ಸಾವಿಗೀಡಾದ ಭಾರತ ಮೂಲದ ವ್ಯಕ್ತಿ ವಿವೇಕ್ ತನೇಜಾ 
ವಿದೇಶ

Another Indian Dies in US: ವಾಷಿಂಗ್ಟನ್ ನಲ್ಲಿ ಹಲ್ಲೆ ನಡೆಸಿ ಭಾರತೀಯನ ಕೊಲೆ, ವರ್ಷಾರಂಭದಲ್ಲೇ 5 ಮಂದಿ ಸಾವು

ಅಮೆರಿಕದಲ್ಲಿ ಮತ್ತೋರ್ವ ಭಾರತೀಯನ (Indian) ಮೇಲೆ ಹಲ್ಲೆ ನಡೆಸಿ ಕೊಲೆಗೈಯ್ಯಲಾಗಿದ್ದು, ಹೊಸ ವರ್ಷಾರಂಭದಲ್ಲೇ ಅಮೆರಿಕ (United states)ದಲ್ಲಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ವಾಷಿಂಗ್ಟನ್‌: ಅಮೆರಿಕದಲ್ಲಿ ಮತ್ತೋರ್ವ ಭಾರತೀಯನ (Indian) ಮೇಲೆ ಹಲ್ಲೆ ನಡೆಸಿ ಕೊಲೆಗೈಯ್ಯಲಾಗಿದ್ದು, ಹೊಸ ವರ್ಷಾರಂಭದಲ್ಲೇ ಅಮೆರಿಕ (United states)ದಲ್ಲಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ವಾಷಿಂಗ್ಟನ್‌(Washington)ನ ಒಂದು ರೆಸ್ಟೊರೆಂಟ್‌ನ ಹೊರಗೆ ನಡೆದ ಜಗಳದಲ್ಲಿ ಮಾರಣಾಂತಿಕ ಗಾಯಗೊಂಡಿದ್ದ ಭಾರತೀಯ- ಅಮೆರಿಕನ್ ಎಕ್ಸಿಕ್ಯೂಟಿವ್‌ ಒಬ್ಬರು ಮೃತಪಟ್ಟಿದ್ದಾರೆ (Indian dies in US) ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಮೂಲದ, ವರ್ಜೀನಿಯಾದ ನಿವಾಸಿ ವಿವೇಕ್ ತನೇಜಾ ಮೃತಪಟ್ಟ ವ್ಯಕ್ತಿ. ಫೆಬ್ರವರಿ 2ರಂದು ವಿವೇಕ್‌, ಅವರ ಇಬ್ಬರು ಸಹೋದರಿಯರು ಹಾಗೂ ಶಂಕಿತ ಆರೋಪಿ ಜಪಾನೀಸ್ ರೆಸ್ಟೋರೆಂಟ್‌ನಲ್ಲಿ ಇದ್ದರು. ಆರೋಪಿಯು ವಿವೇಕ್‌ನನ್ನು ನೆಲಕ್ಕೆ ಕೆಡವಿ ಅವರ ತಲೆಯನ್ನು ಪಾದಚಾರಿ ಮಾರ್ಗಕ್ಕೆ ಗುದ್ದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. 

ಪೊಲೀಸ್ ಮೂಲಗಳ ಪ್ರಕಾರ 41 ವರ್ಷದ ವಿವೇಕ್‌ ತನೇಜಾ (Vivek Taneja) ಅವರು ಬೆಳಗಿನ ಜಾವ 2 ಗಂಟೆ ಸುಮಾರಿಗೆ ರೆಸ್ಟೋರೆಂಟ್‌ ಬಿಟ್ಟಿದ್ದರು. ಹತ್ತಿರದ ಬೀದಿಯಲ್ಲಿ ಜಗಳ ಆರಂಭವಾಯಿತು. ದಾಳಿಯಲ್ಲಿ ವಿವೇಕ್‌ ಪ್ರಜ್ಞೆ ಕಳೆದುಕೊಂಡರು. ಪೊಲೀಸರು ಆಗಮಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಗಾಯಗೊಂಡಿದ್ದ ಅವರು ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರದಿ ತಿಳಿಸಿದೆ.

ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುವ ಶಂಕಿತನಿಗಾಗಿ ಶೋಧ ನಡೆಸಲಾಗುತ್ತಿದ್ದು, ಆತನ ಗುರುತು ಪತ್ತೆಯಾಗಿಲ್ಲ. ಆತನ ಬಂಧನ ಮತ್ತು ಶಿಕ್ಷೆಗೆ ಕಾರಣವಾಗುವ ಮಾಹಿತಿಯನ್ನು ಒದಗಿಸುವವರಿಗೆ ಪೊಲೀಸರು $25,000 ಬಹುಮಾನ ಘೋಷಿಸಿದ್ದಾರೆ.

ಅಮೆರಿಕದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಆರು ಮಂದಿ ಭಾರತೀಯ ಮೂಲದವರು ಅಸಹಜವಾಗಿ ಮೃತಪಟ್ಟಿದ್ದಾರೆ. ಈ ವಾರದ ಆರಂಭದಲ್ಲಿ, ಭಾರತೀಯ ವಿದ್ಯಾರ್ಥಿಯೊಬ್ಬನ ಮೇಲೆ ಚಿಕಾಗೋದಲ್ಲಿ ದರೋಡೆಕೋರರು ದಾಳಿ (attack on Indian-American) ಎಸಗಿದ್ದರು. ಆತನ ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗಿತ್ತು. ಹೈದರಾಬಾದ್‌ ನಿವಾಸಿ ಸೈಯದ್ ಮಜಾಹಿರ್ ಅಲಿ ಎಂಬಾತ ಈ ದಾಳಿಯ ನಂತರ ಸಹಾಯಕ್ಕಾಗಿ ಮನವಿ ಮಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿತ್ತು.

ವರ್ಷಾರಂಭದಲ್ಲೇ 5 ಮಂದಿ ಸಾವು
ಈ ವರ್ಷ ಅಮೆರಿಕದಲ್ಲಿ ಐವರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಭಾರತೀಯ-ಅಮೆರಿಕನ್ ಸಮೀರ್ ಕಾಮತ್ ಶವವಾಗಿ ಪತ್ತೆಯಾಗಿದ್ದರು. ಅವರು ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದ 19 ವರ್ಷದ ವಿದ್ಯಾರ್ಥಿ ಶ್ರೇಯಸ್ ರೆಡ್ಡಿ ಬೆನ್ನಿಗೇರ್ ಕಳೆದ ವಾರ ಶವವಾಗಿ ಪತ್ತೆಯಾಗಿದ್ದಾನೆ. ಅಧಿಕಾರಿಗಳು ಯಾವುದೇ ಅಪರಾಧದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ, ನೀಲ್ ಆಚಾರ್ಯ, ಆ ವಾರದ ಆರಂಭದಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.

ಹರಿಯಾಣದ 25 ವರ್ಷದ ವಿದ್ಯಾರ್ಥಿ ವಿವೇಕ್ ಸೈನಿ ಜನವರಿ 16ರಂದು ಜಾರ್ಜಿಯಾದ ಲಿಥೋನಿಯಾದಲ್ಲಿ ನಿರಾಶ್ರಿತ ವ್ಯಕ್ತಿಯಿಂದ ಹೊಡೆದು ಸಾಯಿಸಲ್ಪಟ್ಟರು. ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಅಕುಲ್ ಧವನ್ ಜನವರಿಯಲ್ಲಿ ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದ ಹೊರಗೆ ಶವವಾಗಿ ಪತ್ತೆಯಾಗಿದ್ದರು.

ಭಾರತೀಯರ ಸರಣಿ ಸಾವುಗಳ ಹಿನ್ನೆಲೆಯಲ್ಲಿ, ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತ ತಾಣವಾಗಿ ಉಳಿಯಲು ಅಮೆರಿಕ ಬದ್ಧವಾಗಿದೆ ಎಂದು ಭಾರತದ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಭರವಸೆ ನೀಡಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT