ವಿದೇಶ

ಸಲಿಂಗಿ ಪೋಷಕರ ಹಕ್ಕುಗಳಿಗೆ ನಿರ್ಬಂಧ: ಇಟಾಲಿ ಮೆಲೋನಿ ಸರ್ಕಾರದ ವಿರುದ್ಧ ತೀವ್ರಗೊಂಡ ಪ್ರತಿಭಟನೆ

Srinivas Rao BV

ರೋಮ್: ಸಲಿಂಗಿ ಪೋಷಕರ ಹಕ್ಕುಗಳನ್ನು ನಿರ್ಬಂಧಿಸುವ ಹಾದಿಯಲ್ಲಿ ನಿರ್ಧಾರ ಕೈಗೊಳ್ಳುತ್ತಿರುವ ಇಟಾಲಿಯ ಮೆಲೋನಿ ಸರ್ಕಾರದ ವಿರುದ್ಧ ಇಟಾಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. 

ಅಲ್ ಜೆಜೀರಾ ಈ ಬಗ್ಗೆ ವರದಿ ಪ್ರಕಟಿಸಿದೆ.  ಸರ್ಕಾರದ ನಡೆಯನ್ನು ಖಂಡಿಸಿ ನೂರಾರು ಮಂದಿ ರಸ್ತೆಗಿಳಿದು ಮೆಲೋನಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ನಿರ್ಧಾರವನ್ನು ವಿರೋಧಿಸಿ ಇಟಾಲಿಯ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ನಿರತರು ಕಾಮನಬಿಲ್ಲಿನ ಧ್ವಜಗಳನ್ನು ಪ್ರದರ್ಶಿಸಿದರು. 

ಕೆಲವು ಸ್ಥಳೀಯ ಆಡಳಿತಗಳು ಏಕಪಕ್ಷೀಯವಾಗಿ ಕಾರ್ಯನಿರ್ವಹಿಸಲು ಆಯ್ಕೆ ಮಾಡಿಕೊಂಡಿದ್ದರೂ ಪೋಷಕರು ತರುವ ಕೋರ್ಟ್ ಪ್ರಕರಣಗಳಲ್ಲಿ ಪ್ರತಿ ಪ್ರಕರಣವನ್ನೂ ಕೂಲಂಕುಷವಾಗಿ ಪರಿಗಣಿಸಲಾಗುತ್ತದೆ.
 
ಇಟಾಲಿಯಲ್ಲಿ ನಿರ್ಬಂಧಿಸಲಾಗಿರುವ ಬಾಡಿಗೆ ತಾಯಂದಿರ ಮೂಲಕ ಪಡೆದಿರುವ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನೂ ಇಟಾಲಿಯ ಕೋರ್ಟ್ ಗಳು ನೋಂದಣಿ ಮಾಡಿಕೊಳ್ಳುತ್ತಿದೆ.
 
2016 ರಲ್ಲಿ ಸಲಿಂಗಿಗಳ ವಿವಾಹವನ್ನು ಕಾನೂನುಬದ್ಧಗೊಳಿಸಿದ ಇಟಾಲಿಯಲ್ಲಿ ಕ್ಯಾಥೋಲಿಕ್ ಚರ್ಚ್ ಆಕ್ಷೇಪಗಳ ಹಿನ್ನೆಲೆಯಲ್ಲಿ ಸಲಿಂಗಿಗಳು ಮಕ್ಕಳನ್ನು ಪಡೆಯುವುದು ಅಥವಾ ದತ್ತು ಸ್ವೀಕರಿಸುವುದನ್ನು ನಿರ್ಬಂಧಿಸಲಾಗಿತ್ತು. 

SCROLL FOR NEXT