ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು TNIE
ವಿದೇಶ

ಸೇನಾ ಸಿಬ್ಬಂದಿ ಹಿಂತೆಗೆತಕ್ಕೆ ಒತ್ತಡದ ಬಳಿಕ ಭಾರತದಿಂದ ಸಾಲ ಪರಿಹಾರಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಬೇಡಿಕೆ!

ಭಾರತ ವಿರೋಧಿ ನಿಲುವು ಹೊಂದಿದ್ದ ಮಾಲ್ಡೀವ್ಸ್ ನ ಅಧ್ಯಕ್ಷ ಮೊಹಮ್ಮದ್ ಮುಯಿಜು, ತಮ್ಮ ಧ್ವನಿಯನ್ನು ಬದಲಿಸಿಕೊಂಡಿದ್ದು, ಭಾರತವನ್ನು ತಮ್ಮ ದೇಶದ ಪರಮಾಪ್ತ ದೇಶ ಎಂದು ಬಣ್ಣಿಸಿದ್ದಾರೆ.

ಮಾಲಿ: ಭಾರತ ವಿರೋಧಿ ನಿಲುವು ಹೊಂದಿದ್ದ ಮಾಲ್ಡೀವ್ಸ್ ನ ಅಧ್ಯಕ್ಷ ಮೊಹಮ್ಮದ್ ಮುಯಿಜು, ತಮ್ಮ ಧ್ವನಿಯನ್ನು ಬದಲಿಸಿಕೊಂಡಿದ್ದು, ಭಾರತವನ್ನು ತಮ್ಮ ದೇಶದ ಪರಮಾಪ್ತ ದೇಶ ಎಂದು ಬಣ್ಣಿಸಿದ್ದಾರೆ. ತಮ್ಮ ದೇಶಕ್ಕೆ ಸಾಲ ಪರಿಹಾರ (ಸಾಲ ಮನ್ನ) ನೀಡಬೇಕು ಎಂದು ಮುಯಿುಝು ಮನವಿ ಮಾಡಿದ್ದಾರೆ.

2024 ವರ್ಷಾಂತ್ಯಕ್ಕೆ ಮಾಲ್ಡೀವ್ಸ್ ಭಾರತಕ್ಕೆ 400.9 ಮಿಲಿಯನ್ ಡಾಲರ್ ಗಳಷ್ಟು ಸಾಲ ಮರುಪಾವತಿ ಮಾಡಬೇಕಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಮುಯಿಜು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ, ಚೀನಾ ಪರ ಇರುವ ಮಾಲ್ಡೀವಿಯನ್ ನಾಯಕ ಭಾರತದ ಕಡೆಗೆ ಕಠಿಣ ನಿಲುವನ್ನು ಅನುಸರಿಸಿದ್ದಾರೆ ಮತ್ತು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಮೂರು ವಾಯುಯಾನ ವೇದಿಕೆಗಳನ್ನು ನಿರ್ವಹಿಸುತ್ತಿರುವ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಮೇ 10 ರೊಳಗೆ ತಮ್ಮ ದೇಶದಿಂದ ವಾಪಸು ಕಳುಹಿಸುವಂತೆ ಒತ್ತಾಯಿಸಿದ್ದರು. ಮಾಲ್ಡೀವ್ಸ್‌ಗೆ ನೆರವು ನೀಡುವಲ್ಲಿ ಭಾರತವು ಪ್ರಮುಖವಾಗಿದೆ ಮತ್ತು "ಹೆಚ್ಚಿನ ಸಂಖ್ಯೆಯ" ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮುಯಿಝು ಹೇಳಿದ್ದಾರೆ.

ಭಾರತದ ಸೇನಾ ಸಿಬ್ಬಂದಿಯ ಮೊದಲ ಬ್ಯಾಚ್ ಈ ತಿಂಗಳು ದ್ವೀಪ ರಾಷ್ಟ್ರವನ್ನು ತೊರೆದ ನಂತರ ಭಾರತವನ್ನು ಮುಯಿಝು ಹೊಗಳಿದ್ದಾರೆ. ಮೇ 10 ರ ವೇಳೆಗೆ, ಮೂರು ಭಾರತೀಯ ವಾಯುಯಾನ ವೇದಿಕೆಗಳನ್ನು ನಿರ್ವಹಿಸುವ ಎಲ್ಲಾ 88 ಮಿಲಿಟರಿ ಸಿಬ್ಬಂದಿಗಳು ದೇಶವನ್ನು ತೊರೆಯಬೇಕೆಂದು ಮುಯಿಜ್ಜು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್