ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಅಮಾನವೀಯ ದೃಶ್ಯ: ಅಮೆರಿಕದಲ್ಲಿ ಮೃತ ವ್ಯಕ್ತಿಯ ಕಾಲು ಕಿತ್ತು ತಿಂದ ಯುವಕ, ವಿಡಿಯೋ ವೈರಲ್!

ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ತುಂಡರಿಸಿದ ಕಾಲನ್ನು ಕಿತ್ತು ತಿಂದಿದ್ದಕ್ಕಾಗಿ ಕ್ಯಾಲಿಫೋರ್ನಿಯಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತ್ಯಕ್ಷ ದೃಶ್ಯ
Vishwanath S
Updated On : 23 Mar 2024, 6:53 pm

ಲಾಸ್ ಏಂಜಲೀಸ್: ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ತುಂಡರಿಸಿದ ಕಾಲನ್ನು ಕಿತ್ತು ತಿಂದಿದ್ದಕ್ಕಾಗಿ ಕ್ಯಾಲಿಫೋರ್ನಿಯಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಪ್ರಕಾರ, ಬೇಕರ್ಸ್‌ಫೀಲ್ಡ್‌ನ ಪಶ್ಚಿಮದಲ್ಲಿರುವ ವಾಸ್ಕೋದಲ್ಲಿರುವ ಆಮ್‌ಟ್ರಾಕ್ ನಿಲ್ದಾಣದ ಹಳಿ ಮೇಲಿದ್ದ ಮೃತ ವ್ಯಕ್ತಿಯ ಕಾಲನ್ನು 27 ವರ್ಷದ ರೆಸೆಂಡೋ ಟೆಲ್ಲೆಜ್ ತಿಂದಿದ್ದನು. ಬೆಳಗ್ಗೆ 8 ಗಂಟೆ ಸುಮಾರಿಗೆ ಆ ವ್ಯಕ್ತಿ ರೈಲು ಅಪಘಾತದಲ್ಲಿ ಮೃತಪಟ್ಟಿದ್ದನು.

ರೈಲು ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದು ಅಪಘಾತದ ಬಳಿಕ ಆತನ ಕಾಲು ತುಂಡಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Advertisement

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಟೆಲ್ಲೆಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

KannadaPrabha News App ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement