ಲಂಡನ್‌ನಲ್ಲಿ ಹೋಲ್ಬೋರ್ನ್ ಮತ್ತು ಸೇಂಟ್ ಪ್ಯಾನ್‌ಕ್ರಾಸ್ ಕ್ಷೇತ್ರಕ್ಕೆ ಚುನಾಯಿತರಾದ ನಂತರ ಬ್ರಿಟನ್‌ನ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ತಮ್ಮ ಬೆಂಬಲಿಗರಿಗೆ ಧನ್ಯವಾದ ಹೇಳಿದರು. 
ವಿದೇಶ

UK Polls: ಜನರು ಬದಲಾವಣೆಗೆ ಸಿದ್ಧರಾಗಿದ್ದಾರೆ, ಮತದಾರರಿಗೆ ಧನ್ಯವಾದಗಳು- ಲೇಬರ್ ಪಾರ್ಟಿ ನಾಯಕ ಸ್ಟಾರ್ಮರ್

61ರ ಹರೆಯದ ಸ್ಟಾರ್ಮರ್, ಹೊಲ್ಬೋರ್ನ್ ಮತ್ತು ಸೇಂಟ್ ಪ್ಯಾನ್‌ಕ್ರಾಸ್‌ನಿಂದ ಗೆದ್ದ ನಂತರ ತಮ್ಮ ಗೆಲುವಿನ ಭಾಷಣದಲ್ಲಿ, ಜನರು ನನಗೆ ಮತ ನೀಡಿದರೂ ನೀಡದಿದ್ದರೂ ಈ ಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಗೆ ಸೇವೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಲಂಡನ್: ಬ್ರಿಟನ್‌ನ ನೂತನ ಪ್ರಧಾನಿಯಾಗುವ ಹಾದಿಯಲ್ಲಿರುವ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಅವರು ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ದೇಶದ ಜನರು "ಬದಲಾವಣೆಗೆ ಸಿದ್ಧರಾಗಿದ್ದಾರೆ" ಎಂದು ಹೇಳಿದರು.

ಎಕ್ಸಿಟ್ ಪೋಲ್ ನಲ್ಲಿ ಅವರ ನೇತೃತ್ವದ ಲೇಬರ್ ಪಾರ್ಟಿ ಬಹುಮತದತ್ತ ದಾಪುಗಾಲಿರಿಸಲಿದೆ. 61ರ ಹರೆಯದ ಸ್ಟಾರ್ಮರ್, ಹೊಲ್ಬೋರ್ನ್ ಮತ್ತು ಸೇಂಟ್ ಪ್ಯಾನ್‌ಕ್ರಾಸ್‌ನಿಂದ ಗೆದ್ದ ನಂತರ ತಮ್ಮ ಗೆಲುವಿನ ಭಾಷಣದಲ್ಲಿ, ಜನರು ನನಗೆ ಮತ ನೀಡಿದರೂ ನೀಡದಿದ್ದರೂ ಈ ಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಗೆ ಸೇವೆ ಸಲ್ಲಿಸುತ್ತೇನೆ ಎಂದಿದ್ದಾರೆ.

14 ವರ್ಷಗಳ ಕನ್ಸರ್ವೇಟಿವ್ ಆಡಳಿತವನ್ನು ಕೊನೆಗೊಳಿಸಲು ಮತ್ತು ಲೇಬರ್ ಪಕ್ಷಕ್ಕೆ ಪ್ರಚಂಡ ವಿಜಯವನ್ನು ನೀಡಲು ಬ್ರಿಟನ್ನರು ಈ ಬಾರಿ ತೀರ್ಮಾನಿಸಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಎಕ್ಸಿಟ್ ಪೋಲ್ ಪ್ರಕಾರ, ಲೇಬರ್ ಪಕ್ಷ 410 ಸ್ಥಾನಗಳನ್ನು ಗೆಲ್ಲಬಹುದು. ಸರ್ಕಾರ ರಚನೆಗೆ ಸರಳ ಬಹುಮತಕ್ಕೆ ಬೇಕಾದ 326 ಗಡಿ ದಾಟಿ ಪ್ರಧಾನ ಮಂತ್ರಿ ರಿಷಿ ಸುನಕ್ ನೇತೃತ್ವದ ಟೋರಿಗಳು ಕೇವಲ 131 ಸ್ಥಾನಗಳಿಗೆ ಇಳಿಯಬಹುದು ಎಂದು ಎಕ್ಸಿಟ್ ಪೋಲ್ ಗಳು ಹೇಳಿವೆ.

ಇದುವರೆಗೆ ಹೊರಬಿದ್ದಿರುವ ಫಲಿತಾಂಶದಲ್ಲಿ, ಲೇಬರ್ ಪಕ್ಷವು 184 ಸ್ಥಾನಗಳನ್ನು ಗೆದ್ದುಕೊಂಡಿದೆ. ಕನ್ಸರ್ವೇಟಿವ್ಸ್ 32, ಲಿಬರಲ್ ಡೆಮೋಕ್ರಾಟ್‌ಗಳು 23, ಸ್ಕಾಟಿಷ್ ನ್ಯಾಷನಲ್ ಪಾರ್ಟಿ 3 ಮತ್ತು ಇತರರು 11 ಸ್ಥಾನಗಳನ್ನು ಗೆದ್ದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ