ವಾರ್ಸಾದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ  
ವಿದೇಶ

ಪ್ರಜಾಪ್ರಭುತ್ವ ಮತ್ತು ಬಹುತ್ವಕ್ಕೆ ಪರಸ್ಪರ ಬದ್ಧತೆಯಿಂದ ಭಾರತ-ಪೋಲೆಂಡ್ ಸಂಬಂಧ ವೃದ್ಧಿ: ವಾರ್ಸಾದಲ್ಲಿ ಪ್ರಧಾನಿ ಮೋದಿ ಮಾತು

ರಷ್ಯಾ ಮತ್ತು ಉಕ್ರೇನ್ ಎರಡು ವರ್ಷಗಳ ಕಾಲ ಯುದ್ಧದಲ್ಲಿ ತೊಡಗಿದ್ದರೂ ಸಹ, ರಷ್ಯಾ ಮತ್ತು ಪಾಶ್ಚಾತ್ಯ ದೇಶಗಳೊಂದಿಗೆ ಭಾರತ ನಿಕಟ ಸಂಪರ್ಕ ಹೊಂದಿದೆ ಎಂದಿದ್ದಾರೆ.

ವಾರ್ಸಾ(ಪೋಲೆಂಡ್): ದಶಕಗಳಿಂದ, ಎಲ್ಲಾ ದೇಶಗಳಿಂದ ಸಮಾನ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದ ಭಾರತ ಇಂದು ಎಲ್ಲಾ ದೇಶಗಳೊಂದಿಗೆ ನಿಕಟತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಮಧ್ಯ ಯುರೋಪ್ ಪ್ರವಾಸದ ಭಾಗವಾಗಿ ಪೋಲೆಂಡ್ ರಾಜಧಾನಿ ವಾರ್ಸಾದಲ್ಲಿ ಹೇಳಿದ್ದಾರೆ. ,

ರಷ್ಯಾ ಮತ್ತು ಉಕ್ರೇನ್ ಎರಡು ವರ್ಷಗಳ ಕಾಲ ಯುದ್ಧದಲ್ಲಿ ತೊಡಗಿದ್ದರೂ ಸಹ, ರಷ್ಯಾ ಮತ್ತು ಪಾಶ್ಚಾತ್ಯ ದೇಶಗಳೊಂದಿಗೆ ಭಾರತ ನಿಕಟ ಸಂಪರ್ಕ ಹೊಂದಿದೆ ಎಂದಿದ್ದಾರೆ.

ನಿನ್ನೆ ಬುಧವಾರ ಸಂಜೆ ವಾರ್ಸಾದಲ್ಲಿ ಭಾರತೀಯ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಅವರು ಮಾತನಾಡಿದರು. 45 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಭೇಟಿ ನೀಡುತ್ತಿದ್ದಾರೆ. ಭಾರತ-ಪೋಲೆಂಡ್ ಬಾಂಧವ್ಯವನ್ನು ಬಲಪಡಿಸಲು ಅಲ್ಲಿನ ಅಧ್ಯಕ್ಷ ಆಂಡ್ರೆಜ್ ದುಡಾ ಮತ್ತು ಪ್ರಧಾನಿ ಡೊನಾಲ್ಡ್ ಟಸ್ಕ್ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿರುವುದಾಗಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ಭಾರತವು ಪ್ರಜಾಪ್ರಭುತ್ವದ ತಾಯಿ ಮತ್ತು ಪೋಲೆಂಡ್‌ನೊಂದಿಗೆ ಹಂಚಿಕೊಂಡ ಮೌಲ್ಯಗಳು ಎರಡು ದೇಶಗಳನ್ನು ಹತ್ತಿರಕ್ಕೆ ತರುತ್ತವೆ ಎಂದು ಅವರು ಹೇಳಿದರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಅನಿವಾಸಿ ಭಾರತೀಯರು ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದ ಮೋದಿ, ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ ಆಪರೇಷನ್ ಗಂಗಾ ಕಾರ್ಯಾಚರಣೆಯ ಯಶಸ್ಸಿನಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು.

ಭಾರತಕ್ಕೆ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಆಗಲು ಮತ್ತು ಅದರ ಬೆಳವಣಿಗೆಯ ಕಥೆಯ ಭಾಗವಾಗಲು ಅವರು ಪೋಲೆಂಡ್ ನ ಭಾರತೀಯ ಸಮುದಾಯಕ್ಕೆ ಕರೆ ನೀಡಿದರು. ಡೋಬ್ರಿ ಮಹಾರಾಜ, ಕೊಲ್ಲಾಪುರ ಮತ್ತು ಮಾಂಟೆ ಕ್ಯಾಸಿನೊ ಕದನದ ಸ್ಮಾರಕಗಳು ಉಭಯ ದೇಶಗಳ ನಡುವಿನ ರೋಮಾಂಚಕ ಜನರ-ಜನರ ಬಾಂಧವ್ಯದ ಉಜ್ವಲ ಉದಾಹರಣೆಗಳಾಗಿವೆ ಎಂದರು.

ಕಳೆದ 10 ವರ್ಷಗಳಲ್ಲಿ ಭಾರತ ಸಾಧಿಸಿರುವ ಪರಿವರ್ತನಾಶೀಲ ಪ್ರಗತಿಯ ಕುರಿತು ಮಾತನಾಡಿದ ಪ್ರಧಾನಿ, ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2047 ರ ವೇಳೆಗೆ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ ಅವರ ದೃಷ್ಟಿಯ ಬಗ್ಗೆ ವಿಕಸಿತ ಭಾರತ ಪರಿಕಲ್ಪನೆ ಬಗ್ಗೆ ಮಾತನಾಡಿದರು.

ವಾರ್ಸಾದಲ್ಲಿ ಬಂದಿಳಿದ ನಂತರ, ಮೋದಿಯವರು ವಾರ್ಸಾದಲ್ಲಿನ ಡೋಬ್ರಿ ಮಹಾರಾಜ ಸ್ಮಾರಕಕ್ಕೆ ಭೇಟಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT