ವಿದೇಶ

ಭಾರತ, ಆಫ್ರಿಕಾದಿಂದ ಆಗಮಿಸುವವರಿಗೆ 1000 ಡಾಲರ್ ತೆರಿಗೆ ವಿಧಿಸುತ್ತಿದೆ ಈ ದೇಶ!

Srinivas Rao BV

ಎಲ್ ಸಾಲ್ವಡಾರ್: ಮಧ್ಯ ಅಮೇರಿಕನ್ ರಾಷ್ಟ್ರವಾಗಿರುವ ಎಲ್ ಸಾಲ್ವಡಾರ್ ಆಫ್ರಿಕಾ, ಭಾರತದ ಪ್ರಯಾಣಿಕರಿಗೆ 1,000 ಡಾಲರ್ ತೆರಿಗೆಯನ್ನು ವಿಧಿಸುತ್ತಿದೆ. 

ಎಲ್ ಸಾಲ್ವಡಾರ್ ಮೂಲಕ ಅಮೇರಿಕಾಗೆ ವಲಸೆ ಹೋಗುವವರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶುಲ್ಕವನ್ನು ಈ ಪರಿಪ್ರಮಾಣದಲ್ಲಿ ವಿಧಿಸಲಾಗುತ್ತಿದೆ. 

ಭಾರತದ ಪಾಸ್ ಪೋರ್ಟ್ ಅಥವಾ ಆಫ್ರಿಕಾದ ಯಾವುದೇ 50 ದೇಶಗಳ ಪಾಸ್ಪೋರ್ಟ್ ನೊಂದಿಗೆ ಪ್ರಯಾಣಿಸುವವರು ಈ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಎಲ್ ಸಾಲ್ವಡಾರ್ ಪೋರ್ಟ್ ಪ್ರಾಧಿಕಾರ ವೆಬ್ ಸೈಟ್ ನಲ್ಲಿ ತಿಳಿಸಿದೆ.

ಇದರಿಂದ ಸಂಗ್ರಹಿಸಿದ ಹಣವನ್ನು ರಾಷ್ಟ್ರದ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುಧಾರಿಸಲು ಬಳಸಲಾಗುವುದು ಎಂದು ಪ್ರಾಧಿಕಾರ ಹೇಳಿದೆ.

ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ, US ಸಹಾಯಕ ಕಾರ್ಯದರ್ಶಿ ಬ್ರಿಯಾನ್ ನಿಕೋಲ್ಸ್ ಅವರನ್ನು ಭೇಟಿಯಾಗಿ, ಇತರ ವಿಷಯಗಳ ಜೊತೆಗೆ "ಅನಿಯಮಿತ ವಲಸೆಯನ್ನು ಪರಿಹರಿಸುವ ಪ್ರಯತ್ನಗಳ" ಕುರಿತು ಚರ್ಚಿಸಿದರು.

ಆಫ್ರಿಕಾ ಮತ್ತು ಭಾರತದ 57 ದೇಶಗಳ ಪಟ್ಟಿಯಿಂದ ಬರುವ ಪ್ರಯಾಣಿಕರನ್ನು ಪ್ರತಿದಿನ ಸಾಲ್ವಡಾರ್ ಅಧಿಕಾರಿಗಳಿಗೆ ತಿಳಿಸಲು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ.

SCROLL FOR NEXT