ರಷ್ಯಾದಲ್ಲಿ ಭುಗಿಲೆದ್ದ ಆಂತರಿಕ ದಂಗೆ 
ವಿದೇಶ

ರಷ್ಯಾ: ಭುಗಿಲೆದ್ದ ಆಂತರಿಕ ದಂಗೆ; ಖಾಸಗಿ ಸೇನೆ ವ್ಯಾಗ್ನರ್ ಮುತ್ತಿಗೆ; ರಾಷ್ಟ್ರವನ್ನು ರಕ್ಷಿಸಿಯೇ ತೀರುತ್ತೇವೆ ಎಂದ ಪುಟಿನ್

ರಷ್ಯಾದಲ್ಲಿ ಆಂತರಿಕ ದಂಗೆ ಭುಗಿಲೆದ್ದಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರ ಪರಮಾಪ್ತ ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಷ್ಯಾ ನಗರಗಳಿಗೆ ಮುತ್ತಿಗೆ ಹಾಕಿದ್ದು, ರಷ್ಯಾವನ್ನು ರಕ್ಷಿಸಿಯೇ ತೀರುತ್ತೇವೆ ಎಂದು ಪುಟಿನ್ ಪ್ರತಿಜ್ಞೆ ಮಾಡಿದ್ದಾರೆ.

ಮಾಸ್ಕೋ: ರಷ್ಯಾದಲ್ಲಿ ಆಂತರಿಕ ದಂಗೆ ಭುಗಿಲೆದ್ದಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರ ಪರಮಾಪ್ತ ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಷ್ಯಾ ನಗರಗಳಿಗೆ ಮುತ್ತಿಗೆ ಹಾಕಿದ್ದು, ರಷ್ಯಾವನ್ನು ರಕ್ಷಿಸಿಯೇ ತೀರುತ್ತೇವೆ ಎಂದು ಪುಟಿನ್ ಪ್ರತಿಜ್ಞೆ ಮಾಡಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶನಿವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು, ಖಾಸಗಿ ಸೇನೆ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಅವರು ಘೋಷಿಸಿದ ಸಶಸ್ತ್ರ ದಂಗೆಯಿಂದ ದೇಶ ಮತ್ತು ಅದರ ಜನರನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ದಂಗೆಯು "ನಮ್ಮ ರಾಜ್ಯತ್ವಕ್ಕೆ ಮಾರಕ ಬೆದರಿಕೆ" ಎಂದು ಪುಟಿನ್ ಹೇಳಿದ್ದು, ಪ್ರತಿಕ್ರಿಯೆಯಾಗಿ "ಕಠಿಣ ಕ್ರಮ' ಜರುಗಿಸುವುದಾಗಿ ಪ್ರತಿಜ್ಞೆ ಮಾಡಿದರು. 

ಅಂತೆಯೇ ಈ “ದಂಗೆಯನ್ನು ಸಿದ್ಧಪಡಿಸಿದವರೆಲ್ಲರೂ ಅನಿವಾರ್ಯ ಶಿಕ್ಷೆಯನ್ನು ಅನುಭವಿಸುತ್ತಾರೆ. ಸಶಸ್ತ್ರ ಪಡೆಗಳು ಮತ್ತು ಇತರ ಸರ್ಕಾರಿ ಏಜೆನ್ಸಿಗಳು ಅಗತ್ಯ ಆದೇಶಗಳನ್ನು ಸ್ವೀಕರಿಸಿವೆ. ವ್ಯಾಗ್ನರ್ ಖಾಸಗಿ ಮಿಲಿಟರಿ ಕಂಪನಿಯ ಮಾಲೀಕರನ್ನು "ದ್ರೋಹಿ" ಮತ್ತು "ದೇಶದ್ರೋಹಿ" ಎಂದು ಕರೆದ ಪುಟಿನ್, ಪ್ರಿಗೋಜಿನ್ ಅವರ ಹೆಸರು ಹೇಳದೇ ಅವರ ವಿರುದ್ಧ ಕ್ರಮಗಳನ್ನು ಜರುಗಿಸುವುದಾಗಿ ಹೇಳಿದರು. ಅಂತೆಯೇ "ಈ ಅಪರಾಧಕ್ಕೆ ಎಳೆಯಲ್ಪಡುವವರು ಮಾರಣಾಂತಿಕ ಮತ್ತು ದುರಂತ, ಅನನ್ಯ ತಪ್ಪನ್ನು ಮಾಡಬಾರದು ಎಂದು ಅವರು ಒತ್ತಾಯಿಸಿದರು. ಅಲ್ಲದೆ ಶೀಘ್ರ ಸರಿಯಾದ ನಿರ್ಧಾರಕ್ಕೆ ಬನ್ನಿ... ಇಲ್ಲವಾದಲ್ಲಿ ನಿಮಗೆ ನಿರ್ಧಾರ ಮಾಡಲೂ ಕೂಡ ಸಮಯ ಇರುವುದಿಲ್ಲ.. ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ ಎಂದು ಪುಟಿನ್ ನೇರ ಎಚ್ಚರಿಕೆ ನೀಡಿದರು.

"ಪಶ್ಚಿಮ ದೇಶಗಳ ಸಂಪೂರ್ಣ ಮಿಲಿಟರಿ, ಆರ್ಥಿಕ ಮತ್ತು ಮಾಹಿತಿ ಯಂತ್ರವನ್ನು ನಮ್ಮ ವಿರುದ್ಧ ನಡೆಸಲಾಗಿದೆ. ಈ ಯುದ್ಧ, ನಮ್ಮ ಜನರ ಭವಿಷ್ಯವನ್ನು ನಿರ್ಧರಿಸುವಾಗ, ಎಲ್ಲಾ ಶಕ್ತಿಗಳ ಏಕೀಕರಣ, ಏಕತೆ, ಬಲವರ್ಧನೆ ಮತ್ತು ಜವಾಬ್ದಾರಿಯ ಅಗತ್ಯವಿರುತ್ತದೆ. ಅಂತಹ ಸಮಯದಲ್ಲಿ ಸಶಸ್ತ್ರ ದಂಗೆಯು "ರಷ್ಯಾಕ್ಕೆ, ಅದರ ಜನರಿಗೆ ಒಂದು ದೊಡ್ಡ ಹೊಡೆತವಾಗಿದೆ. ಸಶಸ್ತ್ರ ದಂಗೆಯನ್ನು ಸಂಚು ರೂಪಿಸಿದ ಮತ್ತು ಸಂಘಟಿಸಿದವರು, ತಮ್ಮ ಒಡನಾಡಿಗಳ ವಿರುದ್ಧ ಶಸ್ತ್ರಾಸ್ತ್ರಗಳನ್ನು ಎತ್ತಿದವರು ರಷ್ಯಾಕ್ಕೆ ದ್ರೋಹ ಮಾಡಿದರು ಅವರು ಅದಕ್ಕೆ ಉತ್ತರಿಸುತ್ತಾರೆ. ಉಕ್ರೇನ್‌ನಲ್ಲಿ ತನ್ನ ಯುದ್ಧದೊಂದಿಗೆ ರಷ್ಯಾ "ತನ್ನ ಭವಿಷ್ಯಕ್ಕಾಗಿ ಕಠಿಣ ಯುದ್ಧ ನಡೆಸುತ್ತಿರುವ ಸಮಯದಲ್ಲಿ ಈ ದಂಗೆ ಸಹಿಸಲಸಾಧ್ಯ ಎಂದು ಪುಟಿನ್ ಕೆಂಡಕಾರಿದರು. 

ರಷ್ಯಾನಗರಕ್ಕೆ ಮುತ್ತಿಗೆ ಹಾಕಿದ್ದೇವೆ: ಪ್ರಿಗೋಜಿನ್
ತಿಂಗಳುಗಳ ಕಾಲ ರಕ್ಷಣಾ ಸಚಿವಾಲಯದೊಂದಿಗಿನ ಭಿನ್ನಾಭಿಪ್ರಾಯ ಹೊಂದಿರುವ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್, ಇಂದು ಮಾಸ್ಕೋ ತನ್ನ ಪಡೆಗಳ ಮೇಲೆ ಮಾರಣಾಂತಿಕ ಕ್ಷಿಪಣಿ ದಾಳಿ ಮಾಡಲಾಗಿದೆ ಎಂದು ಆರೋಪಿಸಿದರು. ಅಂತೆಯೇ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು. ದೇಶದ ಮಿಲಿಟರಿ ನಾಯಕತ್ವವನ್ನು ಉರುಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅವರು ಪ್ರತಿಜ್ಞೆ ಮಾಡಿದರು. ಅವರ ಪಡೆಗಳು ತಮ್ಮ ರೀತಿಯಲ್ಲಿ ಎಲ್ಲವನ್ನೂ ನಾಶಪಡಿಸುತ್ತವೆ. ನಾವು ಮುಂದುವರಿಯುತ್ತಿದ್ದು, ಈಗಾಗಲೇ ತಾವು ರೋಸ್ಟೊವ್-ಆನ್-ಡಾನ್ ತಲುಪಿದ್ದೇವೆ. ಇದಕ್ಕೆಲ್ಲ ಶೀಘ್ರ ಅಂತ್ಯ ಹಾಡುತ್ತೇವೆ ಎಂದು ಪ್ರಿಗೋಜಿನ್ ಹೇಳಿದರು.

ಈ ರೋಸ್ಟೊವ್-ಆನ್-ಡಾನ್ ನಗರ ಉಕ್ರೇನ್‌ನಲ್ಲಿನ ಹೋರಾಟವನ್ನು ನೋಡಿಕೊಳ್ಳುವ ರಷ್ಯಾದ ಸೇನಾ ಪ್ರಧಾನ ಕಛೇರಿಯ ನೆಲೆಯಾಗಿದೆ. ಯೆವ್ಗೆನಿ ಪ್ರಿಗೊಜಿನ್ ಶನಿವಾರ ಮುಂಜಾನೆ ತನ್ನ ಪಡೆಗಳು ಉಕ್ರೇನ್‌ನಿಂದ ರಷ್ಯಾಕ್ಕೆ ದಾಟಿದೆ ಎಂದು ಹೇಳಿಕೊಂಡಿದ್ದಾನೆ, ಅಲ್ಲಿ ಅವರು ಯುದ್ಧದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಪ್ರಿಗೋಜಿನ್, ತಾವು ರೋಸ್ಟೋವ್‌ ನಗರವನ್ನು ವಶಕ್ಕೆ ಪಡೆದಿದ್ದಾಗೆ ಹೇಳಿಕೊಂಡಿದ್ದಾನೆ. ಇದೇ ಪ್ರಿಗೋಜಿನ್ ರಷ್ಯಾದ ರಕ್ಷಣಾ ಸಚಿವಾಲಯದೊಂದಿಗೆ ದೀರ್ಘಕಾಲ ದ್ವೇಷ ಹೊಂದಿದ್ದು, ಶುಕ್ರವಾರ ತಡವಾಗಿ ರಕ್ಷಣಾ ಸಚಿವರು ಉಕ್ರೇನ್‌ನಲ್ಲಿರುವ ಪ್ರಿಗೋಜಿನ್ ಅವರ ಶಿಬಿರಗಳ ಮೇಲೆ ದಾಳಿಗೆ ಆದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

SCROLL FOR NEXT