ರೇ ಮಿಸ್ಟೀರಿಯೊ ಸೀನಿಯರ್‌ 
ವಿದೇಶ

WWE ಸೂಪರ್‌ ಸ್ಟಾರ್ ರೇ ಮಿಸ್ಟೀರಿಯೊ ಸೀನಿಯರ್‌ ಇನ್ನಿಲ್ಲ

ಡಿಸೆಂಬರ್ 20ರಂದು ನಿಧನರಾದರು ಎಂದು ಅವರ ಕುಟುಂಬ ದೃಢಪಡಿಸಿದೆ. ಮಿಸ್ಟೀರಿಯೊ ಸೀನಿಯರ್ ಅವರು ಮೆಕ್ಸಿಕೋದಲ್ಲಿನ ಲುಚಾ ಲಿಬ್ರೆ ಕೂಟದಲ್ಲಿ ಖ್ಯಾತಿ ಗಳಿಸಿದ್ದರು.

ಮೆಕ್ಸಿಕೊ: ಖ್ಯಾತ ಮೆಕ್ಸಿಕನ್ ಕುಸ್ತಿಪಟು, ಡಬ್ಲ್ಯೂ ಡಬ್ಲ್ಯೂಇ ಸೂಪರ್‌ಸ್ಟಾರ್ ರೇ ಮಿಸ್ಟೀರಿಯೊ ಜೂನಿಯರ್ ಅವರ ಚಿಕ್ಕಪ್ಪ ರೇ ಮಿಸ್ಟೀರಿಯೊ ಸೀನಿಯರ್ (66) ಅವರು ನಿಧನರಾಗಿದ್ದಾರೆ.

ಡಿಸೆಂಬರ್ 20ರಂದು ನಿಧನರಾದರು ಎಂದು ಅವರ ಕುಟುಂಬ ದೃಢಪಡಿಸಿದೆ. ಮಿಸ್ಟೀರಿಯೊ ಸೀನಿಯರ್ ಅವರು ಮೆಕ್ಸಿಕೋದಲ್ಲಿನ ಲುಚಾ ಲಿಬ್ರೆ ಕೂಟದಲ್ಲಿ ಖ್ಯಾತಿ ಗಳಿಸಿದ್ದರು. ವರ್ಲ್ಡ್ ವ್ರೆಸ್ಲಿಂಗ್ ಅಸೋಸಿಯೇಷನ್ ಮತ್ತು ಲುಚಾ ಲಿಬ್ರೆ ಎಎಎ ವರ್ಲ್ಡ್‌ ವೈಡ್‌ ನಂತಹ ಪ್ರಮುಖ ಸಂಸ್ಥೆಗಳೊಂದಿಗೆ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗಳಿಸಿದರು. ಇದನ್ನು ಸಾಮಾನ್ಯವಾಗಿ ಮೆಕ್ಸಿಕೋದ ಡಬ್ಲ್ಯೂ ಡಬ್ಲ್ಯೂಇ ಸಮಾನವೆಂದು ಪರಿಗಣಿಸಲಾಗುತ್ತದೆ.

ರೇ ಮಿಸ್ಟೀರಿಯೊ ಸೀನಿಯರ್‌ ಅವರು 1990 ರಲ್ಲಿ ವಿಶ್ವ ಚಾಂಪಿಯನ್‌ ಶಿಪ್ ವ್ರೆಸ್ಲಿಂಗ್‌ ನ ಸ್ಟಾರ್‌ ಕೇಡ್‌ನಂತಹ ಈವೆಂಟ್‌ಗಳನ್ನು ಒಳಗೊಂಡಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅವರ ಹಾರುವ ಶೈಲಿಯಿಂದ ಹೆಸರುವಾಸಿಯಾಗಿದ್ದಾರೆ.

ಮಿಸ್ಟೀರಿಯೊ ಅವರ ನಿಜವಾದ ಹೆಸರು ಮಿಗುಯೆಲ್ ಏಂಜೆಲ್ ಲೋಪೆಜ್ ಡಯಾಸ್. ಅವರ ಮರಣದ ವಿಚಾರವನ್ನು ಲುಚಾ ಲಿಬ್ರೆ ತನ್ನ ಎಕ್ಸ್‌ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದೆ. ಮಿಸ್ಟೀರಿಯೋ ಸೀನಿಯರ್‌ ಅವರ ಸೋದರ ಸಂಬಂಧಿ ರೇ ಮಿಸ್ಟೀರಿಯೋ ಅವರು ಡಬ್ಲ್ಯೂಡಬ್ಲ್ಯೂಇ ಕೂಟದಲ್ಲಿ ಪ್ರಸಿದ್ದರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT