ಟ್ವಿಟರ್ ಗೆ ಮೆಟಾ ಸಡ್ಡು 
ವಿದೇಶ

ಟ್ವಿಟರ್ ಗೆ ಸಡ್ಡು; ಮತ್ತೊಂದು ಸಾಮಾಜಿಕ ಮಾಧ್ಯಮ ಆ್ಯಪ್ ತಯಾರಿಸಲು ಮೆಟಾ ಮುಂದು!

ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟರ್ ಗೆ ಸಡ್ಡು ಹೊಡೆಯಲು ಫೇಸ್ ಬುಕ್ ಮಾತೃಸಂಸ್ಥೆ ಮೆಟಾ ಮುಂದಾಗಿದ್ದು, ಟ್ವಿಟರ್ ಮಾದರಿಯ ಸಾಮಾಜಿಕ ಮಾಧ್ಯಮ ಆ್ಯಪ್ ತಯಾರಿಕೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.

ವಾಷಿಂಗ್ಟನ್: ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟರ್ ಗೆ ಸಡ್ಡು ಹೊಡೆಯಲು ಫೇಸ್ ಬುಕ್ ಮಾತೃಸಂಸ್ಥೆ ಮೆಟಾ ಮುಂದಾಗಿದ್ದು, ಟ್ವಿಟರ್ ಮಾದರಿಯ ಸಾಮಾಜಿಕ ಮಾಧ್ಯಮ ಆ್ಯಪ್ ತಯಾರಿಕೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.

ಹೌದು.. ಟೆಕ್ಸ್ಟ್ ಆಧರಿತ ಕಂಟೆಂಟ್ ಪೋಸ್ಟ್ ಮಾಡುವವರಿಗಾಗಿ ಟ್ವಿಟರ್ ಮಾದರಿಯ ಮೊಬೈಲ್ ಆ್ಯಪ್ ರಚಿಸಲು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಮುಂದಾಗಿದ್ದು, ಈ ಯೋಜನೆಗೆ 'P92' ಎಂದು ಕೋಡ್ ನೇಮ್ ಇಡಲಾಗಿದೆ. ತಮ್ಮ ಇನ್‌ಸ್ಟಾಗ್ರಾಂ ಲಾಗಿನ್ ಮಾಹಿತಿಯನ್ನೇ ಬಳಸಿಕೊಂಡು ಬಳಕೆದಾರರು ಇದಕ್ಕೆ ಲಾಗಿನ್ ಆಗಬಹುದಾಗಿದೆ ಎಂದು ಮೆಟಾ ಮೂಲಗಳು ತಿಳಿಸಿವೆ.

ವರದಿಯಲ್ಲಿರುವಂತೆ, 'ಟೆಕ್ಸ್ಟ್ ಅಪ್ಡೇಟ್‌ಗಳನ್ನು ಹಾಕುವ ಸಾಮಾಜಿಕ ಮಾಧ್ಯಮ ಬಳಕೆದಾರರಿಗಾಗಿ ಸ್ವತಂತ್ರ ವಿಕೇಂದ್ರೀಕೃತ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಸ್ಥಾಪಿಸುತ್ತಿದ್ದೇವೆ. ಸಮಾಜದ ಜನಪ್ರಿಯ ವ್ಯಕ್ತಿಗಳು ಮತ್ತು ಕಂಟೆಂಟ್ ಸೃಷ್ಟಿಕರ್ತರು ತಮ್ಮ ಆಸಕ್ತಿಗೆ ತಕ್ಕಂತೆ ಅಪ್ಡೇಟ್‌ಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯ ಅಗತ್ಯವಿದೆ ಎಂದು ನಾವು ನಂಬಿದ್ದೇವೆ’ ಎಂದು ಕಂಪನಿ ತಿಳಿಸಿರುವುದಾಗಿ ವರದಿ ತಿಳಿಸಿದೆ.

ಇನ್‌ಸ್ಟಾಗ್ರಾಂ ಮುಖ್ಯಸ್ಥ ಆಡಂ ಮೊಸ್ಸೊರಿ ಅವರು, ಈ ಯೋಜನೆಯ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದ್ದು, ಆದರೆ ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿಲ್ಲ. ಆದರೆ, ಕಾನೂನು ಮತ್ತು ನಿಯಂತ್ರಣ ತಂಡಗಳು ಆ್ಯಪ್‌ಗೆ ಸಂಬಂಧಿಸಿದ ಪ್ರೈವಸಿ ವಿಷಯಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಹೊಸ ಮೆಟಾ ಅಪ್ಲಿಕೇಶನ್ 2016 ರಲ್ಲಿ ಪ್ರಾರಂಭವಾದ ಟ್ವಿಟರ್ ತರಹದ ಸೇವೆಯಾದ ಮಾಸ್ಟೋಡಾನ್ ಅನ್ನು ಶಕ್ತಿಯುತಗೊಳಿಸುವ ಚೌಕಟ್ಟನ್ನು ಆಧರಿಸಿದೆ - ಮತ್ತು ಅದರೊಂದಿಗೆ ಪರಸ್ಪರ ಕಾರ್ಯನಿರ್ವಹಿಸುತ್ತದೆ ಮತ್ತು ಕಳೆದ ಅಕ್ಟೋಬರ್‌ನಲ್ಲಿ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ  ಈ ಮಾಸ್ಟೋಡಾನ್ ಆ್ಯಪ್ ನ ಜನಪ್ರಿಯತೆ ಹೆಚ್ಚಾಗತೊಡಗಿದೆ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ‘ನೋಟ್ಸ್’ ಎಂಬ ಹೊಸ ಫೀಚರ್ ಅನ್ನು ಇನ್‌ಸ್ಟಾಗ್ರಾಂ ಪರಿಚಯಿಸಿತ್ತು. ಇದರಲ್ಲಿ ಕೇವಲ 60 ಅಕ್ಷರಗಳ ಟೆಕ್ಸ್ಟ್ ಮತ್ತು ಎಮೊಜಿ ಬಳಸಿಕೊಂಡು ಪೋಸ್ಟ್ ಮಾಡಬಹುದಾಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

SCROLL FOR NEXT