ವಿದೇಶ

ನ್ಯೂಜಿಲೆಂಡ್ ನಲ್ಲಿ ಕುರಿಗಳ ಸಂಖ್ಯೆ ಜನರಿಗಿಂತ 5 ಪಟ್ಟು ಹೆಚ್ಚು; ಹೊಸ ದಾಖಲೆ!

Nagaraja AB

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಕುರಿಗಳ ಸಂಖ್ಯೆಯು ಜನರಿಗಿಂತ 5 ಪಟ್ಟು ಹೆಚ್ಚಿದೆ ಎಂಬುದನ್ನು ಅಧಿಕೃತ ಅಂಕಿಅಂಶಗಳು ಸೋಮವಾರ ತೋರಿಸಿವೆ. 1850ರ ದಶಕದ ನಂತರ ಮೊದಲ ಬಾರಿಗೆ ಜನರಿಗಿಂತ ಕುರಿಗಳ ಸಂಖ್ಯೆ ಹೆಚ್ಚಾಗಿದೆ. ನ್ಯೂಜಿಲೆಂಡ್‌ನವರು ತಮ್ಮ ಪ್ರತಿಸ್ಪರ್ಧಿ ಆಸ್ಟ್ರೇಲಿಯದವರಿಗಿಂತ ಕಡಿಮೆ ಉಣ್ಣೆ ತೆಗೆಯುವವರನ್ನು ಹೊಂದಿದ್ದಾರೆ ಎಂದು ನ್ಯೂಜಿಲೆಂಡ್ ಸರ್ಕಾರಿ ಸಂಸ್ಥೆ ತಿಳಿಸಿದೆ.

"1850 ರ ದಶಕದ ನಂತರ ಮೊದಲ ಬಾರಿಗೆ ರಾಷ್ಟ್ರೀಯ ಕುರಿಗಳ ಸಂಖ್ಯೆಗಿಂತ ಜನರ ಸಂಖ್ಯೆ ಐದು ಪಟ್ಟು ಕಡಿಮೆಯಾಗುವ ಮೂಲಕ ಹೊಸ ದಾಖಲೆ ಬರೆದಿದೆ. 1982 ರಲ್ಲಿ ನ್ಯೂಜಿಲೆಂಡ್ ಕುರಿಗಳ ಸಂಖ್ಯೆಯು ಪ್ರತಿ ವ್ಯಕ್ತಿಗೆ 22 ರಷ್ಟಿತ್ತು ಎಂದು ನ್ಯೂಜಿಲೆಂಡ್ ನ ಅಂಕಿಅಂಶಗಳ  ವಿಶ್ಲೇಷಕ ಜೇಸನ್ ಅಟ್ಟೆವೆಲ್ ಹೇಳಿದ್ದಾರೆ. 

ಆಸ್ಟ್ರೇಲಿಯಾವ ಪ್ರಸ್ತುತ ನ್ಯೂಜಿಲೆಂಡ್‌ಗಿಂತ ಮೂರು ಪಟ್ಟು ಹೆಚ್ಚು ಕುರಿಗಳನ್ನು ಹೊಂದಿದೆ ಆದಾಗ್ಯೂ, ಪ್ರತಿ ಆಸೀಸ್ ಜನರಿಗೆ ಕೇವಲ ಮೂರು ಕುರಿಗಳ ಅನುಪಾತದಂತಿದೆ.  ನ್ಯೂಜಿಲೆಂಡ್, 5.2 ಮಿಲಿಯನ್ ಜನರಿಗೆ ನೆಲೆಯಾಗಿದ್ದು, ವಿಶ್ವದ ಪ್ರಮುಖ ಉಣ್ಣೆ ರಫ್ತುದಾರರಲ್ಲಿ ಒಂದಾಗಿದೆ.

ಕಳೆದ ವರ್ಷ 284 ಮಿಲಿಯನ್ ಡಾಲರ್ ಮೌಲ್ಯದ ಉಣ್ಣೆಯನ್ನು ವಿದೇಶಕ್ಕೆ ಕಳುಹಿಸಿದೆ. ಆದರೆ ಹೆಚ್ಚುತ್ತಿರುವ ಕೃಷಿ ವೆಚ್ಚಗಳು ಮತ್ತು ಉಣ್ಣೆಯ ಬೆಲೆಗಳ ಕುಸಿತವು 1980 ರ ದಶಕದಲ್ಲಿ 72 ಮಿಲಿಯನ್‌ ನಷ್ಟಿದ್ದ ರಾಷ್ಟ್ರೀಯ ಕುರಿಗಳ ಅಂಕಿಅಂಶ ಕ್ಷೀಣಕ್ಕೆ ಕಾರಣವಾಗಿದೆ. 

SCROLL FOR NEXT