ಪಿಐಎ ವಿಮಾನ
ಪಿಐಎ ವಿಮಾನ 
ವಿದೇಶ

ಆರ್ಥಿಕ ಬಿಕ್ಕಟ್ಟು: ರಾಷ್ಟ್ರೀಯ ವಿಮಾನಯಾನ ಸಂಸ್ಥೆ PIA ಮಾರಾಟಕ್ಕೆ ಪಾಕಿಸ್ತಾನ ಮುಂದು

Nagaraja AB

ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನ ತನ್ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಪಾಕಿಸ್ತಾನ ಇಂಟರ್ ನ್ಯಾಶನಲ್ ಏರ್ ಲೈನ್ಸ್ (PIA) ಬಹುಪಾಲು ಷೇರುಗಳನ್ನು ಮಾರಾಟ ಮಾಡಲು ಅಲ್ಲಿನ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತು ಸರ್ಕಾರಿ ಅಧಿಕಾರಿಯನ್ನು ಉಲ್ಲೇಖಿಸಿ ಎಆರ್‌ವೈ ನ್ಯೂಸ್ ವರದಿ ಮಾಡಿದೆ.

PIA ಖಾಸಗೀಕರಣ ಪ್ರಕ್ರಿಯೆಯ ಮುಕ್ತಾಯದ ಸಮೀಪದಲ್ಲಿ ಸರ್ಕಾರ ಮಾರಾಟ ಮಾಡುವ ಷೇರುಗಳ ಸಂಖ್ಯೆಯನ್ನು ಖಾಸಗೀಕರಣ ಆಯೋಗವು ನಿರ್ಧರಿಸುತ್ತದೆ ಎಂದು ಪ್ರಧಾನ ಮಂತ್ರಿಯ ಆರ್ಥಿಕ ಮತ್ತು ಇಂಧನ ಸಂಯೋಜಕ ಬಿಲಾಲ್ ಅಜರ್ ಕಯಾನಿ ಅವರು ARY ನ್ಯೂಸ್ ಶೋ 'ಖಬರ್' ನಲ್ಲಿ ಹೇಳಿದ್ದಾರೆ.

ಅಜರ್ ಕಯಾನಿ ಪ್ರಕಾರ,ಪಾಕಿಸ್ತಾನ ಏರ್ ಲೈನ್ಸ್ ನ್ನು ಸಂಪೂರ್ಣ ಶೇಕಡಾ 100 ರಷ್ಟು ಷೇರುಗಳಿಗೆ ಸುಮಾರು ಶೇ. 51ರಷ್ಟು ಮಾರಾಟ ಮಾಡಲು ಸರ್ಕಾರವು ಪರಿಗಣಿಸುತ್ತಿದೆ. PIA ಯ ಆಡಳಿತಾತ್ಮಕ ನಿಯಂತ್ರಣವನ್ನು ಬಹುಪಾಲು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಘಟಕಕ್ಕೆ ವರ್ಗಾಯಿಸಲಾಗುವುದು ಎಂದು ಕಯಾನಿ ಹೇಳಿದ್ದಾರೆ.

SCROLL FOR NEXT