ಮೊಹಮ್ಮದ್ ಮುಯಿಝು 
ವಿದೇಶ

ಭಾರತ-ಮಾಲ್ಡೀವ್ಸ್ ವಿವಾದ: ಹೆಚ್ಚೆಚ್ಚು ಪ್ರವಾಸಿಗರನ್ನು ಕಳುಹಿಸುವಂತೆ ಚೀನಾಗೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಒತ್ತಾಯ

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಯಿಂದಾಗಿ ರಾಜತಾಂತ್ರಿಕ ಕಲಹ ಭುಗಿಲೆದ್ದಿದ್ದು ಇದರ ನಡುವೆ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಬುಕ್ಕಿಂಗ್ ರದ್ದುಗೊಳಿಸಿರುವುದರಿಂದ ವಿಚಲಿತರಾಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು...

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಯಿಂದಾಗಿ ರಾಜತಾಂತ್ರಿಕ ಕಲಹ ಭುಗಿಲೆದ್ದಿದ್ದು ಇದರ ನಡುವೆ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಬುಕ್ಕಿಂಗ್ ರದ್ದುಗೊಳಿಸಿರುವುದರಿಂದ ವಿಚಲಿತರಾಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಮ್ಮ ದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸುವ ಪ್ರಯತ್ನಗಳನ್ನು 'ತೀವ್ರಗೊಳಿಸುವಂತೆ' ಚೀನಾಕ್ಕೆ ಮನವಿ ಮಾಡಿದ್ದಾರೆ. 

ಭಾರತ-ಮಾಲ್ಡೀವ್ಸ್ ವಿವಾದದ ನಡುವೆ ಚೀನಾ ಪ್ರವಾಸ ಕೈಗೊಂಡಿರುವ ಮುಯಿಝು ದಕ್ಷಿಣ ಚೀನಾದ ಬಂದರು ನಗರದಲ್ಲಿರುವ "ಇನ್ವೆಸ್ಟ್ ಮಾಲ್ಡೀವ್ಸ್" ವೇದಿಕೆಯಲ್ಲಿ ಸ್ಥಳೀಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಮಂಗಳವಾರ ಫುಝೌನಲ್ಲಿ, ಮೊಹಮ್ಮದ್ ಮುಯಿಝು ಅವರ ನಿಯೋಗವು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನ ಮಂತ್ರಿ ಲಿ ಕಿಯಾಂಗ್ ಅವರನ್ನು ಬೀಜಿಂಗ್‌ನಲ್ಲಿ ತಮ್ಮ ವಾರದ ಭೇಟಿಯ ಸಮಯದಲ್ಲಿ ಭೇಟಿ ಮಾಡಲಿದ್ದಾರೆ. ಇಲ್ಲಿ, ಮೂಲಸೌಕರ್ಯದಿಂದ ಪ್ರವಾಸೋದ್ಯಮದವರೆಗಿನ ಒಪ್ಪಂದಗಳಿಗೆ ಉಭಯ ದೇಶಗಳ ನಡುವೆ ಸಹಿ ಹಾಕುವ ನಿರೀಕ್ಷೆಯಿದೆ.

'ಇಂಡಿಯಾ ಔಟ್' ಅಭಿಯಾನದ ನಂತರ ಅಧ್ಯಕ್ಷರಾದ ಮುಯಿಝು
ಮುಯಿಝು ತನ್ನ 'ಇಂಡಿಯಾ ಔಟ್' ಪ್ರಚಾರದಿಂದಲೇ ಗೆದ್ದು ಅಧ್ಯಕ್ಷರಾದರು. ನವದೆಹಲಿಯ ಬಹುದೊಡ್ಡ ಪ್ರಭಾವ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದರು. ನಂತರ ಪಕ್ಷ ಅಧಿಕಾರಕ್ಕೆ ಬಂದ ನಂತರ ಮಾಲ್ಡೀವ್ಸ್ ನಲ್ಲಿ ನೆಲೆಗೊಂಡಿರುವ ಭಾರತೀಯ ಸೇನೆಯನ್ನು ದೇಶವನ್ನು ತೊರೆಯುವಂತೆ ಕೇಳಿಕೊಂಡಿದೆ. ಇನ್ನು ಮಾಲ್ಡೀವ್ಸ್ ಯಾವು ಪಕ್ಷ ಅಧಿಕಾರಕ್ಕೆ ಬಂದರೂ ಮೊದಲು ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿತ್ತು. ಆದರೆ ಈ ಬಾರಿ ಮುಯಿಝು ಚೀನಾಕ್ಕೆ ಭೇಟಿ ನೀಡುವ ಮೂಲಕ ತನ್ನ ದೇಶದಲ್ಲಿ ಸಂಪ್ರದಾಯವನ್ನು ಮುರಿದಿದ್ದಾರೆ.

ಎಫ್‌ಟಿಎ ಮುಖ್ಯ ಆದ್ಯತೆ
ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಡಿಯಲ್ಲಿ ಚೀನಾಕ್ಕೆ ಮೀನು ಉತ್ಪನ್ನಗಳ ರಫ್ತು ಹೆಚ್ಚಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಮುಯಿಝು ಹೇಳಿದರು. ಮಾಲ್ಡೀವ್ಸ್‌ನಲ್ಲಿ ಮೀನುಗಾರಿಕೆಯು ಉದ್ಯೋಗದ ಅತಿದೊಡ್ಡ ಮೂಲವಾಗಿದೆ. ಏಕೆಂದರೆ 99% ಪ್ರದೇಶವು ಸಮುದ್ರದಿಂದ ಆವೃತವಾಗಿದೆ.

ಮಾಲ್ಡೀವ್ಸ್‌ನಲ್ಲಿ ಚೀನಾ ಅಸ್ತಿತ್ವ ಸ್ಥಾಪನೆ
ಚೀನಾ ಈಗಾಗಲೇ ಮಾಲ್ಡೀವ್ಸ್‌ನಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ. ಜಾಗತಿಕ ವ್ಯಾಪಾರ ಮತ್ತು ಮೂಲಸೌಕರ್ಯ ಜಾಲಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಅಡಿಯಲ್ಲಿ, ಚೀನಾ ಮಾಲೆಯಲ್ಲಿ ವೆಲಾನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಸ್ತರಿಸಲು ಸಹಾಯ ಮಾಡಿದೆ. ಅಲ್ಲದೆ ಸಮುದ್ರದ ಮೇಲೆ ಚೀನಾ-ಮಾಲ್ಡೀವ್ಸ್ ಸ್ನೇಹ ಸೇತುವೆಯನ್ನು ನಿರ್ಮಿಸಿದೆ. ದೇಶದ ಕೇಂದ್ರ ವಿಮಾನ ನಿಲ್ದಾಣ ಮತ್ತು ವಾಣಿಜ್ಯ ಬಂದರಿನ ವಿಸ್ತರಣೆ ಸೇರಿದಂತೆ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಅಡಿಯಲ್ಲಿ ಪಾಲುದಾರಿಕೆಯನ್ನು ಅನ್ವೇಷಿಸಲು ತಮ್ಮ ಸರ್ಕಾರ ಉತ್ಸುಕವಾಗಿದೆ ಎಂದು ಮುಯಿಝು ಹೇಳಿದರು.

ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಚೀನಾದ ಹೂಡಿಕೆ
ಕಳೆದ ವರ್ಷ, ಚೀನಾ ನ್ಯಾಷನಲ್ ಮೆಷಿನರಿ ಇಂಡಸ್ಟ್ರಿ ಕಾರ್ಪೊರೇಷನ್ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಕ್ಷೇತ್ರದಲ್ಲಿ $140 ಮಿಲಿಯನ್ ಹೂಡಿಕೆ ಮಾಡಿತು. ಇದು ದೇಶದ ರಾಷ್ಟ್ರೀಯ ಆದಾಯದ ಕಾಲು ಭಾಗಕ್ಕಿಂತ ಹೆಚ್ಚಿನದಾಗಿದೆ. 2019ರಲ್ಲಿ ಚೀನೀ ಪ್ರವಾಸಿಗರು ಶೇಕಡ 19.7ರಷ್ಟು ವಿದೇಶಿ ಸಂದರ್ಶಕರನ್ನು ಪ್ರತಿನಿಧಿಸಿದರು. ಇದು ಅವರನ್ನು ಅತಿದೊಡ್ಡ ಪ್ರವಾಸಿ ಸಮೂಹವನ್ನಾಗಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT