ನೇಪಾಳ ಪ್ರಧಾನಿ ಪುಷ್ಪಕಮಲ್ ದಹಲ್
ನೇಪಾಳ ಪ್ರಧಾನಿ ಪುಷ್ಪಕಮಲ್ ದಹಲ್  PTI
ವಿದೇಶ

ಮಾ.13 ರಂದು ಮೂರನೇ ಬಾರಿಗೆ ವಿಶ್ವಾಸಮತ ಯಾಚನೆ ಮಾಡಲಿರುವ ನೇಪಾಳ ಪ್ರಧಾನಿ ಪ್ರಚಂಡ

Srinivas Rao BV

ಕಠ್ಮಂಡು: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ (ಪ್ರಚಂಡ) ಮಾ.13 ರಂದು ಸಂಸತ್ ನಲ್ಲಿ ವಿಶ್ವಾಸ ಮತ ಯಾಚನೆ ಮಾಡಲು ಯೋಜಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಪ್ರಚಂಡ ಸಿಪಿಎನ್-ಯುಎಂಎಲ್ ಜೊತೆಗೆ ಹೊಸ ಮೈತ್ರಿ ಮಾಡಿಕೊಂಡಿದ್ದರು.

ಮಾಜಿ ಗೆರಿಲ್ಲಾ ನಾಯಕರಾಗಿದ್ದ ಪ್ರಚಂಡ ಅವರು ನೇಪಾಳಿ ಕಾಂಗ್ರೆಸ್ ನ್ನು ತ್ಯಜಿಸಿ ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ನೇತೃತ್ವದ ಎರಡನೇ ಅತಿದೊಡ್ಡ ಪಕ್ಷವಾದ ನೇಪಾಳದ ಕಮ್ಯುನಿಸ್ಟ್ ಪಾರ್ಟಿ (ಯೂನಿಫೈಡ್ ಮಾರ್ಕ್ಸ್‌ವಾದಿ-ಲೆನಿನಿಸ್ಟ್) ನೊಂದಿಗೆ ಹೊಸ ಮೈತ್ರಿ ಮಾಡಿಕೊಂಡ ನಂತರ ಮೂರನೇ ಸುತ್ತಿನ ವಿಶ್ವಾಸ ಮತ ಸಾಬೀತುಪಡಿಸಲು ಸಿದ್ಧರಾಗುತ್ತಿದ್ದಾರೆ.

ನೇಪಾಳದ ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ಯಾವುದೇ ಮಿತ್ರ ಪಕ್ಷವು ಬೆಂಬಲವನ್ನು ಹಿಂಪಡೆದ ನಂತರ ಪ್ರಧಾನ ಮಂತ್ರಿಗಳು ವಿಶ್ವಾಸ ಮತವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಪ್ರಧಾನಿ ಪ್ರಚಂಡ ಅವರು ಶನಿವಾರ ಪಕ್ಷದಲ್ಲಿ ತಮ್ಮ ಆಪ್ತ ವಲಯದಲ್ಲಿ ಈ ವಿಷಯವನ್ನು ಅನೌಪಚಾರಿಕವಾಗಿ ಚರ್ಚಿಸಿದರು ಮತ್ತು ಸಿಪಿಎನ್-ಮಾವೋವಾದಿ ಕೇಂದ್ರದ ಸಂಸದೀಯ ಪಕ್ಷದ ಸಭೆಯು ಮಾರ್ಚ್‌ನಲ್ಲಿ ಮತದಾನದ ಸಮಯದಲ್ಲಿ ಕೆಳಮನೆಯಲ್ಲಿ ಕಡ್ಡಾಯವಾಗಿ ಹಾಜರಿರಲು ತನ್ನ ಎಲ್ಲಾ ಶಾಸಕರಿಗೆ ವಿಪ್ ಜಾರಿಗೊಳಿಸಲು ನಿರ್ಧರಿಸಿತು.

SCROLL FOR NEXT