ಭಾರತ ಮತ್ತು ಯುಎಸ್‌ನ ಉದ್ಯಮ ವಲಯದ ಪ್ರಮುಖರು ಮತ್ತು ಸಮಾಜಮುಖಿ ಕೆಲಸ ಮಾಡುವ ಗಣ್ಯರು ಹಾಗೂ ಭಾರತೀಯ-ಅಮೆರಿಕನ್ ಸಮುದಾಯದ ಇತರ ಪ್ರಮುಖ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ-ಯುಎಸ್ ಪಾಲುದಾರಿಕೆ ಕೇವಲ ಅನುಕೂಲಕರವಾಗಿಯಲ್ಲ, ಇಲ್ಲಿ ಎರಡೂ ದೇಶಗಳ ನಡುವೆ ಪರಸ್ಪರ ಮನವರಿತೆ, ಬದ್ಧತೆ ಮತ್ತು ಸಹಾನುಭೂತಿಯಿದೆ ಎಂದರು.  

ಕಳೆದ ಮೂರು ದಿನಗಳ ಅಮೆರಿಕ ಭೇಟಿಯಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಹಲವು ಐತಿಹಾಸಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಕ್ಷಣೆಯಿಂದ ವಾಯುಯಾನ, ಉತ್ಪಾದನೆಗೆ ಅನ್ವಯಿಕ ಸಾಮಗ್ರಿಗಳು ಮತ್ತು ಐಟಿ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತ ಮತ್ತು ಯುಎಸ್ ಈಗ ಅತ್ಯಂತ ವಿಶ್ವಾಸಾರ್ಹ ಪಾಲುದಾರರಾಗಿ ಮುನ್ನಡೆಯುತ್ತಿವೆ ಎಂದು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಸಹಭಾಗಿತ್ವ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು. 

ಉದ್ಯಮಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದೆ ಸಾಗಬೇಕು ಎಂದು ಮನವಿ ಮಾಡಿದರು. ಭಾರತದ ಪ್ರತಿಯೊಂದು ಅಭಿವೃದ್ಧಿ ಯೋಜನೆಯು ಅಮೆರಿಕದ ಕನಸನ್ನು ಮತ್ತಷ್ಟು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ, ಭಾರತವು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದಾಖಲೆಯ 125 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ಉಲ್ಲೇಖಿಸಿದರು.

ಶ್ವೇತಭವನದಲ್ಲಿ ನಡೆದ ಭಾರತ-ಅಮೆರಿಕ ತಾಂತ್ರಿಕ ಸಭೆಯು ಕಂಪನಿಗಳು, ವ್ಯವಹಾರಗಳು, ತಯಾರಕರು ಮತ್ತು ನವೋದ್ಯಮಿಗಳಿಗೆ ಹಲವು ಸಂದೇಶಗಳನ್ನು ಕಳುಹಿಸಿದೆ. ಭಾರತವು ಬಲಿಷ್ಠಗೊಂಡಾಗಲೆಲ್ಲಾ ಜಗತ್ತಿಗೆ ಪ್ರಯೋಜನವಾಗಿದೆ ಎಂದು ಪ್ರತಿಪಾದಿಸಿದ ಪ್ರಧಾನಿ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜಗತ್ತಿಗೆ ಔಷಧಿಗಳ ಅಗತ್ಯವಿದ್ದಾಗ ಭಾರತವು ತನ್ನ ಉತ್ಪಾದನೆಯನ್ನು ಹೆಚ್ಚಿಸಿ ಔಷಧಿಗಳನ್ನು ಒದಗಿಸಿದೆ ಎಂದರು.

ಭಾರತದ ಯಶಸ್ಸಿನ ಆಧಾರ ಮತ್ತು ಅದರ ಅಭಿವೃದ್ಧಿಯ ಅತಿದೊಡ್ಡ ಪ್ರೇರಕ ಶಕ್ತಿ ಅದರ ಜನರ ಆಕಾಂಕ್ಷೆಯಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ, ಅಮೇರಿಕಾದ ಕಂಪನಿಗಳು ಭಾರತದಲ್ಲಿ 16 ಶತಕೋಟಿ ಡಾಲರ್ ಗಿಂತ ಹೆಚ್ಚು ಹೂಡಿಕೆ ಮಾಡಿವೆ ಎಂದು ಹೇಳಿದರು.

"ನಾವು ವಿತ್ತೀಯ ಕೊರತೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಿದ್ದೇವೆ. ನಮ್ಮ ರಫ್ತು ಹೆಚ್ಚುತ್ತಿದೆ, ನಮ್ಮ ವಿದೇಶೀ ವಿನಿಮಯ ಹೆಚ್ಚುತ್ತಿದೆ. ಎಫ್‌ಡಿಐನಲ್ಲಿ ಹೊಸ ದಾಖಲೆಗಳನ್ನು ರಚಿಸಲಾಗುತ್ತಿದೆ ಎಂದು ಮೋದಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT