ನ್ಯೂಯಾರ್ಕ್: ಸ್ಪೇಸ್ ಎಕ್ಸ್ ನ ಮಾಜಿ ಉದ್ಯೋಗಿಗಳು ಎಲಾನ್ ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ, ಕಾನೂನು ಮೊರೆ ಹೋಗಿರುವ ಬೆನ್ನಲ್ಲೇ ಮತ್ತಷ್ಟು ವಿಷಯಗಳು ಹೊರಬಂದಿದೆ. ವಾಲ್ ಸ್ಟ್ರೀಟ್ ಜರ್ನಲ್ ನ ವರದಿಯ ಪ್ರಕಾರ, ಎಲಾನ್ ಮಸ್ಕ್ ತಮ್ಮ ಸಂಸ್ಥೆಯ ಇಂಟರ್ನ್ ಸೇರಿದಂತೆ ಇಬ್ಬರು ಸಿಬ್ಬಂದಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿದ್ದು, 2016 ರಲ್ಲಿ ವಿಮಾನ ಪರಿಚಾಕರೊಬ್ಬರಿಗೆ ಸೆಕ್ಸ್ ಗಾಗಿ ಕುದುರೆಯ ಆಫರ್ ನೀಡಿದ್ದು ಈಗ ಬಹಿರಂಗಗೊಂಡಿದೆ.
ವಿಮಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನೀಡಿರುವ ಮಾಹಿತಿಯ ಪ್ರಕಾರ, ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಕೇಳಿದ್ದ ಎಲಾನ್ ಮಸ್ಕ್ ಇದಕ್ಕಾಗಿ ನನಗೆ ಕುದುರೆಯನ್ನು ಖರೀದಿ ಮಾಡಿಕೊಡುವ ಆಫರ್ ಮುಂದಿಟ್ಟಿದ್ದರು ಎಂದು ಹೇಳಿದ್ದಾರೆ.
ವಿಮಾನದಲ್ಲೇ ಎಲಾನ್ ಮಸ್ಕ್ ತನ್ನೆದುರು ಆತನ ತನ್ನ ಖಾಸಗಿ ಅಂಗ ಪ್ರದರ್ಶಿಸಿದ್ದ ಇದಕ್ಕೆ ತಾನು ಒಪ್ಪದೇ ಇದ್ದಾಗ ಸಂಸ್ಥೆಯೂ ನನ್ನ ಪಾಳಿಗಳನ್ನು ಕಡಿತಗೊಳಿಸಿತ್ತು ಎಂದು ಮಹಿಳೆ ಹೇಳಿದ್ದಾರೆ.
ಎಲಾನ್ ಮಸ್ಕ್ ಫ್ಲೈಟ್ ಅಟೆಂಡೆಂಟ್ ಅವರ ಆರೋಪಗಳನ್ನು ನಿರಾಕರಿಸಿದ್ದು ಆಕೆಯ ಆರೋಪಗಳು "ಸಂಪೂರ್ಣವಾಗಿ ಸುಳ್ಳು" ಎಂದು ಹೇಳಿದ್ದಾರೆ. ಹಗರಣವನ್ನು "ಎಲಾನ್ ಗೇಟ್" ಎಂದು ಕರೆಯಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ ಎಲಾನ್ ತಮಾಷೆ ಮಾಡಿದ್ದಾರೆ.
ಸುದ್ದಿ ವರದಿಯ ನಂತರ ಕಂಪನಿಯಾದ್ಯಂತ ಇಮೇಲ್‌ನಲ್ಲಿ ಫ್ಲೈಟ್ ಅಟೆಂಡೆಂಟ್‌ನ ಆರೋಪಗಳ ವಿರುದ್ಧ ಸ್ಪೇಸ್‌ಎಕ್ಸ್‌ನ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ವಿನ್ನೆ ಶಾಟ್‌ವೆಲ್ ಮಸ್ಕ್ ನ್ನು ಸಮರ್ಥಿಸಿಕೊಂಡಿದ್ದರು. “ವೈಯಕ್ತಿಕವಾಗಿ, ಆರೋಪಗಳು ಸುಳ್ಳು ಎಂದು ನಾನು ನಂಬುತ್ತೇನೆ; ನಾನು ಎಲೋನ್‌ಗಾಗಿ ಕೆಲಸ ಮಾಡುವುದರಿಂದ ಅಲ್ಲ, ಆದರೆ ನಾನು ಅವರೊಂದಿಗೆ 20 ವರ್ಷಗಳ ಕಾಲ ನಿಕಟವಾಗಿ ಕೆಲಸ ಮಾಡಿದ್ದೇನೆ ಮತ್ತು ಈ ಆರೋಪಗಳನ್ನು ಹೋಲುವ ವ್ಯಕ್ತಿತ್ವವನ್ನು ಅವರಲ್ಲಿ ನೋಡಿಲ್ಲ ಅಥವಾ ಕೇಳಿಲ್ಲ, ”ಎಂದು ಅವರು ಬರೆದಿದ್ದಾರೆ.