ಪಾಕಿಸ್ತಾನ ಸೇನಾ ಶರಣಾಗತಿ ಪ್ರತಿಮೆ ಧ್ವಂಸ 
ವಿದೇಶ

ಪಾಕ್ ಸ್ನೇಹಿಯಾಗುತ್ತಿದೆಯೇ Bangladesh?; 1971ರ Pakistan Army ಶರಣಾಗತಿ ಪ್ರತಿಮೆ ಧ್ವಂಸ

ಬಾಂಗ್ಲಾದೇಶದ ವಿಮೋಚನೆಯ ನೆನಪಿಗಾಗಿ ನಿರ್ಮಿಸಲಾಗಿದ್ದ ಪ್ರತಿಮೆಯನ್ನು ಭಾರತ ವಿರೋಧಿ ಗಲಭೆಕೋರರು ಧ್ವಂಸಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ನವದೆಹಲಿ: ಬಾಂಗ್ಲಾದೇಶ ಪಾಕಿಸ್ತಾನದ ಪರವಾಲುತ್ತಿದೆಯೇ ಎಂಬ ಅನುಮಾನ ಮೂಡುತ್ತಿದ್ದು, ಅಲ್ಲಿನ ಹಿಂಸಾಚಾರ ನಡೆಸುತ್ತಿರುವ ಗಲಭೆಕೋರರು ಇದೀಗ ಬಾಂಗ್ಲಾದೇಶದ ವಿಮೋಚನೆಯ ನೆನಪಿಗಾಗಿ ನಿರ್ಮಿಸಲಾಗಿದ್ದ 1971ರ ಪಾಕ್ ಸೇನೆಯ ಶರಣಾಗತಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ.

ಬಾಂಗ್ಲಾದೇಶದ ವಿಮೋಚನೆಯ ನೆನಪಿಗಾಗಿ ನಿರ್ಮಿಸಲಾಗಿದ್ದ ಪ್ರತಿಮೆಯನ್ನು ಭಾರತ ವಿರೋಧಿ ಗಲಭೆಕೋರರು ಧ್ವಂಸಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು 1971 ರ ಯುದ್ಧದ ನಂತರ ಪಾಕಿಸ್ತಾನ ಶರಣಾದ ಕ್ಷಣವನ್ನು ಬಿಂಬಿಸುವ ಪ್ರತಿಮೆಯನ್ನು ಗಲಭೆಕೋರರು ಧ್ವಂಸ ಮಾಡಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

"ಭಾರತ ವಿರೋಧಿ ವಿಧ್ವಂಸಕರಿಂದ ಧ್ವಂಸಗೊಂಡ 1971 ರ ಮುಜಿಬ್‌ನಗರದ ಶಹೀದ್ ಸ್ಮಾರಕ ಸಂಕೀರ್ಣದಲ್ಲಿ ಪ್ರತಿಮೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಲು ದುಃಖವಾಗುತ್ತದೆ ಎಂದು ತಿರುವನಂತಪುರಂ ಕಾಂಗ್ರೆಸ್ ಪಕ್ಷದ ಸಂಸದರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂತೆಯೇ "ಇಂದು ಹಲವಾರು ಸ್ಥಳಗಳಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ, ದೇವಾಲಯಗಳು ಮತ್ತು ಹಿಂದೂ ಮನೆಗಳ ಮೇಲೆ ಅವಮಾನಕರ ದಾಳಿಗಳನ್ನು ನಡೆಸಲಾಗುತ್ತಿದೆ. ಕೆಲ ಮುಸ್ಲಿಂ ನಾಗರಿಕರು ಇತರ ಅಲ್ಪಸಂಖ್ಯಾತರ ಮನೆಗಳು ಮತ್ತು ಪೂಜಾ ಸ್ಥಳಗಳನ್ನು ರಕ್ಷಿಸುತ್ತಿದ್ದಾರೆ ಎಂಬ ವರದಿಗಳು ಬಂದಿವೆ ಎಂದು ಇದೇ ವೇಳೆ ಅವರು ಟ್ವೀಟ್ ಮಾಡಿದ್ದಾರೆ.

1971 ರ ಯುದ್ಧದಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಸೇನೆ ವಿರುದ್ದ ಹೋರಾಡಿ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿತು. ಮಾತ್ರವಲ್ಲದೆ ಪಾಕಿಸ್ತಾನಕ್ಕೆ ಹೀನಾಯ ಹೊಡೆತವನ್ನು ನೀಡಿತ್ತು. ಅಂದಿನ ಭೀಕರ ಕಾಳಗದಲ್ಲಿ ಭಾರತೀಯ ಸೇನೆಯ ದಾಳಿ ಪತರಗುಟ್ಟಿದ್ದ ಪಾಕಿಸ್ತಾನ ಸೇನೆಯ ಮೇಜರ್-ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಅವರು ಭಾರತೀಯ ಸೇನೆ ಮತ್ತು ಬಾಂಗ್ಲಾದೇಶದ ಮುಕ್ತಿ ಬಾಹಿನಿಗೆ 'ಶರಣಾಗತಿ ಪತ್ರ'ಕ್ಕೆ ಸಹಿ ಹಾಕಿದ್ದರು.

ಮೇಜರ್-ಜನರಲ್ ನಿಯಾಜಿ ತನ್ನ 93,000 ಸೈನಿಕರೊಂದಿಗೆ ಭಾರತದ ಪೂರ್ವ ಕಮಾಂಡ್‌ನ ಆಗಿನ ಪ್ರಧಾನ ಕಮಾಂಡಿಂಗ್-ಇನ್-ಚೀಫ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಮುಂದೆ ಶರಣಾದರು. ಇದು 2ನೇ ಜಾಗತಿಕ ಸಮರದ ಬಳಿಕ ನಡೆದ ಅತಿದೊಡ್ಡ ಮಿಲಿಟರಿ ಶರಣಾಗತಿಯಾಗಿದೆ. ಇದನ್ನೇ ವಿವರಿಸುವ ಪ್ರತಿಮೆಯನ್ನು ಅಲ್ಲಿ ನಿರ್ಮಿಸಿ ಬಾಂಗ್ಲಾ ವಿಮೋಚನೆಯನ್ನು ಸ್ಮರಣೀಯವಾಗಿಸಲಾಗಿತ್ತು.

ಆದರೆ ಇದೀಗ ಬಾಂಗ್ಲಾದೇಶ ಗಲಭೆಕೋರರು ಇದನ್ನು ಧ್ವಂಸ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!