ಕೊಲಂಬೊ: ಸಾಲ ಮರುಪಾವತಿಯನ್ನು 2027 ರ ವರೆಗೆ ಮುಂದೂಡಲು ಶ್ರೀಲಂಕಾ ನಿರ್ಧರಿಸಿದೆ.
ಸಾಲ ಮರುಪಾವತಿ ಷರತ್ತುಗಳನ್ನು 2042 ವರೆಗೆ ವಿಸ್ತರಿಸುವ ಸಂಬಂಧ ಮರು ಮಾತುಕತೆಯ ಮೇಲೆ ಕೇಂದ್ರೀಕರಿಸುವುದರ ಬಗ್ಗೆ ಕೆಲವು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಂಕಾ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಹೇಳಿದ್ದಾರೆ.
2022 ರ ಏಪ್ರಿಲ್ ನಲ್ಲಿ ಶ್ರೀಲಂಕಾ ಮೊದಲ ಬಾರಿಗೆ ದಿವಾಳಿಯನ್ನು ಘೋಷಿಸಿಕೊಂಡಿತ್ತು. ಹಿಂದೆಂದೂ ಕಂಡು ಕೇಳರಿಯದ ಆರ್ಥಿಕ ಬಿಕ್ಕಟ್ಟು ಅಧ್ಯಕ್ಷ ವಿಕ್ರಮಸಿಂಘೆ ಅವರಿಗೂ ಹಿಂದೆ ಅಧ್ಯಕ್ಷರಾಗಿದ್ದ ಗೊಟಾಬಯ ರಾಜಪಕ್ಸೆ 2022 ರಲ್ಲಿ ಅಧಿಕಾರವನ್ನು ತ್ಯಜಿಸಲು ಕಾರಣವಾಯಿತು.
ಮೇ ತಿಂಗಳ ಆರಂಭದಲ್ಲಿ ನಡೆದ ಸಾಲ ಪುನರ್ರಚನೆ ಪ್ರಕ್ರಿಯೆಯಲ್ಲಿ ಶ್ರೀಲಂಕಾ ತನ್ನ ಒಟ್ಟಾರೆ ಸಾಲದ ಹೊರೆಯಿಂದ ಸರಿಸುಮಾರು USD 17 ಶತಕೋಟಿ ಕಡಿತವನ್ನು ಎದುರು ನೋಡುತ್ತಿದೆ ಎಂದು ವಿದೇಶಾಂಗ ಸಚಿವ ಅಲಿ ಸಬ್ರಿ ಹೇಳಿದ್ದರು.