ಜಿಲ್ ಬೈಡನ್(ಸಂಗ್ರಹ ಚಿತ್ರ) 
ವಿದೇಶ

ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಗೆ ಕೋವಿಡ್ ಪಾಸಿಟಿವ್, ಅಧ್ಯಕ್ಷ ಜೊ ಬೈಡನ್ ಗೆ ನೆಗೆಟಿವ್

ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಶ್ವೇತಭವನ ತಿಳಿಸಿದೆ. ಆದರೆ ಅಧ್ಯಕ್ಷ ಜೊ ಬೈಡನ್ ಅವರಿಗೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.

ವಾಷಿಂಗ್ಟನ್: ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಶ್ವೇತಭವನ ತಿಳಿಸಿದೆ. ಆದರೆ ಅಧ್ಯಕ್ಷ ಜೊ ಬೈಡನ್ ಅವರಿಗೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.

72 ವರ್ಷದ ಜಿಲ್ ಬೈಡನ್  ಅವರಿಗೆ ಕೋವಿಡ್ ನ ಸೌಮ್ಯ ಲಕ್ಷಣಗಳು ಕಂಡುಬಂದಿದೆ. ರೆಹೋಬೋತ್ ಬೀಚ್‌ನಲ್ಲಿರುವ ದಂಪತಿ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಶ್ವೇತಭವನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

ಜಿಲ್ ಬೈಡನ್ ಅವರಿಗೆ 2022ರ ಆಗಸ್ಟ್ ನಲ್ಲಿ ಕೂಡ ಕೋವಿಡ್ ಲಕ್ಷಣ ಕಾಣಿಸಿಕೊಂಡಿತ್ತು. ಜೊ ಬೈಡನ್ ಅವರಿಗೆ ಸಹ ಕಳೆದ ವರ್ಷ ಜುಲೈ 2022ರಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು. 

ಈ ವಾರ ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು ಅದರಲ್ಲಿ ಜೊ ಬೈಡನ್ ಅವರು ಸಹ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 7ರಂದು ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಸೆಪ್ಟೆಂಬರ್ 8ರಂದು ಶೃಂಗಸಭೆಯ ಹೊರಗೆ ಪ್ರಧಾನಿ ಮೋದಿಯವರ ಜೊತೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

SCROLL FOR NEXT