ಪ್ರತ್ಯಕ್ಷ ದೃಶ್ಯ 
ವಿದೇಶ

Gym ಟ್ರೆಡ್‌ಮಿಲ್‌ನಿಂದ ಇಳಿದ ತಕ್ಷಣ ನಿಯಂತ್ರಣ ತಪ್ಪಿ 3ನೇ ಮಹಡಿಯಿಂದ ಬಿದ್ದ ಯುವತಿ; ಭೀಕರ ವಿಡಿಯೋ!

ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ಯುವತಿ ಟ್ರೆಡ್‌ಮಿಲ್‌ನಿಂದ ಕೆಳಗಿಳಿದಿದ್ದಾಳೆ. ಆಗ ಆಕೆ ಸಮತೋಲನ ಕಳೆದುಕೊಂಡು ತೆರೆದ ಕಿಟಕಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಸಾವನ್ನಪ್ಪಿದ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಹಲವು ಘಟನೆಗಳಲ್ಲಿ ಸಾವಿಗೆ ಹೃದಯಾಘಾತವೇ ಕಾರಣ ಎನ್ನಲಾಗಿದೆ. ಆದರೆ ಇಂಡೋನೇಷ್ಯಾದಲ್ಲಿ, ಜಿಮ್ ಮಾಡುವಾಗ ಮಹಿಳೆಯೊಬ್ಬರು ದುರದೃಷ್ಟಕರ ಸನ್ನಿವೇಶದಲ್ಲಿ ಸಾವನ್ನಪ್ಪಿದ್ದಾರೆ.

ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ಯುವತಿ ಟ್ರೆಡ್‌ಮಿಲ್‌ನಿಂದ ಕೆಳಗಿಳಿದಿದ್ದಾಳೆ. ಆಗ ಆಕೆ ಸಮತೋಲನ ಕಳೆದುಕೊಂಡು ತೆರೆದ ಕಿಟಕಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಇಂಡೋನೇಷ್ಯಾದ ಪಶ್ಚಿಮ ಕಾಲಿಮಂಟನ್‌ನ ಪಾಂಟಿಯಾನಾಕ್ ಪ್ರದೇಶದಲ್ಲಿ ನಿರ್ಮಿಸಲಾದ ಜಿಮ್‌ನಲ್ಲಿ ಈ ಘಟನೆ ನಡೆದಿದೆ. ಮೃತ 22 ವರ್ಷದ ಮಹಿಳೆ ಟ್ರೆಡ್ ಮಿಲ್ ನಲ್ಲಿ ಓಡುತ್ತಿದ್ದಳು. ನಂತರ ಯುವತಿ ತನ್ನ ಮುಖವನ್ನು ಒರೆಸಿಕೊಳ್ಳಲು ಇಳಿಯುತ್ತಾಳೆ. ಆದರೆ ಆಕೆ ತನ್ನ ಸಮತೋಲನವನ್ನು ಕಳೆದುಕೊಂಡು ಹಿಂದೆ ಬೀಳುತ್ತಾಳೆ. ಹಿಂದೆ ಕಾಂಕ್ರಿಟೆ ಗೋಡೆ ಬದಲಿಗೆ ಕನ್ನಡಿಗಳನ್ನು ಅಳವಡಿಸಲಾಗಿತ್ತು.

ಘಟನೆ ನಡೆದ ತಕ್ಷಣ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಯುವತಿಯ ತಲೆಗೆ ತೀವ್ರ ಪೆಟ್ಟಾಗಿತ್ತು. ಟ್ರೆಡ್ ಮಿಲ್ ಮತ್ತು ಕಿಟಕಿಯ ನಡುವಿನ ಅಂತರ ಕೇವಲ ಎರಡು ಅಡಿ, ಆದ್ದರಿಂದ ಈ ಘಟನೆ ಸಂಭವಿಸಿದೆ.

ಜಿಮ್ ಮಾಲೀಕರು ಕ್ಷಮೆಯಾಚಿಸಿದ್ದು, ಮೂರು ದಿನಗಳ ಕಾಲ ಜಿಮ್ ಮುಚ್ಚಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!