ರಷ್ಯಾದ ದಾಳಿಯಿಂದ ನಾಶವಾದ ಕ್ರಮಾಟೋರ್ಸ್ಕ್‌ನಲ್ಲಿನ ರಿಯಾ ಪಿಜ್ಜಾ ರೆಸ್ಟೋರೆಂಟ್. (ಫೋಟೋ- ಎಪಿ) 
ವಿದೇಶ

ಪೂರ್ವ ಉಕ್ರೇನ್‌ ನಗರದ ಪಿಜ್ಜಾ ರೆಸ್ಟೋರೆಂಟ್‌ ಮೇಲೆ ರಷ್ಯಾ  ಕ್ಷಿಪಣಿ ದಾಳಿ; 3 ಮಕ್ಕಳು ಸೇರಿದಂತೆ 9 ಮಂದಿ ಸಾವು

ಪೂರ್ವ ಉಕ್ರೇನ್‌ನ ಕ್ರಾಮಾಟೋರ್ಸ್ಕ್ ನಗರದ ಜನನಿಬಿಡ ಪಿಜ್ಜಾ ರೆಸ್ಟೋರೆಂಟ್‌ಗೆ ರಷ್ಯಾದ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. 

ಕೀವ್: ಪೂರ್ವ ಉಕ್ರೇನ್‌ನ ಕ್ರಾಮಾಟೋರ್ಸ್ಕ್ ನಗರದ ಜನನಿಬಿಡ ಪಿಜ್ಜಾ ರೆಸ್ಟೋರೆಂಟ್‌ಗೆ ರಷ್ಯಾದ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ರಕ್ಷಣಾ ಕಾರ್ಯಕರ್ತರು ನಾಶವಾದ ಕಟ್ಟಡದ ಅವಶೇಷಗಳಲ್ಲಿ ಹುಡುಕಾಟ ಮುಂದುವರೆಸಿದ್ದಾರೆ.

ಮಂಗಳವಾರ ಸಂಜೆ ಕ್ರಮಾಟೋರ್ಸ್ಕ್ ನಗರದ ರಿಯಾ ಪಿಜ್ಜಾ ರೆಸ್ಟೋರೆಂಟ್ ಮೇಲೆ ನಡೆಸಿದ ದಾಳಿಯಲ್ಲಿ 56 ಜನರು ಗಾಯಗೊಂಡಿದ್ದಾರೆ. 16 ತಿಂಗಳ ಹಳೆಯ ಯುದ್ಧದಲ್ಲಿ ರಷ್ಯಾ ಒಂದೇ ಒಂದು ತಂತ್ರವನ್ನು ಹೆಚ್ಚಾಗಿ ಬಳಸಿದೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯ ಇತ್ತೀಚಿನ ಬಾಂಬ್ ದಾಳಿಯನ್ನು ಉಲ್ಲೇಖಿಸಿ ತಿಳಿಸಿದೆ. 

ದಾಳಿಯ ಪರಿಣಾಮವಾಗಿ 14 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಸಾವಿಗೀಡಾಗಿದ್ದಾರೆ ಎಂದು ಕ್ರಾಮಾಟೋರ್ಸ್ಕ್ ಸಿಟಿ ಕೌನ್ಸಿಲ್‌ನ ಶೈಕ್ಷಣಿಕ ಇಲಾಖೆ ತಿಳಿಸಿದೆ. ರಷ್ಯಾದ ಕ್ಷಿಪಣಿಗಳು ಇಬ್ಬರು ಯುವತಿಯರ ಹೃದಯ ಬಡಿತವನ್ನು ನಿಲ್ಲಿಸಿದವು ಎಂದು ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಅದು ಹೇಳಿದೆ.

ಮತ್ತೊಂದು ಮೃತ ಮಗುವಿನ ವಯಸ್ಸು 17 ವರ್ಷವಾಗಿದೆ ಎಂದು ಪ್ರಾಸಿಕ್ಯೂಟರ್ ಜನರಲ್ ಆಂಡ್ರಿ ಕೊಸ್ಟಿನ್ ತಿಳಿಸಿದ್ದಾರೆ|
ರಷ್ಯಾ ನಡೆಸಿರುವ ದಾಳಿಯಲ್ಲಿ S-300 ಕ್ಷಿಪಣಿಗಳನ್ನು ಬಳಸಲಾಗಿದೆ. ದಾಳಿಯಲ್ಲಿ 18 ಬಹುಮಹಡಿ ಕಟ್ಟಡಗಳು, 65 ಮನೆಗಳು, ಐದು ಶಾಲೆಗಳು, ಎರಡು ಶಿಶುವಿಹಾರಗಳು, ಶಾಪಿಂಗ್ ಸೆಂಟರ್, ಆಡಳಿತ ಕಟ್ಟಡ ಮತ್ತು ಮನರಂಜನಾ ಕಟ್ಟಡವನ್ನು ಹಾನಿಗೊಳಿಸಲಾಗಿದೆ ಎಂದು ಪ್ರಾದೇಶಿಕ ಗವರ್ನರ್ ಪಾವ್ಲೊ ಕಿರಿಲೆಂಕೊ ಹೇಳಿದ್ದಾರೆ.

ಕ್ರಾಮಾಟೋರ್ಸ್ಕ್ ಒಂದು ಮುಂಚೂಣಿ ನಗರವಾಗಿದ್ದು, ಅದು ಉಕ್ರೇನ್ ಸೇನೆಯ ಪ್ರಾದೇಶಿಕ ಪ್ರಧಾನ ಕಛೇರಿಯನ್ನು ಹೊಂದಿದೆ.
ಪಿಜ್ಜಾ ರೆಸ್ಟೊರೆಂಟ್‌ಗೆ ಪತ್ರಕರ್ತರು, ಸಹಾಯ ಕಾರ್ಯಕರ್ತರು ಮತ್ತು ಸೈನಿಕರು ಮತ್ತು ಸ್ಥಳೀಯರು ಹೆಚ್ಚಾಗಿ ಬರುತ್ತಿದ್ದರು. ಇದು ಡೊನೆಟ್ಸ್ಕ್‌ನಲ್ಲಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ರಷ್ಯಾ ಸ್ವಾಧೀನಪಡಿಸಿಕೊಳ್ಳುವುದಾಗಿ ಹೇಳಿಕೊಂಡ ನಾಲ್ಕು ಉಕ್ರೇನ್ ಪ್ರಾಂತ್ಯಗಳಲ್ಲಿ ಒಂದಾಗಿದೆ. ಆದರೆ, ಸಂಪೂರ್ಣವಾಗಿ ರಷ್ಯಾದ ವಶದಲ್ಲಿಲ್ಲ.

ರಷ್ಯಾ 2015 ರಿಂದ ಕ್ರಿಮಿಯಾವನ್ನು ಆಕ್ರಮಿಸಿಕೊಂಡಿದೆ.

ರಷ್ಯಾ ಭಾಗಶಃ ಆಕ್ರಮಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ಉಕ್ರೇನ್‌ನ ಹಿಡಿತದಲ್ಲಿರುವ ಭಾಗಗಳು ವಿಶೇಷವಾಗಿ ರಷ್ಯಾದ ಬಾಂಬ್ ದಾಳಿಯಿಂದ ತೀವ್ರವಾಗಿ ಹಾನಿಗೊಳಗಾಗಿವೆ ಮತ್ತು ಯುದ್ಧವನ್ನು ಪರಿಹರಿಸುವಲ್ಲಿ ಪ್ರಮುಖ ತಡೆಗೋಡೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT