ಸಂಗ್ರಹ ಚಿತ್ರ 
ವಿದೇಶ

ಟೆಕ್ಸಾಸ್ ನ ದಲ್ಲಾಸ್ ನಲ್ಲಿ ಶೂಟೌಟ್: 8 ಮಂದಿ ಸಾವು, 7 ಜನರಿಗೆ ಗಾಯ

ಅಮೆರಿಕಾದ ಟೆಕ್ಸಾಸ್​ ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಬಂದೂಕುಧಾರಿಯೊಬ್ಬ ಮಾಲ್​ನಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿ, 7 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ದಲ್ಲಾಸ್: ಅಮೆರಿಕಾದ ಟೆಕ್ಸಾಸ್​ ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಬಂದೂಕುಧಾರಿಯೊಬ್ಬ ಮಾಲ್​ನಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿ, 7 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಬಂಧೂಕುಧಾರಿಯೊಬ್ಬ ಇದ್ದಕ್ಕಿದ್ದಂತೆ ಮಾಲ್ ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ನೂರಾರು ಮಂದಿ ಭೀತಿಯಲ್ಲಿ ಅತ್ತಿತ್ತ ಓಡಿದ್ದಾರೆ.

ಟೆಕ್ಸಾಸ್‌ನಲ್ಲಿರುವ ಅಲೆನ್ ಪ್ರೀಮಿಯಂ ಔಟ್‌ಲೆಟ್‌ಗಳ ಮಾಲ್ ನಲ್ಲಿ ಘಟನೆ ನಡೆದಿದ್ದು, ದಾಳಿ ನಡೆಸಿದ ವ್ಯಕ್ತಿ ಕೂಡ ಮೃತಪಟ್ಟಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಓರ್ವ ಶಂಕಿತ ದಾಳಿಕೋರ ಮೃತಪಟ್ಟಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯಲ್ಲಿ ಮಕ್ಕಳು ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆಂದು ತಿಳಿಸಿದ್ದಾರೆ.

ಅಮೆರಿಕಾದಲ್ಲಿ ಶೂಟೌಟ್‌ ಪ್ರಕರಣಗಳು ಸರ್ವೆಸಾಮಾನ್ಯದಂತೆ ನಡೆಯುತ್ತಿದೆ. 2023 ರಲ್ಲಿ ಇದುವರೆಗೆ 198 ಶೂಟೌಟ್‌ ಗಳು ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ!

'ತೀವ್ರ ಧ್ರುವೀಕರಣಗೊಂಡ ಜಗತ್ತು, ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಬ್ರಿಕ್ಸ್ ಶೃಂಗಸಭೆ ಯಶಸ್ವಿ-ಎಸ್ ಜೈಶಂಕರ್

ಶೇ. 20ರಷ್ಟು ಅಲ್ಪ ಸಂಖ್ಯಾತರು ಸಸ್ಯಾಹಾರಿಗಳು: ಬ್ರಿಕ್ಸ್ ಸಸ್ಯಾಹಾರಿ ಮೆನು ಸಂಬಂದ ಓವೈಸಿ ಪ್ರತಿಕ್ರಿಯೆ

ಸಮುದ್ರ ಅಡ್ಡವಿರದಿದ್ದರೆ ನೆಹರೂ- ಗಾಂಧಿ ಕುಟುಂಬ ಅರಬ್‌ ದೇಶಗಳಲ್ಲೂ ಚುನಾವಣೆಗೆ ನಿಲ್ತಿತ್ತು: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್!

ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು: ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಮಹಾಗಣಪತಿ ಪ್ರತಿಷ್ಠಾಪನೆ! ಶೋಭಾಯಾತ್ರೆಗೆ ಸಜ್ಜು