ವಿದೇಶಾಂಕ ಸಚಿವ ಎಸ್ ಜೈಶಂಕರ್ PTI
ವಿದೇಶ

ಜಪಾನ್ ನಲ್ಲಿ Quad ಸಭೆ; ಪತ್ರಕರ್ತನಿಗೆ ಚಳಿ ಬಿಡಿಸಿದ ಎಸ್ ಜೈಶಂಕರ್!

"ಇತರರು ಸರಿಯಾದ ಶಿಷ್ಟಾಚಾರವನ್ನು ಅನುಸರಿಸುವುದಿಲ್ಲ ಎಂದು ನಾನು ದೂರುತ್ತಿದ್ದರೆ, ನಾನು ಒಂದು ಉದಾಹರಣೆಯನ್ನು ಹೊಂದಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ನೀಡಬಹುದಾದ ಅತ್ಯುತ್ತಮ ಉತ್ತರವೆಂದರೆ ಪ್ರಶ್ನೆಗೆ ಉತ್ತರಿಸದಿರುವುದು,” ಎಂದು ಸಚಿವರು ಪತ್ರಕರ್ತನಿಗೆ ಪಾಠ ಮಾಡಿದ್ದಾರೆ.

ಟೊಕಿಯೊ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಜಪಾನ್ ಪ್ರವಾಸದ ವೇಳೆ ಸಚಿವರಿಗೆ ಪತ್ರಕರ್ತನೋರ್ವ ಅಮೇರಿಕಾ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಳಿ ಪೆಚ್ಚಾದ ಘಟನೆ ನಡೆದಿದೆ.

ಟೋಕಿಯೋದಲ್ಲಿ ಜಪಾನ್ ನ್ಯಾಷನಲ್ ಪ್ರೆಸ್ ಕ್ಲಬ್ ನಲ್ಲಿ ಮಾತನಾಡುತ್ತಿದ್ದ ಜೈಶಂಕರ್ ಗೆ ಅಮೇರಿಕಾ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪತ್ರಕರ್ತನೋರ್ವ ಕೇಳಿದ್ದಾನೆ. ತಮ್ಮದೇ ಸ್ಟೈಲ್ ನಲ್ಲಿ ಪತ್ರಕರ್ತನಿಗೆ ಪಾಠ ಮಾಡಿದ ಜೈಶಂಕರ್, ಒಂದು ಪ್ರಜಾಪ್ರಭುತ್ವದ ರಾಷ್ಟ್ರ, ನಿರ್ದಿಷ್ಟ ಅಜೆಂಡಾ ಇಟ್ಟುಕೊಂಡು ಮತ್ತೊಂದು ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮಾತನಾಡುವುದು ಸೂಕ್ತವಲ್ಲ ಎಂದು ನಾನು ಹೇಳಿದ್ದೇನೆಂದರೆ, ನೀವು ನನ್ನಿಂದ ಕೆಟ್ಟ ನಡವಳಿಕೆಯನ್ನು ನಿರೀಕ್ಷಿಸುವುದಿಲ್ಲ"

"ಇತರರು ಸರಿಯಾದ ಶಿಷ್ಟಾಚಾರವನ್ನು ಅನುಸರಿಸುವುದಿಲ್ಲ ಎಂದು ನಾನು ದೂರಿದರೆ, ಕನಿಷ್ಠ ನಾನು ಒಂದು ಉದಾಹರಣೆಯಾಗಿ ಮೇಲ್ಪಂಕ್ತಿ ಹಾಕಿಕೊಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ನೀಡಬಹುದಾದ ಅತ್ಯುತ್ತಮ ಉತ್ತರವೆಂದರೆ ಪ್ರಶ್ನೆಗೆ ಉತ್ತರಿಸದಿರುವುದು,” ಎಂದು ಸಚಿವರು ಪತ್ರಕರ್ತನಿಗೆ ಪಾಠ ಮಾಡಿದ್ದಾರೆ.

ಈ ಮೂಲಕ ಸುಖಾ ಸುಮ್ಮನೆ ಎಲ್ಲಾ ದೇಶಗಳ ವಿಚಾರಗಳಲ್ಲೂ ಮೂಗು ತೂರಿಸುವ ಚಾಳಿ ಒಳ್ಳೆಯ ನಡವಳಿಕೆಯಲ್ಲ ಎಂಬ ಪರೋಕ್ಷ ಸಂದೇಶವನ್ನೂ ಜೈಶಂಕರ್ ಪಶ್ಚಿಮದ ರಾಷ್ಟ್ರಗಳಿಗೆ ರವಾನಿಸಿದ್ದಾರೆ.

ಜೈಶಂಕರ್ ಅವರ ಹೇಳಿಕೆಗಳು ಅಮೇರಿಕಾ ಆಡಳಿತವನ್ನು ಗುರಿಯಾಗಿರಿಸಿಕೊಂಡಿದ್ದು ಸ್ಪಷ್ಟವಾಗಿದೆ. ಅಮೇರಿಕಾ ವಿದೇಶಾಂಗ ಇಲಾಖೆ ಭಾರತದ ಆಂತರಿಕ ವಿಷಯಗಳ ಕುರಿತು ಹೇಳಿಕೆ, ಆರೋಪ ಮಾಡಿದಾಗಲೆಲ್ಲಾ ಈ ನಡವಳಿಕೆಯನ್ನು ವಿರೋಧಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಹಲವಾರು ಸಂದರ್ಭಗಳಲ್ಲಿ ಛೀಮಾರಿ ಹಾಕಲಾಗಿದೆ.

ಅಮೇರಿಕಾ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡ ಕ್ವಾಡ್ ಬ್ಲಾಕ್‌ನ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ ನಂತರ ಜೈಶಂಕರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಎಲ್ಲಾ ಪ್ರಮುಖ ಸಭೆಯಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಜಪಾನ್ ವಿದೇಶಾಂಗ ಸಚಿವ ಯೊಕೊ ಕಾಮಿಕಾವಾ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT