ವಿಶ್ವಸಂಸ್ಥೆ
ವಿಶ್ವಸಂಸ್ಥೆ 
ವಿದೇಶ

Iran attacks Israel: ಜಗತ್ತಿಗೆ ಇನ್ನೊಂದು ಯುದ್ದ ನಿಭಾಯಿಸುವ ಶಕ್ತಿ ಇಲ್ಲ- ವಿಶ್ವಸಂಸ್ಥೆ

Srinivasamurthy VN

ವಾಷಿಂಗ್ಟನ್: ಇಸ್ರೇಲ್ ಮೇಲಿನ ಇರಾನ್ ದಾಳಿ ಬೆನ್ನಲ್ಲೇ ಜಗತ್ತಿಗೆ ಮತ್ತೊಂದು ಆವರಿಸುವ ಭೀತಿ ಶುರುವಾಗಿದ್ದು, ಜಗತ್ತಿಗೆ ಮತ್ತೊಂದು ಯುದ್ದ ನಿಭಾಯಿಸುವ ಶಕ್ತಿ ಇಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

ಇಸ್ರೇಲ್ ಮೇಲೆ ವಾಯುದಾಳಿ ನಡೆಸಿದ ಇರಾನ್‌ನ ನಡೆಯನ್ನು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೊನಿಯೊ ಗುಟೇರಸ್ ತೀವ್ರವಾಗಿ ಖಂಡಿಸಿದ್ದು, ಮಧ್ಯಪ್ರಾಚ್ಯಕ್ಕಾಗಲಿ, ವಿಶ್ವಕ್ಕಾಗಲಿ ಮತ್ತೊಂದು ಯುದ್ಧವನ್ನು ನಿಭಾಯಿಸುವಷ್ಟು ಶಕ್ತಿಇಲ್ಲ ಎಂದು ಹೇಳಿದ್ದಾರೆ. 'ಮಧ್ಯಪ್ರಾಚ್ಯದಲ್ಲಿ ಸೇನಾಪಡೆಗಳ ಮುಖಾಮುಖಿಗಳಿಗೆ ಕಾರಣವಾಗುವ ಯಾವುದೇ ಕ್ರಮವನ್ನು ತಪ್ಪಿಸಲು ಉಭಯ ಪಕ್ಷಗಳು ಗರಿಷ್ಠ ಸಂಯಮವನ್ನು ಕಾಪಾಡಿಕೊಳ್ಳಬೇಕು. ಅಲ್ಲದೆ ಯುದ್ಧ ವಿರಾಮಕ್ಕೆ ಆಗ್ರಹಿಸಿದ್ದಾರೆ.

ಪ್ರದೇಶವ್ಯಾಪಿ ಯುದ್ಧಗಳು ಹೆಚ್ಚುತ್ತಿರುವುದರ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮಧ್ಯಪ್ರಾಚ್ಯಕ್ಕೋ, ವಿಶ್ವಕ್ಕೋ ಮತ್ತೊಂದು ಯುದ್ಧವನ್ನು ನಿಭಾಯಿಸುವಷ್ಟು ಶಕ್ತಿ ಇಲ್ಲ ಎಂದು ನಾನು ಹಲವು ಬಾರಿ ಒತ್ತಿ ಹೇಳಿದ್ದೇನೆ. ಈ ಯುದ್ಧಗಳನ್ನು ತಕ್ಷಣವೇ ನಿಲ್ಲಿಸುವಂತೆ ನಾನು ಕರೆ ನೀಡುತ್ತೇನೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ತನ್ನ ಕರ್ತವ್ಯದಲ್ಲಿ ವಿಫಲವಾಗಿದ್ದು, ಇಸ್ರೇಲಿ ಆಡಳಿತವು ಕೆಂಪು ರೇಖೆ ಉಲ್ಲಂಘಿಸಿ ಮತ್ತು ಅಂತರಾಷ್ಟ್ರೀಯ ಕಾನೂನಿನ ಮೂಲಭೂತ ತತ್ವಗಳನ್ನು ಉಲ್ಲಂಘಿಸಲು ಅವಕಾಶ ಮಾಡಿಕೊಟ್ಟಿದೆ. ಇಂತಹ ಉಲ್ಲಂಘನೆಗಳು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಲ್ಬಣಗೊಳಿಸಿವೆ ಮತ್ತು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಬೆದರಿಕೆಯನ್ನುಂಟುಮಾಡಿದೆ. ಇಸ್ರೇಲ್ ಮತ್ತೆ ಯಾವುದೇ ಮಿಲಿಟರಿ ಆಕ್ರಮಣವನ್ನು ನಡೆಸಿದರೆ, ಇರಾನ್‌ನ ಪ್ರತಿಕ್ರಿಯೆಯು ಖಚಿತವಾಗಿ ಮತ್ತು ನಿರ್ಣಾಯಕವಾಗಿ ಬಲವಾಗಿರುತ್ತದೆ ಮತ್ತು ಹೆಚ್ಚು ದೃಢವಾಗಿರುತ್ತದೆ ಎಂದು ಇರಾನ್ ಕಿಡಿಕಾರಿದೆ.

ಏ.1ರಂದು ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿನ ಇರಾನ್‌ ರಾಯಭಾರ ಕಚೇರಿ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಭಾನುವಾರ ವಾಯುದಾಳಿ ನಡೆಸಿದೆ. ಉಭಯ ರಾಷ್ಟ್ರಗಳ ನಡುವೆ ಕದನ ಉಲ್ಬಣಗೊಳ್ಳುತ್ತಿದ್ದು, ಇದು ಜಗತ್ತು ಮತ್ತೊಂದು ಯುದ್ಧ ಎದುರಿಸುವ ಭೀತಿ ಸೃಷ್ಟಿಸಿದೆ.

ಜಿ7ಸಭೆ ಕರೆದ ವಿಶ್ವಸಂಸ್ಥೆ

ಇದೇ ವೇಳೆ ಇಂದು ಸಂಜೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಇಸ್ರೇಲ್ ಮೇಲಿನ ಇರಾನ್ ದಾಳಿ ಕುರಿತ ಚರ್ಚೆಯೇ ಪ್ರಮುಖವಾಗಿರಲಿದೆ.

SCROLL FOR NEXT