ವಿದೇಶ

ದಕ್ಷಿಣಕ್ಕೆ ಸ್ಥಳಾಂತರಗೊಳಿಸಲು ಗಾಜಾ ನಿವಾಸಿಗಳಿಗೆ ಐಡಿಎಫ್ ಸಲಹೆ

Srinivas Rao BV

ಗಾಜಾ: ಇಸ್ರೇಲ್ ನ ರಕ್ಷಣಾ ಪಡೆಗಳು ಗಾಜಾ ನಿವಾಸಿಗಳಿಗೆ ತಕ್ಷಣವೇ ದಕ್ಷಿಣ ಪ್ರದೇಶಕ್ಕೆ ಸ್ಥಳಾಂತರೊಳ್ಳುವಂತೆ ಸಲಹೆ ನೀಡಿದೆ.  ಗಾಜಾದಲ್ಲಿ ಇಸ್ರೇಲಿ ಭೂಸೇನೆ ಕಾರ್ಯಾಚರಣೆಯನ್ನು ವಿಸ್ತರಿಸಲಿರುವ ಹಿನ್ನೆಲೆಯಲ್ಲಿ ಸೇನೆ ಈ ಸಲಹೆಯನ್ನು ನೀಡಿದೆ. 

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಬಗ್ಗೆ ಐಡಿಎಫ್ ನ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ಗಾಜಾ ಹಾಗೂ ಗಾಜಾ ನಗರದ ನಾಗರಿಕರು ತಾತ್ಕಾಲಿಕವಾಗಿ ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಳ್ಳುವಂತೆ ಕರೆ ನೀಡಿದ್ದಾರೆ, ಒಮ್ಮೆ ತೀವ್ರವಾದ ಪರಿಸ್ಥಿತಿಗಳು ಕೊನೆಗೊಂಡ ನಂತರ ವಾಪಸ್ ಗಾಜಾಕ್ಕೆ ಮರಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ನಿಮ್ಮ ಸುರಕ್ಷತೆ ದೃಷ್ಟಿಯಿಂದ ನೀವು ದಕ್ಷಿಣ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದು ಸೂಕ್ತ ಎಂದು ಇಸ್ರೇಲ್ ರಕ್ಷಣಾ ಪಡೆಗಳ ತುರ್ತು ಸಲಹೆ ಇದೆ ಎಂದು ವಕ್ತಾರರು ಘೋಷಿಸಿದ್ದಾರೆ. 

ಗಾಜಾದಲ್ಲಿ ನಾಗರಿಕರ ನಡುವೆ, ಶಾಲೆಗಳು, ಮಸೀದಿ, ಆಸ್ಪತ್ರೆಗಳ ನಡುವೆ ಶಸ್ತ್ರಾಸ್ತ್ರಗಳು ಹಾಗೂ ಉಗ್ರಪಡೆಯನ್ನು ನಿಯೋಜಿಸುವ ಮೂಲಕ ನಿಮ್ಮ ಜೀವಗಳಿಗೆ ಆಪತ್ತು ತಂದೊಡ್ಡುತ್ತಿದೆ ಎಂದು ವಕ್ತಾರರು ಎಚ್ಚರಿಕೆ ನೀಡಿದ್ದಾರೆ. 

SCROLL FOR NEXT