ಕೆನಡಾ ಸಂಸತ್ತು  
ವಿದೇಶ

1984ರ ಸಿಖ್ ವಿರೋಧಿ ದಂಗೆಯನ್ನು ನರಮೇಧ ಎಂದು ಘೋಷಿಸುವ ಪ್ರಸ್ತಾವನೆ: ಕೆನಡಾ ಸಂಸತ್ತು ತಿರಸ್ಕಾರ

ಈ ಕ್ರಮವನ್ನು ವಿರೋಧಿಸಿದ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಈ ಮಸೂದೆಯನ್ನು ವಿರೋಧಿಸಿದ ಏಕೈಕ ಸಂಸದರಾಗಿದ್ದಾರೆ.

ಚಂಡೀಗಢ: ಚಂದ್ರ ಆರ್ಯರಂತಹ ಸಂಸದರ ತೀವ್ರ ವಿರೋಧದ ನಡುವೆಯೂ 1984ರ ಸಿಖ್ ವಿರೋಧಿ ದಂಗೆಯನ್ನು ನರಮೇಧ ಎಂದು ಘೋಷಿಸುವ ಪ್ರಸ್ತಾವನೆಯನ್ನು ಕೆನಡಾ ಸಂಸತ್ತು ತಿರಸ್ಕರಿಸಿದೆ.

ಈ ಪ್ರಸ್ತಾಪವನ್ನು ವಿರೋಧಿಸಿದ್ದಕ್ಕಾಗಿ ಸಂಸತ್ತಿನ ಕಟ್ಟಡದೊಳಗೆ ಬೆದರಿಕೆಗಳನ್ನು ಎದುರಿಸಬೇಕಾಯಿತು ಎಂದು ಚಂದ್ರ ಆರ್ಯ ಹೇಳಿದ್ದು, ಇದು "ರಾಜಕೀಯವಾಗಿ ಪ್ರಬಲವಾದ ಖಲಿಸ್ತಾನಿ ಲಾಬಿ" ಯಿಂದ ಪ್ರಭಾವಿತವಾಗಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಕೆನಡಿಯನ್ನರು ತಮ್ಮ ಸ್ಥಳೀಯ ಸಂಸತ್ ಸಂಸದರೊಂದಿಗೆ ಅಂತಹ ಪ್ರಸ್ತಾವನೆಯನ್ನು ತಮ್ಮ ಬದ್ಧತೆ ತೋರಿಸಬೇಕೆಂದು ಒತ್ತಾಯಿಸಿದ್ದಾರೆ.

ನ್ಯೂ ಡೆಮಾಕ್ರಟಿಕ್ ಪಾರ್ಟಿ (ND) ಸಂಸದ ಸುಖ್ ಧಲಿವಾಲ್ ಅವರು ವಿದೇಶಾಂಗ ವ್ಯವಹಾರಗಳು ಮತ್ತು ಅಂತರಾಷ್ಟ್ರೀಯ ಅಭಿವೃದ್ಧಿಯ ಹೌಸ್ ಆಫ್ ಕಾಮನ್ಸ್ ಸ್ಥಾಯಿ ಸಮಿತಿಯ ಮುಂದೆ ಈ ಪ್ರಸ್ತಾಪವನ್ನು ಮಂಡಿಸಿದ್ದರು.

ಈ ಕ್ರಮವನ್ನು ವಿರೋಧಿಸಿದ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಈ ಮಸೂದೆಯನ್ನು ವಿರೋಧಿಸಿದ ಏಕೈಕ ಸಂಸದರಾಗಿದ್ದಾರೆ.

ಈ ದುರಂತ ಮತ್ತು ಭೀಕರ ಗಲಭೆಗಳನ್ನು ನರಮೇಧ ಎಂದು ಹಣೆಪಟ್ಟಿ ಹಚ್ಚುವುದು ದಾರಿತಪ್ಪಿಸುವ ಕ್ರಮವಾಗಿದ್ದು, ನ್ಯಾಯಸಮ್ಮತವಲ್ಲ. ಅಂತಹ ಸಮರ್ಥನೆಯು ಹಿಂದೂ ವಿರೋಧಿ ಶಕ್ತಿಗಳ ಕಾರ್ಯಸೂಚಿಯನ್ನು ಉತ್ತೇಜಿಸುತ್ತದೆ ಮತ್ತು ಕೆನಡಾದಲ್ಲಿ ಹಿಂದೂ ಮತ್ತು ಸಿಖ್ ಸಮುದಾಯಗಳ ನಡುವೆ ಬಿರುಕು ಉಂಟುಮಾಡುವ ಅಪಾಯವಿದೆ. ಈ ವಿಭಜಕ ಅಂಶಗಳು ಸಾಮರಸ್ಯವನ್ನು ಅಸ್ಥಿರಗೊಳಿಸುವ ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗಲು ಬಿಡಬಾರದು ಎಂದು ಎಕ್ಸ್ ಖಾತೆಯಲ್ಲಿ ಒತ್ತಾಯಿಸಿದ್ದಾರೆ.

ಕೆನಡಾದ ಸಂಸತ್ತು 1984 ರ ಗಲಭೆಗಳನ್ನು ನರಮೇಧ ಎಂದು ಘೋಷಿಸುವುದನ್ನು ತಡೆಯುವ ಏಕೈಕ ಮಾರ್ಗವೆಂದರೆ ಪ್ರತಿಯೊಬ್ಬ ಸಂಸದರು ಅಥವಾ ಸಾಕಷ್ಟು ಸಂಖ್ಯೆಯಲ್ಲಿ ಸಂಸದರು ಎದ್ದುನಿಂತು ಸರ್ವಾನುಮತದ ಒಪ್ಪಿಗೆ ಕೇಳಿದಾಗ ಇಲ್ಲ ಎಂದು ಹೇಳಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT