ವಿದೇಶ

ಜೋಹಾನ್ಸ್‌ಬರ್ಗ್‌ನ ಟಾಲ್‌ಸ್ಟಾಯ್ ಫಾರ್ಮ್‌ನಲ್ಲಿ ಮಹಾತ್ಮ ಗಾಂಧಿಯವರ ಎಂಟು ಅಡಿ ಎತ್ತರ ಪ್ರತಿಮೆ ಅನಾವರಣ!

Sumana Upadhyaya

ಜೋಹಾನ್ಸ್‌ಬರ್ಗ್: ಮಹಾತ್ಮಾ ಗಾಂಧಿಯವರು 20 ನೇ ಶತಮಾನದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಕೀಲರಾಗಿದ್ದ ಸಮಯದಲ್ಲಿ ಅವರು ಪ್ರಾರಂಭಿಸಿದ ಟಾಲ್‌ಸ್ಟಾಯ್ ಫಾರ್ಮ್‌ನಲ್ಲಿ ಎಂಟು ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.

ಭಾನುವಾರದಂದು ಭಾರತದ ಹೈಕಮಿಷನರ್ ಪ್ರಭಾತ್ ಕುಮಾರ್ ಅವರು ಅನಾವರಣಗೊಳಿಸಿದ ದೊಡ್ಡ ಮಣ್ಣಿನ ಪ್ರತಿಮೆಯು ಈಗ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ದೊಡ್ಡ ಪ್ರತಿಮೆಗಳನ್ನು ಸೇರುತ್ತದೆ, ಇವೆರಡನ್ನೂ ಶಿಲ್ಪಿ ಜಲಂಧರನಾಥ್ ರಾಜಾರಾಮ್ ಚನ್ನೋಲೆ ಅವರು ಭಾರತದಲ್ಲಿನ ಸೇವಾಗ್ರಾಮ ಆಶ್ರಮದಿಂದ ನಿಯೋಜಿಸಿದ್ದಾರೆ.

"ಈ ಪ್ರತಿಮೆಯು ಬಹುಶಃ ಮಹಾತ್ಮಾ ಗಾಂಧಿ ಅವರು ಆ ಸಮಯದಲ್ಲಿ ದಕ್ಷಿಣ ಆಫ್ರಿಕಾವನ್ನು ತೊರೆದ ಸಮಯವನ್ನು ಹೋಲುತ್ತದೆ. ನಾವು 1914 ರ ಮಹಾತ್ಮ ಗಾಂಧಿಯವರ ಛಾಯಾಚಿತ್ರಗಳನ್ನು ನೋಡಿದ್ದೇವೆ. ಇದರಲ್ಲಿ ವಯಸ್ಸಾದವರಂತೆ ಕಾಣುತ್ತದೆ. ಐದು ವರ್ಷಗಳ ಕಾಲ ವಾಸಿಸುತ್ತಿದ್ದ ಟಾಲ್ಸ್ಟಾಯ್ ಫಾರ್ಮ್ ನಲ್ಲಿ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ನಾನು ಭಾವಿಸುತ್ತೇನೆ. 1910 ರಿಂದ 1914 ರವರೆಗೆ ಇಲ್ಲಿ ಮಹಾತ್ಮಾ ಗಾಂಧಿ ವಾಸಿಸುತ್ತಿದ್ದರು ಎಂದು ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. 

ಮಹಾತ್ಮಾ ಗಾಂಧಿಯವರ ಸ್ನೇಹಿತ ಹರ್ಮನ್ ಕಲ್ಲೆನ್‌ಬಾಚ್ ಅವರು ಸ್ವಾವಲಂಬಿ ಕಮ್ಯೂನ್ ಸ್ಥಾಪಿಸಲು ಜಮೀನನ್ನು ದಾನ ಮಾಡಿದ್ದರು ಎಂದು ಪ್ರಭಾತ್ ಕುಮಾರ್ ನೆನಪಿಸಿಕೊಂಡರು.

ಟಾಲ್‌ಸ್ಟಾಯ್ ಫಾರ್ಮ್ ನ್ನು ಪುನರುಜ್ಜೀವನಗೊಳಿಸಲು ಮಹಾತ್ಮ ಗಾಂಧಿ ಸ್ಮರಣಾರ್ಥ ಸಂಸ್ಥೆ (MGRO) ಮತ್ತು ಅದರ ಮುಖ್ಯಸ್ಥ ಮೋಹನ್ ಹೀರಾ ಪ್ರಯತ್ನಿಸುತ್ತಿದ್ದಾರೆ. 1990 ರ ದಶಕದ ಹೊತ್ತಿಗೆ, ಟಾಲ್ಸ್ಟಾಯ್ ಫಾರ್ಮ್ ಸಂಪೂರ್ಣವಾಗಿ ಧ್ವಂಸಗೊಂಡಿತು. ಕೊನೆಯ ಬಾಡಿಗೆದಾರರು ಸ್ಥಳಾಂತರಗೊಂಡ ನಂತರ ನಿರ್ಜನವಾಗಿ ಬಿಡಲಾಯಿತು.ಅನೌಪಚಾರಿಕ ವಸಾಹತುಗಳಿಂದ ಸುತ್ತುವರೆದಿದ್ದು, ಮಹಾತ್ಮಾ ಗಾಂಧಿ ವಾಸವಾಗಿದ್ದ ಕಬ್ಬಿಣ ಮತ್ತು ಮರದ ಮನೆ ಸೇರಿದಂತೆ ಎಲ್ಲವೂ ಬರಿದಾಗಿದ್ದವು. 

ಈಗ 84 ರ ಹರೆಯದ ಮೋಹನ್ ಹಿರಾ, ಟಾಲ್‌ಸ್ಟಾಯ್ ಫಾರ್ಮ್ ನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಮಹಾತ್ಮಾ ಗಾಂಧೀಜಿಯವರು ವಾಸವಾಗಿದ್ದ ಕಬ್ಬಿಣ ಮತ್ತು ಮರದ ಮನೆ ಸೇರಿದಂತೆ ಎಲ್ಲವನ್ನೂ ಬರಿಯಲಾಯಿತು. ಭುಜದ ಎತ್ತರದ ಹುಲ್ಲಿನಿಂದ ಮರೆಮಾಡಲ್ಪಟ್ಟ ಅಡಿಪಾಯ ಮಾತ್ರ ಉಳಿದಿದೆ.

84 ರ ಹರೆಯದ ಹಿರಾ ಈ ವರ್ಷದ ಜನವರಿಯಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರವಾಸಿ ಭಾರತೀಯ ಪ್ರಶಸ್ತಿಯನ್ನು ಪಡೆದರು.

ಟಾಲ್‌ಸ್ಟಾಯ್ ಫಾರ್ಮ್ ಹೇಗಿದೆ ಎಂದು ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಓದು ಕೇಳಿ ತಿಳಿದುಕೊಳ್ಳುವ ಮೂಲಕ ತಾನು ಹೇಗೆ ಸ್ಫೂರ್ತಿ ಪಡೆದಿದ್ದೇನೆ ಎಂಬುದನ್ನು ವಿವರಿಸುತ್ತಾರೆ. ಟಾಲ್‌ಸ್ಟಾಯ್ ಫಾರ್ಮ್‌ನ ಮುಂದಿನ ಹಂತವೆಂದರೆ ಸ್ಥಳೀಯ ಸಮುದಾಯಗಳನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಬಡತನವನ್ನು ನಿವಾರಿಸಲು ಸಬಲೀಕರಣ ಕಾರ್ಯಕ್ರಮಗಳನ್ನು ನಡೆಸುವಲ್ಲಿ ತೊಡಗಿಸಿಕೊಳ್ಳುವುದು ಎಂದು ಮೋಹನ್ ಹೀರಾ ಹೇಳುತ್ತಾರೆ.

SCROLL FOR NEXT