OICಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಟರ್ಕಿ (ಸಂಗ್ರಹ ಚಿತ್ರ) 
ವಿದೇಶ

ಕಷ್ಟಕಾಲದಲ್ಲಿ ನೆರವಾದ 'ದೋಸ್ತ್' ಬೆನ್ನಿಗೆ ಇರಿದ ಟರ್ಕಿ?: ಒಐಸಿ ನಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ!

ಭೀಕರ ಭೂಕಂಪನದಿಂದಾಗಿ ತತ್ತರಿಸಿ ಹೋಗಿರುವ ಟರ್ಕಿಗೆ ಕೆಟ್ಟಮೇಲೂ ಬುದ್ದಿ ಬಂದಂತೆ ಕಾಣುತ್ತಿಲ್ಲ.. ಕಷ್ಟಕಾಲದಲ್ಲಿ ನೆರವಾಗಿದ್ದ ಭಾರತದ ವಿರುದ್ಧವೇ ಮತ್ತೆ ಟರ್ಕಿ ಪಿತೂರಿ ಮುಂದುವರೆದಿದೆ.

ನವದೆಹಲಿ: ಭೀಕರ ಭೂಕಂಪನದಿಂದಾಗಿ ತತ್ತರಿಸಿ ಹೋಗಿರುವ ಟರ್ಕಿಗೆ ಕೆಟ್ಟಮೇಲೂ ಬುದ್ದಿ ಬಂದಂತೆ ಕಾಣುತ್ತಿಲ್ಲ.. ಕಷ್ಟಕಾಲದಲ್ಲಿ ನೆರವಾಗಿದ್ದ ಭಾರತದ ವಿರುದ್ಧವೇ ಮತ್ತೆ ಟರ್ಕಿ ಪಿತೂರಿ ಮುಂದುವರೆದಿದೆ.

ಹೌದು.. ಎದುರಾಳಿ ರಾಷ್ಟ್ರವಾದರೂ ಭೀಕರ ಭೂಕಂಪನದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಟರ್ಕಿಗೆ ಭಾರತ ಸರ್ಕಾರ 'ಆಪರೇಷನ್ ದೋಸ್ತ್' ಹೆಸರಿನಲ್ಲಿ ನೆರವಿನ ಮಹಾಪೂರವನ್ನೇ ಹರಿಸಿತ್ತು. ಭಾರತದ ಎನ್ ಡಿಆರ್ ಎಫ್ ತಂಡಗಳನ್ನು ಭೂಕಂಪನ ಪೀಡಿತ ಟರ್ಕಿಗೆ ರವಾನಿಸಿ ಅಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಸಾವಿರಾರು ಟರ್ಕಿ ನಾಗರೀಕರ ರಕ್ಷಣೆ ಮಾಡಿತ್ತು.

ಅಗತ್ಯ ಉಪಕರಣಗಳು ಮತ್ತು ಅಗತ್ಯ ವಸ್ತುಗಳ ಜೊತೆಗೆ ತರಬೇತಿ ಪಡೆದ ಶ್ವಾನ ತಂಡವನ್ನು ಕಳುಹಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಟರ್ಕಿ ಸರ್ಕಾರ ಕೂಡ ಭಾರತ ನೆರವನ್ನು ಅಂದು ಮುಕ್ತಕಂಠದಿಂದ ಶ್ಲಾಘಿಸಿತ್ತು. ಆದರೆ ಇದರ ಬೆನ್ನಲ್ಲೇ ಮತ್ತೆ ಟರ್ಕಿ ಭಾರತದ ಬೆನ್ನಿಗೆ ಇರಿಯುವ ಕೆಲಸ ಮಾಡಿದ್ದು, ಭಾರತದ ವಿರೋಧದ ನಡುವೆಯೇ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ)ನಲ್ಲಿ ಭಾರತದ ಆಂತರಿಕ ವಿಚಾರವಾದ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದೆ.

ಮಾತ್ರವಲ್ಲದೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (UNHRC) ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸುವ ಮೂಲಕ ಟರ್ಕಿ ತನ್ನ 'ದೋಸ್ತ್'ಗೆ ದ್ರೋಹ ವೆಸಗಿದೆ. ಅಷ್ಟೇ ಅಲ್ಲ, ಆ ದೇಶವು ಭಾರತವನ್ನು ತರಾಟೆಗೆ ತೆಗೆದುಕೊಂಡಿದ್ದು, ಪಾಕಿಸ್ತಾನದ ಬೆನ್ನಿಗೆ ನಿಂತಿದೆ. ಭಾರತದಿಂದ ಭಾರಿ ನೆರವು ಪಡೆದ ವಾರದ ನಂತರದಲ್ಲಿಯೇ ಟರ್ಕಿ ಭಾರತದ ವಿರುದ್ಧ ಹೇಳಿಕೆ ನೀಡಿದೆ.

ಜಿನೀವಾದಲ್ಲಿ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್​ನಲ್ಲಿ ಟರ್ಕಿಯು, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಪ್ರಸ್ತಾಪಿಸಿದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT