ವಿದೇಶ

ಅಬುಧಾಬಿ: 'ಅಹ್ಲಾನ್ ಮೋದಿ' ಕಾರ್ಯಕ್ರಮಕ್ಕೆ 65,000ಕ್ಕೂ ಹೆಚ್ಚು ಜನರ ನೋಂದಣಿ

Nagaraja AB

ಅಬುದಾಬಿ: ಅಬುದಾಬಿಯಲ್ಲಿ ನಾಳೆ ಆಯೋಜಿಸಲಾಗಿರುವ ಅಹ್ಲಾನ್ ಮೋದಿ' ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಕಂಡುಬರುತ್ತಿದ್ದು, ಸುಮಾರು 65, 000 ಜನರ ನೋಂದಣಿಯನ್ನು ಸ್ವೀಕರಿಸಲಾಗಿದೆ. 

ವಿಶಿಷ್ಟ ಸ್ವರೂಪದ ಕಾರ್ಯಕ್ರಮದ ಬಗ್ಗೆ ಅಹ್ಲಾನ್ ಮೋದಿ ಕಾರ್ಯಕ್ರಮದ ಸಂಘಟಕ ಹಾಗೂ ಇಂಡಿಯನ್ ಪೀಪಲ್ ಫೋರಂ ಅಧ್ಯಕ್ಷ ಜಿತೇಂದ್ರ ವೈದ್ಯ ಕುತೂಹಲ ವ್ಯಕ್ತಪಡಿಸಿದ್ದಾರೆ.

ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಏಕೆಂದರೆ ಯಾವುದೇ ಒಂದು ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿಲ್ಲ. ಇಡೀ ಸಮುದಾಯವೇ ಕಾರ್ಯಕ್ರಮ ಆಯೋಜಿಸಿದ್ದು, ಪ್ರಧಾನಿ ಮೋದಿ ಹೆಸರು ಬರುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯ ಜನರು ಸೇರುವ ಸಾಧ್ಯತೆಯಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿ ಎಂದು ವೈದ್ಯ ಎಎನ್ ಐ ಸುದ್ದಿಸಂಸ್ಥೆಗೆ ಹೇಳಿದರು.

ಅಬುದಾಬಿಯಲ್ಲಿರುವ ಭಾರತೀಯ ಸಮುದಾಯ ಸಾಮೂಹಿಕ ಪ್ರಯತ್ನದಿಂದ ಕಾರ್ಯಕ್ರಮ ಆಯೋಜಿಸಿದ್ದು, ನೋಂದಣಿ ಸಂಖ್ಯೆ 65,000 ದಾಟಿದೆ. ಅಬುದಾಬಿಯಲ್ಲಿರುವ ಅನಿವಾಸಿ ಭಾರತೀಯರಿಂದ ಅಭೂತಪೂರ್ವ ಪ್ರತಿಕ್ರಿಯೆ ಕಂಡುಬಂದಿದೆ. ದೇಶದ ಜನಸಂಖ್ಯೆಯ ಶೇ.35 ರಷ್ಟು ಭಾರತೀಯರಿದ್ದಾರೆ ಎಂದು ಅವರು ತಿಳಿಸಿದರು.

700 ಸಾಂಸ್ಕೃತಿಕ ಕಲಾವಿದರಿಂದ ಭಾರತೀಯ ಕಲೆ, ವಿವಿಧತೆ ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಇರಲಿದ್ದು, 150 ಕ್ಕೂ ಭಾರತೀಯ ಸಮುದಾಯದ ಗುಂಪುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಪ್ರಧಾನಿ ಮೋದಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ನಂತರ ಯುಎಇ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
 

SCROLL FOR NEXT