ಬ್ರಾಂಪ್ಟನ್ ನಲ್ಲಿ ನಡೆದ ಪ್ರತಿಭಟನೆ 
ವಿದೇಶ

ಕೆನಡಾ: ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪ; ಹಿಂದೂ ದೇವಾಲಯದ ಅರ್ಚಕ ಅಮಾನತು

ಭಾರತೀಯ ಪಿಂಚಣಿದಾರರಿಗೆ ಪ್ರಮಾಣಪತ್ರಗಳನ್ನು ನೀಡಲು ಯೋಜಿಸಲಾಗಿದ್ದ ಕಾನ್ಸುಲರ್ ಶಿಬಿರಗಳನ್ನು ಭದ್ರತಾ ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ.

ಚಂಡೀಗಢ: ಭಾನುವಾರ ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅರ್ಚಕ ರಾಜಿಂದರ್ ಪರ್ಸಾದ್ ಅವರನ್ನು ಹಿಂದೂ ಸಭಾ ದೇವಾಲಯದ ಆಡಳಿತ ಮಂಡಳಿ ಅಮಾನತುಗೊಳಿಸಿದೆ.

ದೇವಾಲಯದ ಆವರಣದಲ್ಲಿರುವ ಹಿಂದೂ ಸಭಾ ದೇವಾಲಯದಲ್ಲಿ ಖಾಲಿಸ್ತಾನಿ ಪರ ಪ್ರತಿಭಟನಾಕಾರರು ಮತ್ತು ಜನರ ನಡುವಿನ ಘರ್ಷಣೆಯ ನಂತರ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಾನ್ಸುಲರ್ ಶಿಬಿರಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ಪಿಂಚಣಿದಾರರಿಗೆ ಪ್ರಮಾಣಪತ್ರಗಳನ್ನು ನೀಡಲು ಯೋಜಿಸಲಾಗಿದ್ದ ಕಾನ್ಸುಲರ್ ಶಿಬಿರಗಳನ್ನು ಭದ್ರತಾ ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ. ಖಲಿಸ್ತಾನಿ ಉಗ್ರರ ಇತ್ತೀಚಿನ ಹಿಂಸಾಚಾರದ ನಂತರ ಸೂಕ್ತ ರಕ್ಷಣೆ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.

ಸಮುದಾಯ ಶಿಬಿರ ಸಂಘಟಕರಿಗೆ ಕನಿಷ್ಠ ಭದ್ರತಾ ರಕ್ಷಣೆಯನ್ನು ಒದಗಿಸಲು ಭದ್ರತಾ ಏಜೆನ್ಸಿಗಳಿಗೆ ಸಾಧ್ಯವಾಗಲಿಲ್ಲ, ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಕಾನ್ಸುಲೇಟ್ ಕೆಲವು ನಿಗದಿತ ಶಿಬಿರಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ. ಭಾರತೀಯ ದೂತಾವಾಸ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ನಂತರ ಅರ್ಚಕರನ್ನು ಅಮಾನತುಗೊಳಿಸಲು ಆದೇಶವನ್ನು ಹೊರಡಿಸಲಾಗಿದೆ. “ನವೆಂಬರ್ 3, 2024 ರಂದು ಹಿಂದೂ ಸಭಾದ ಆವರಣದಲ್ಲಿ ಅನುಮತಿಯಿಲ್ಲದೆ ಪ್ರತಿಭಟನಾಕಾರರೊಂದಿಗೆ ಭಾಗಿಯಾಗಿದ್ದಕ್ಕೆ ಹಿಂದೂ ಸಭಾ ಅರ್ಚಕ ರಾಜಿಂದರ್ ಪರ್ಸಾದ್ ಅವರನ್ನು ಹಿಂದೂ ಸಭಾವು ಅಮಾನತುಗೊಳಿಸಿದೆ, ಈ ನಿರ್ಧಾರ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ಬ್ರಾಂಪ್ಟನ್‌ನ ಹಿಂದೂ ಸಭಾ ದೇವಾಲಯದ ಅಧ್ಯಕ್ಷ ಮಧುಸೂದನ್ ಲಾಮಾ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ED ಶಾಕ್​: ಮನೆ, ಕಚೇರಿ ಸೇರಿದಂತೆ 13ಕ್ಕೂ ಹೆಚ್ಚು ಕಡೆ ದಾಳಿ

Toxic: ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ರಾ ನಯನತಾರಾ? ಫೋಟೋ ವೈರಲ್!

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಮಂಕಿಮ್ಯಾನ್'; ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಯುವತಿ ಯಾರು ಗೊತ್ತಾ?

‘Dimagi Naxal’ ವಿವಾದ: ‘ಕಾಂಗ್ರೆಸ್‌ ಮಾವೋವಾದಿ ಪಕ್ಷವಾಗಿ ಬದಲಾಗುತ್ತಿದೆ’: ಕಿರಣ್‌ ರಿಜಿಜು ವಾಗ್ದಾಳಿ

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!