ಪ್ರತ್ಯಕ್ಷ ದೃಶ್ಯ 
ವಿದೇಶ

ತನ್ನ ಸೈನಿಕರ ಸಾವಿಗೆ ಸೇಡು: ಸಿರಿಯಾ-ಇರಾಕ್ ಮೇಲೆ ಅಮೆರಿಕಾ ವೈಮಾನಿಕ ದಾಳಿ; 40 ಮಂದಿ ಸಾವು!

ಸಿರಿಯಾ ಮತ್ತು ಇರಾಕ್‌ನಲ್ಲಿ ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆಗಳ ನೆಲೆಗಳ ಮೇಲೆ ಅಮೆರಿಕಾ ವೈಮಾನಿಕ ದಾಳಿ ನಡೆಸಿದ್ದು 40 ಮಂದಿ ಸಾವನ್ನಪ್ಪಿದ್ದಾರೆ.

ವಾಷಿಂಗ್ಟನ್: ಸಿರಿಯಾ ಮತ್ತು ಇರಾಕ್‌ನಲ್ಲಿ ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆಗಳ ನೆಲೆಗಳ ಮೇಲೆ ಅಮೆರಿಕಾ ವೈಮಾನಿಕ ದಾಳಿ ನಡೆಸಿದ್ದು 40 ಮಂದಿ ಸಾವನ್ನಪ್ಪಿದ್ದಾರೆ.

ವಾಸ್ತವವಾಗಿ, ಅಮೆರಿಕಾ ವೈಮಾನಿಕ ದಾಳಿಯಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿ 80ಕ್ಕೂ ಹೆಚ್ಚು ಗುರಿಗಳನ್ನು ಬಾಂಬ್ ದಾಳಿ ಮಾಡಿದೆ. ಜೋರ್ಡಾನ್‌ನ ಸೇನಾ ನೆಲೆಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಅಮೆರಿಕದ ಮೂವರು ಸೈನಿಕರು ಸಾವನ್ನಪ್ಪಿದ್ದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕದ ಈ ಕ್ರಮವನ್ನು ತೆಗೆದುಕೊಂಡಿದೆ. ಈ ದಾಳಿಯು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಮತ್ತೊಮ್ಮೆ ತೀವ್ರಗೊಳಿಸಿದೆ.

ಶುಕ್ರವಾರ ಮಧ್ಯರಾತ್ರಿ ಸಿರಿಯಾ ಮತ್ತು ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆಗಳ ನೆಲೆಗಳ ಮೇಲೆ ಅಮೆರಿಕಾ ಸೇನೆಯ ಸೆಂಟ್ರಲ್ ಕಮಾಂಡ್ 125ಕ್ಕೂ ಹೆಚ್ಚು ಬಾಂಬ್‌ಗಳೊಂದಿಗೆ ವೈಮಾನಿಕ ದಾಳಿ ನಡೆಸಿದೆ. ಯುಎಸ್ ಮಿಲಿಟರಿ ಪಡೆಗಳು ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ 85ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ಮಾಡಿದೆ ಎಂದು ಸೆಂಟ್ಕಾಮ್ ಹೇಳಿಕೆಯಲ್ಲಿ ತಿಳಿಸಿದೆ.

ವಾಯುದಾಳಿಗಳು ಕಮಾಂಡ್ ಮತ್ತು ಕಂಟ್ರೋಲ್ ಕಾರ್ಯಾಚರಣೆಗಳು, ಗುಪ್ತಚರ ಕೇಂದ್ರಗಳು, ರಾಕೆಟ್‌ಗಳು ಮತ್ತು ಕ್ಷಿಪಣಿಗಳು, ಲಾಜಿಸ್ಟಿಕ್ಸ್ ಮತ್ತು ಭಯೋತ್ಪಾದಕ ಸಂಘಟನೆಗಳ ಯುದ್ಧಸಾಮಗ್ರಿಗಳನ್ನು ಗುರಿಯಾಗಿರಿಸಿಕೊಂಡಿವೆ. ಆದಾಗ್ಯೂ, ದಾಳಿಗಳು ಎಷ್ಟು ನಿಖರವಾಗಿವೆ ಅಥವಾ ಅವು ಎಷ್ಟು ಹಾನಿಯನ್ನುಂಟುಮಾಡಿವೆ ಎಂಬುದನ್ನು US ಮಿಲಿಟರಿ ಬಹಿರಂಗಪಡಿಸಿಲ್ಲ.

ಅಮೆರಿಕಾದ ವೈಮಾನಿಯ ದಾಳಿಯಲ್ಲಿ ಪೂರ್ವ ಸಿರಿಯಾದಲ್ಲಿ ಕನಿಷ್ಠ 18 ಇರಾನ್ ಪರ ಹೋರಾಟಗಾರರು ಹತ್ಯೆಯಾಗಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ಯುದ್ಧ ಮಾನಿಟರ್ ಹೇಳಿದೆ. ಪೂರ್ವ ಡೀರ್ ಎಝೋರ್ ಪ್ರಾಂತ್ಯದಲ್ಲಿ ಇರಾನ್ ಬೆಂಬಲಿತ ಗುಂಪುಗಳ 17 ಗುರಿಗಳನ್ನು ಯುದ್ಧವಿಮಾನಗಳು ನಾಶಪಡಿಸಿವೆ ಎಂದು ವೀಕ್ಷಣಾಲಯ ತಿಳಿಸಿದೆ. ಇವುಗಳಲ್ಲಿ ಮೂರು ದಾಳಿಗಳು ಅಲ್-ಮಯಾದೀನ್ ಅನ್ನು ಗುರಿಯಾಗಿಸಿಕೊಂಡಿದ್ದು ಒಂದು ದಾಳಿಯು ಇರಾಕ್ ಗಡಿಯ ಸಮೀಪ ಅಲ್ಬು ಕಮಾಲ್ ಮೇಲೆ ಬಾಂಬ್ ದಾಳಿ ನಡೆಸಿತು.

ಸಿರಿಯನ್ ಗಡಿಯುದ್ದಕ್ಕೂ ಪಶ್ಚಿಮ ಇರಾಕ್‌ನಲ್ಲಿರುವ ಇರಾನ್ ಪರ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ ಶಸ್ತ್ರಾಸ್ತ್ರ ಗೋದಾಮು ಮತ್ತು ಕಮಾಂಡ್ ಸೆಂಟರ್ ಅನ್ನು ಗುರಿಯಾಗಿರಿಸಲಾಗಿದೆ ಎಂದು ಇರಾಕಿನ ಭದ್ರತಾ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮುಂದಿನ ಸಿಜೆಐ ಯಾರು?: ಉತ್ತರಾಧಿಕಾರಿ ಹೆಸರು ಕೇಂದ್ರಕ್ಕೆ ಶಿಫಾರಸು ಮಾಡಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ

ಅಧಿಕಾರಿಗಳು ಪತ್ರಿಕೆ ಓದಿಲ್ಲವೇ? ದೇಶವನ್ನು ಕೆಟ್ಟದಾಗಿ ತೋರಿಸಲಾಗುತ್ತಿದೆ; ಬೀದಿ ನಾಯಿಗಳ ಬಗ್ಗೆ ವರದಿ ಸಲ್ಲಿಸದ ರಾಜ್ಯಗಳಿಗೆ 'ಸುಪ್ರೀಂ' ಛೀಮಾರಿ

Dharmasthala Mass Burial Case: ಸಾಕ್ಷ್ಯಾಧಾರಗಳ ಕೊರತೆ, 'ಷಡ್ಯಂತ್ರ ಸೂತ್ರಧಾರರತ್ತ' ಎಸ್ ಐಟಿ ತನಿಖೆ!

ಸಿಡ್ನಿ ಆಸ್ಪತ್ರೆಗೆ ದಾಖಲಾದ ಟೀಂ ಇಂಡಿಯಾ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್; ಐಸಿಯುನಲ್ಲಿ ಚಿಕಿತ್ಸೆ!

ಸೂಪರ್ ಹಿಟ್ ಆದರೂ ಈ ವರೆಗೂ ಯಾರಿಗೂ ಅರ್ಥವಾಗದ ಕಾಂತಾರ ಚಾಪ್ಟರ್-1 ರಹಸ್ಯ; ದ್ವಿಪಾತ್ರದಲ್ಲಿ ರಿಷಭ್ ಶೆಟ್ಟಿ ಅಭಿನಯ; ಪ್ರೇಕ್ಷಕರಲ್ಲಿ ಮತ್ತೆ ಹೆಚ್ಚಿದ ಕುತೂಹಲ!

SCROLL FOR NEXT