ವಿದೇಶ

ಕೆನಡಾದ ಎಡ್ಮಂಟನ್ ನಲ್ಲಿ ಗುಂಪು ಹಿಂಸಾಚಾರಲ್ಲಿ ಇಬ್ಬರು ಸಿಖ್ಖರ ಹತ್ಯೆ

Srinivas Rao BV

ಒಟ್ಟಾವಾ: ಕೆನಡಾದ ಎಡ್ಮಂಟ್ ನಲ್ಲಿ ನಡೆದ ಗುಂಪು ಹಿಂಸಾಚಾರದಲ್ಲಿ ಇಬ್ಬರು ಸಿಖ್ ವ್ಯಕ್ತಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

ಕೆನಡಾದಲ್ಲಿ ನಡೆದ ಈ ಹಿಂಸಾಚಾರವನ್ನು, ಉನ್ನತ ಮಟ್ಟದ ವ್ಯಕ್ತಯನ್ನೊಳಗೊಂಡ ಸಂಘಟಿತ ಅಪರಾಧ ಎಂದು ವಿಶ್ಲೇಷಿಸಲಾಗುತ್ತಿದೆ. ಘಟನೆಯಲ್ಲಿ ಸಿಖ್ ವ್ಯಕ್ತಿ ಹಾಗೂ ಆತನ 11 ವರ್ಷದ ಪುತ್ರ ಸಾವನ್ನಪ್ಪಿದ್ದಾರೆ. 

ಎಡ್ಮಂಟನ್ ನಲ್ಲಿ ನಡೆದ ಘಟನೆಯನ್ನು ಕೆನಡಾದ ಪೊಲೀಸರು ಭಯಾನಕ ಗ್ಯಾಂಗ್ ಹಿಂಸಾಚಾರ ಎಂದು ಪೊಲೀಸರು ಹೇಳಿದ್ದಾರೆ.

ಹರ್‌ಪ್ರೀತ್ ಸಿಂಗ್ ಉಪ್ಪಲ್, 41, ಮತ್ತು ಅವರ ಮಗನನ್ನು ಗುರುವಾರ ಮಧ್ಯಾಹ್ನ ಗ್ಯಾಸ್ ಸ್ಟೇಷನ್‌ನ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು ಎಂದು ಎಡ್ಮಂಟನ್ ಪೊಲೀಸ್ ಮುಖ್ಯಸ್ಥರಾದ ಕಾಲಿನ್ ಡೆರ್ಕ್ಸೆನ್ ಮಾಧ್ಯಮಗಳಿಗೆ ತಿಳಿಸಿದರು.

ಉಪ್ಪಲ್ ಅವರನ್ನು ಶೂಟರ್ ಗಳು ಹಿಂಬಾಲಿಸಲು ಪ್ರಾರಂಭಿಸಿದಾಗ ಕಾರಿನಲ್ಲಿ ಅವರ ಮಕ್ಕಳಿದ್ದ ಬಗ್ಗೆ ಶೂಟರ್ ಗಳಿಗೆ ಖಚಿತ ಮಾಹಿತಿ ಇತ್ತೇ ಎಂಬ ಬಗ್ಗೆ ಎಂದು ಪೊಲೀಸರಿಗೆ ತಿಳಿದಿಲ್ಲ ಎಂದು ಡೆರ್ಕ್ಸೆನ್ ಹೇಳಿದ್ದಾರೆ.

"ಶೂಟರ್ ಅಥವಾ ಶೂಟರ್‌ಗಳು ಮಗ ಅಲ್ಲಿದ್ದಾನೆಂದು ತಿಳಿದ ನಂತರ, ಅವರು ಉದ್ದೇಶಪೂರ್ವಕವಾಗಿ ಅವನನ್ನು ಗುಂಡು ಹಾರಿಸಿ ಕೊಂದಿದ್ದಾರೆ" ಎಂಬುದು ನಮಗೆ ತಿಳಿದಿರುವ ಸಂಗತಿಯಾಗಿದೆ ಎಂದು ಎಡ್ಮಂಟನ್ ಜರ್ನಲ್ ಡೆರ್ಕ್ಸೆನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. 

SCROLL FOR NEXT