ನ್ಯಾಟೋಗೆ ಸ್ವೀಡನ್ ಸೇರ್ಪಡೆ
ನ್ಯಾಟೋಗೆ ಸ್ವೀಡನ್ ಸೇರ್ಪಡೆ 
ವಿದೇಶ

ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ, ನ್ಯಾಟೋದ 32ನೇ ಸದಸ್ಯ ರಾಷ್ಟ್ರವಾಗಿ ಸ್ವೀಡನ್ ಸೇರ್ಪಡೆ

Srinivasamurthy VN

ವಾಷಿಂಗ್ಟನ್: ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಅಮೆರಿಕ ನೇತೃತ್ವದ ಮಿತ್ರಪಡೆಗಳ NATOದ 32ನೇ ಸದಸ್ಯ ರಾಷ್ಟ್ರವಾಗಿ ಸ್ವೀಡನ್ ಸೇರ್ಪಡೆಗೊಂಡಿದೆ.

ಈ ಕುರಿತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಘೋಷಿಸಿದ್ದು, ಇದೊಂದು ಐತಿಹಾಸಿಕ ನಡೆಯಾಗಿದೆ. ವಾಷಿಂಗ್ಟನ್‌ನಲ್ಲಿ ನಡೆದ ಸಮಾರಂಭದಲ್ಲಿ ದಾಖಲೆಗಳನ್ನು ಹಸ್ತಾಂತರಿಸಲಾಗಿದ್ದು, ಇದು ರಷ್ಯಾದಿಂದ "ಕಾರ್ಯತಂತ್ರದ ಸೋಲನ್ನು" ಗುರುತಿಸಿದೆ ಎಂದು ಬಣ್ಣಿಸಿದ್ದಾರೆ.

ನ್ಯಾಟೋದ ಸದಸ್ಯ ರಾಷ್ಟ್ರವಾಗಿ ಸ್ವೀಡನ್ ಸೇರ್ಪಡೆಯಾದ ದಾಖಲೆಗಳನ್ನು ಸ್ವೀಡನ್ ಪ್ರಧಾನಿ ಸ್ವೀಕರಿಸುವ ಮುನ್ನ ಒಕ್ಕೂಟದ ಇತರ 31 ಸದಸ್ಯ ರಾಷ್ಟ್ರಗಳ ಅನುಮೋದನೆ ಪಡೆಯಲಾಗಿದೆ. ಅಂತೆಯೇ "ಕಾಯುವವರಿಗೆ ಒಳ್ಳೆಯ ಸಮಯ ಬರುತ್ತದೆ''. ಇವುಗಳಲ್ಲಿ ಯಾವುದೂ ಮೊದಲೇ ನಿರ್ಧರಿಸಲ್ಪಟ್ಟಿಲ್ಲ.. ಮೂರು ವರ್ಷಗಳ ಹಿಂದೆ ನಾವು ಎಲ್ಲಿದ್ದೇವೆ.. ಈಗ ಎಲ್ಲಿದ್ದೇವೆ ಎಂಬುದು ಮುಖ್ಯ ಎಂದು ಬ್ಲಿಂಕೆನ್ ಹೇಳಿದರು.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಉಲ್ಲೇಖಿಸಿ ಮಾತನಾಡಿದ ಬ್ಲಿಂಕನ್, "ಪುಟಿನ್ ಅವರ ಉಕ್ರೇನ್ ಆಕ್ರಮಣವು ರಷ್ಯಾಕ್ಕೆ ಆಗಿರುವ ಕಾರ್ಯತಂತ್ರದ ಸೋಲಿಗೆ ಇಂದಿನದ್ದು ಸ್ಪಷ್ಟ ಉದಾಹರಣೆ ಎಂದರು.

ಈ ಕುರಿತ ಮಾತನಾಡಿದ ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್, 'ಇದು ಒಂದು ಪ್ರಮುಖ ಹೆಜ್ಜೆ.. ಆದರೆ, ಅದೇ ಸಮಯದಲ್ಲಿ, ಅತ್ಯಂತ ನೈಸರ್ಗಿಕ ಹೆಜ್ಜೆ. ನ್ಯಾಟೋ ಸೇರ್ಪಡೆ ಸ್ವಾತಂತ್ರ್ಯದ ವಿಜಯವಾಗಿದೆ. ನ್ಯಾಟೋಗೆ ಸೇರಲು ಸ್ವೀಡನ್ ಮುಕ್ತ, ಪ್ರಜಾಪ್ರಭುತ್ವ, ಸಾರ್ವಭೌಮ ಮತ್ತು ಏಕೀಕೃತ ಆಯ್ಕೆಯನ್ನು ಮಾಡಿದೆ ಎಂದರು.

ಕ್ರಿಸ್ಟರ್ಸನ್ ಅವರು ಶ್ವೇತಭವನಕ್ಕೆ ಭೇಟಿ ನೀಡಲಿದ್ದು, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಗೌರವ ಅತಿಥಿಯಾಗಲಿದ್ದಾರೆ. ಸ್ವೀಡನ್ ಅನ್ನು ನ್ಯಾಟೋ ಮಿತ್ರರಾಷ್ಟ್ರವಾಗಿ ಹೊಂದಿರುವುದರಿಂದ ಯುನೈಟೆಡ್ ಸ್ಟೇಟ್ಸ್ ಮತ್ತು ನಮ್ಮ ಮಿತ್ರರಾಷ್ಟ್ರಗಳನ್ನು ಇನ್ನಷ್ಟು ಸುರಕ್ಷಿತವಾಗಿಸುತ್ತದೆ.

ನ್ಯಾಟೋ ವಿಶ್ವದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ರಕ್ಷಣಾತ್ಮಕ ಮೈತ್ರಿಯಾಗಿದೆ. 75 ವರ್ಷಗಳ ಹಿಂದೆ ನಮ್ಮ ಒಕ್ಕೂಟವು ವಿಶ್ವ ಸಮರ II ರ ಭಗ್ನಾವಶೇಷದಿಂದ ಸ್ಥಾಪಿಸಲ್ಪಟ್ಟಾಗ ನಮ್ಮ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವುದು ಇದರ ಧ್ಯೇಯವಾಗಿತ್ತು ಎಂದು ಶ್ವೇತಭವನ ಪ್ರಕಟಣೆಯಲ್ಲಿ ಹೇಳಿದೆ.

SCROLL FOR NEXT