ವಿದೇಶ

ಗಾಜಾದಲ್ಲಿ ತಾಯಂದಿರ ಆಕ್ರಂದನ: ಇಸ್ರೇಲ್ ದಾಳಿಯಲ್ಲಿ 3 ವಾರಗಳಲ್ಲಿ 3,600ಕ್ಕೂ ಹೆಚ್ಚು ಪ್ಯಾಲೇಸ್ಟಿನ್ ಮಕ್ಕಳ ಸಾವು

Vishwanath S

ಗಾಜಾ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಮೊದಲ 25 ದಿನಗಳಲ್ಲಿ 3,600ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ. 

ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಯಾವುದೇ ಪ್ರದೇಶಗಳು ಸುರಕ್ಷಿತವಾಗಿಲ್ಲ. ಆಶ್ರಯ ಪಡೆದಿದ್ದ ಚರ್ಚ್, ಆಸ್ಪತ್ರೆ ಮತ್ತು ವಸತಿ ಪ್ರದೇಶಗಳಲ್ಲಿ ದಾಳಿಗಳಾಗುತ್ತಿರುವುದರಿಂದ ನವಜಾತ ಶಿಶುಗಳು, ಪ್ರವಾಸಿಗರು, ಪತ್ರಕರ್ತರು ಸಾವನ್ನಪ್ಪಿದ್ದಾರೆ.

ಗಾಜಾದಲ್ಲಿನ 23 ಲಕ್ಷ ನಿವಾಸಿಗಳಲ್ಲಿ ಅರ್ಧದಷ್ಟು ಜನರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಯುದ್ಧದಲ್ಲಿ ಇಲ್ಲಿಯವರೆಗೆ ಹತ್ಯೆಯಾದರು ಶೇಕಡ 40ರಷ್ಟು ಮಕ್ಕಳು. ಕಳೆದ ವಾರ ಬಿಡುಗಡೆಯಾದ ಗಾಜಾ ಆರೋಗ್ಯ ಸಚಿವಾಲಯದ ಡೇಟಾ ಪ್ರಕಾರ, ಅಕ್ಟೋಬರ್ 26ರ ವೇಳೆಗೆ 12 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 2,001 ಮಕ್ಕಳು ಹತ್ಯೆಯಾಗಿದ್ದಾರೆ. ಇದರಲ್ಲಿ 615 ಮಂದಿ 3 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು.

ಇಸ್ರೇಲ್ ತನ್ನ ವೈಮಾನಿಕ ದಾಳಿಗಳು ಹಮಾಸ್ ಉಗ್ರಗಾಮಿ ತಾಣಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳುತ್ತದೆ. ಹಮಾಸ್ ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿದೆ ಎಂದು ಆರೋಪಿಸಿದೆ. 500ಕ್ಕೂ ಹೆಚ್ಚು ಉಗ್ರಗಾಮಿಗಳ ರಾಕೆಟ್‌ಗಳು ಗುರಿ ತಪ್ಪಿ ಗಾಜಾದಲ್ಲಿ ಬಿದ್ದಿದ್ದು ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿದೆ.

ಹಮಾಸ್‌ನ ದಾಳಿಯ ನಂತರ, 1,400 ಇಸ್ರೇಲಿ ಮತ್ತು ವಿದೇಶಿ ನಾಗರಿಕರು ಸಹ ಪ್ರಾಣ ಕಳೆದುಕೊಂಡಿದ್ದಾರೆ. ಇವುಗಳಲ್ಲಿ ಹೆಚ್ಚಿನ ಸಾವುಗಳು ಹಮಾಸ್‌ನ ಹಠಾತ್ ದಾಳಿಯ ಸಮಯದಲ್ಲಿ ಸಂಭವಿಸಿವೆ.

SCROLL FOR NEXT