ವಿದೇಶ

ಬಾಂಗ್ಲಾದೇಶ: ರೈಲು ಅಪಘಾತದಲ್ಲಿ 15 ಸಾವು, 100 ಕ್ಕೂ ಹೆಚ್ಚು ಮಂದಿಗೆ ಗಾಯ

Srinivas Rao BV

ಢಾಕಾ: ಬಾಂಗ್ಲಾದೇಶದಲ್ಲಿ ಎರಡು ರೈಲುಗಳ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದರೆ, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಯನ್ನು ಗಮನಿಸಿದರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
 
ಬಾಂಗ್ಲಾದೇಶದ ಪೂರ್ವದಲ್ಲಿರುವ ಭೈರಾಮ್ ನಲ್ಲಿ ಸರಕು ಸಾಗಣೆ ರೈಲು ಪ್ರಯಾಣಿಕ ರೈಲಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ರೈಲು ಹಳಿತಪ್ಪಿ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"ಈ ವರೆಗೂ 15 ಶವಗಳು ಪತ್ತೆಯಾಗಿವೆ.ಹಲವರು ಗಾಯಗೊಂಡಿದ್ದಾರೆ" ಎಂದು ಭೈರಬ್‌ನ ಸರ್ಕಾರಿ ಆಡಳಿತಾಧಿಕಾರಿ ಸಾದಿಕುರ್ ರೆಹಮಾನ್ ಎಎಫ್ ಪಿ ಗೆ ತಿಳಿಸಿದ್ದಾರೆ. ರಾಜಧಾನಿ ಢಾಕಾದಿಂದ ಈಶಾನ್ಯಕ್ಕೆ 60 ಕಿಲೋಮೀಟರ್ (38 ಮೈಲುಗಳು) ದೂರದಲ್ಲಿ ಈ ಅಪಘಾತ ಸಂಭವಿಸಿದೆ.
 

SCROLL FOR NEXT