ವಿದೇಶ

ತಣ್ಣಗಾದ ಕೆನಡಾ: ನಾವು ಭಾರತದೊಂದಿಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಬಯಸುವುದಿಲ್ಲ- ಜಸ್ಟಿನ್ ಟ್ರುಡೊ

Vishwanath S

ಒಟ್ಟಾವಾ: ಭಾರತದೊಂದಿಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಕೆನಡಾ ಬಯಸುವುದಿಲ್ಲ. ನವದೆಹಲಿಯೊಂದಿಗೆ ಜವಾಬ್ದಾರಿಯುತವಾಗಿ ಮತ್ತು ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

ವಾಸ್ತವವಾಗಿ, ಕೆನಡಾದ ಧೋರಣೆ ಮೃದುವಾಗಲು ಕಾರಣ ಮೋದಿ ಸರ್ಕಾರ. ಇಂದು ಭಾರತದಿಂದ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವಂತೆ ಮೋದಿ ಸರ್ಕಾರ ಕೆನಡಾಕ್ಕೆ ಸ್ಪಷ್ಟವಾಗಿ ಹೇಳಿತ್ತು. ಭಾರತದಲ್ಲಿ ಕೆನಡಾದ ರಾಜತಾಂತ್ರಿಕರ ಸಂಖ್ಯೆ 62 ಆಗಿದ್ದು, ಅದನ್ನು 21ಕ್ಕೆ ಇಳಿಸಲು ಹೇಳಿತ್ತು. ಭಾರತದ ಈ ನಿರ್ಧಾರ ಹೊರಬಂದ ಬೆನ್ನಲ್ಲೇ ಜಸ್ಟಿನ್ ಟ್ರುಡೊ ತಣ್ಣಗಾಗಿದ್ದು ಭಾರತದೊಂದಿಗಿನ ಪರಿಸ್ಥಿತಿಯನ್ನು ಉಲ್ಬಣಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ವಾಸ್ತವವಾಗಿ, ಸೆಪ್ಟೆಂಬರ್ 21ರಂದು ಈ ಬಗ್ಗೆ ಸೂಚನೆಗಳು ನೀಡಲಾಗಿತ್ತು. ಭಾರತೀಯ ವಿದೇಶಾಂಗ ಸಚಿವಾಲಯದ, ಭಾರತದಲ್ಲಿ ಕೆನಡಾದ ರಾಜತಾಂತ್ರಿಕರ ಸಂಖ್ಯೆ ತುಂಬಾ ಹೆಚ್ಚಿದ್ದರೆ, ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಅರಿಂದಮ್ ಬಾಗ್ಚಿ ಹೇಳಿದ್ದರು.

ಕೆನಡಾ ಮತ್ತು ಭಾರತದ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಯ ನಂತರ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹೇಳಿಕೆಯೊಂದಿಗೆ ಇದು ಪ್ರಾರಂಭವಾಗಿತ್ತು. ಈ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳು ಪಾತ್ರವಹಿಸುವ ಸಾಧ್ಯತೆಯನ್ನು ಅವರು ವ್ಯಕ್ತಪಡಿಸಿದ್ದರು. ಪ್ರಧಾನಿ ಟ್ರುಡೊ ಅವರ ಈ ಹೇಳಿಕೆಯನ್ನು ಭಾರತ ತಕ್ಷಣವೇ ನಿರಾಕರಿಸಿತು. ಅಲ್ಲದೆ ಆರೋಪಗಳನ್ನು ಬೇಜವಾಬ್ದಾರಿ ಎಂದು ಕರೆದಿದೆ. ಆ ಬಳಿಕ ಉಭಯ ದೇಶಗಳ ನಡುವೆ ರಾಜತಾಂತ್ರಿಕ ವಿವಾದವೂ ಆರಂಭವಾಯಿತು.

ನಿಜ್ಜರ್ ಕೊಲೆಯಾದದ್ದು ಯಾವಾಗ?
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನನ್ನು 2023ರ ಜೂನ್ ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಭಾರತೀಯ ಭದ್ರತಾ ಏಜೆನ್ಸಿಗಳು ನಿಜ್ಜರ್‌ನನ್ನು ಭಯೋತ್ಪಾದಕ ಎಂದು ಘೋಷಿಸಿದ್ದು, ಆತನ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಆದರೆ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಸೆಪ್ಟೆಂಬರ್ 18ರಂದು ಆರೋಪಿಸಿತ್ತು. ಅಷ್ಟೇ ಅಲ್ಲ, ಭಾರತದ ಹಿರಿಯ ರಾಜತಾಂತ್ರಿಕರನ್ನು ಕೆನಡಾ ಹೊರಹಾಕಿತ್ತು. ಅಂದಿನಿಂದ, ಭಾರತವು ತನ್ನ ನಿಲುವನ್ನು ಗಟ್ಟಿಗೊಳಿಸಿದ್ದು ಕೆನಡಾಕ್ಕೆ ತನ್ನದೇ ಭಾಷೆಯಲ್ಲಿ ನಿರಂತರವಾಗಿ ಪ್ರತ್ಯುತ್ತರ ನೀಡುತ್ತಿದೆ.

SCROLL FOR NEXT