ಕ್ರೀಡಾ ಕೇಂದ್ರ 
ವಿದೇಶ

ಚೀನಾ: ಕ್ರೀಡಾ ಕೇಂದ್ರಕ್ಕೆ ಕಾರು ನುಗ್ಗಿಸಿದ ಚಾಲಕ; 35 ಮಂದಿ ಸಾವು, 43 ಜನರಿಗೆ ಗಾಯ

ದಕ್ಷಿಣ ಚೀನಾದ ಝುಹೈ ನಗರದ ಕ್ರೀಡಾ ಕೇಂದ್ರಕ್ಕೆ ಕಾರು ನುಗ್ಗಿಸಿದ 62 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕಾಕ್: ವ್ಯಕ್ತಿಯೊಬ್ಬ ದಕ್ಷಿಣ ಚೀನಾದ ಝುಹೈನಲ್ಲಿರುವ ಕ್ರೀಡಾ ಕೇಂದ್ರದಲ್ಲಿ ವ್ಯಾಯಾಮ ಮಾಡುತ್ತಿದ್ದ ಜನರ ಮೇಲೆ ಉದ್ದೇಶಪೂರ್ವಕವಾಗಿ ತನ್ನ ಕಾರನ್ನು ನುಗ್ಗಿಸಿದ್ದು, ಭೀಕರ ಅಪಘಾತದಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ ಮತ್ತು 43 ಜನ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಪೀಪಲ್ಸ್ ಲಿಬರೇಶನ್ ಆರ್ಮಿ ನಗರದಲ್ಲಿ ವಾರ್ಷಿಕವಾಗಿ ಆಯೋಜಿಸಲಾಗುವ ದೇಶದ ಪ್ರಮುಖ ವೈಮಾನಿಕ ಪ್ರದರ್ಶನದ ಮುನ್ನಾದಿನದಂದು ಸೋಮವಾರ ತಡರಾತ್ರಿ ಈ ದಾಳಿ ನಡೆದಿದ್ದು, ದಕ್ಷಿಣ ಚೀನಾದ ಝುಹೈ ನಗರದ ಕ್ರೀಡಾ ಕೇಂದ್ರಕ್ಕೆ ಕಾರು ನುಗ್ಗಿಸಿದ 62 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚೀನಾ ಅಧಿಕಾರಿಗಳ ಪ್ರಕಾರ, ಪೊಲೀಸರು ಫ್ಯಾನ್ ಎಂಬ ಆತನ ಕುಟುಂಬದ ಹೆಸರಿನಿಂದ ಆರೋಪಿಯನ್ನು ಗುರುತಿಸಿದ್ದಾರೆ. ಕೃತ್ಯದ ಬಳಿಕ ಚಾಲಕ ಚಾಕು ಬಳಸಿ ಆತ್ಮಹತ್ಯೆಗೆ ಮುಂದಾಗಿದ್ದ ಎಂದು ವರದಿಯಾಗಿದೆ.

ಫ್ಯಾನ್ ಕಾರಿನಲ್ಲಿ ಚಾಕು ಪತ್ತೆಯಾಗಿದೆ. ಆತನ ಕುತ್ತಿಗೆಗೆ ಗಾಯಗಳಾಗಿದ್ದು, ಸ್ವಯಂ-ಹಾನಿ ಮಾಡಿಕೊಂಡಿರಬಹುದು ಎಂದು ಭಾವಿಸಲಾಗಿದೆ. ಆರೋಪಿ ಪ್ರಜ್ಞಾಹೀನರಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದು ಸುಮಾರು 24 ಗಂಟೆಗಳ ಕಾಲ, ಸಾವು ಅಥವಾ ಗಾಯದ ಸಂಖ್ಯೆ ಎಷ್ಟು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಚಿಕಿತ್ಸೆಗಾಗಿ ಜನರನ್ನು ನಾಲ್ಕು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಸೋಮವಾರ ವರದಿ ಮಾಡಿದೆ.

ಮಂಗಳವಾರ ಬೆಳಗ್ಗೆ ಚೀನೀ ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಹುಡುಕಾಟಗಳ ಬಗ್ಗೆ ಚೀನಾ ಸೆನ್ಸಾರ್‌ ಮಾಡಿದೆ. ಸಾಮಾಜಿಕ ಜಾಲತಾಣ Weibo ನಲ್ಲಿ ಈ ಘಟನೆಯ ಬಗ್ಗೆ ಸರ್ಚ್‌ ಮಾಡಿದರೆ ಕೇವಲ ಒಂದೆರಡು ಚಿತ್ರಗಳು ಮಾತ್ರ ಕಾಣುತ್ತಿದೆ.

ಸೋಮವಾರ ರಾತ್ರಿಯಿಂದಲೇ ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಪೋಸ್ಟ್‌ಗಳನ್ನು ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ನಂತರ ಮುಂದಿನ ಸೂಚನೆ ಬರುವವರೆಗೆ ವ್ಯಾಯಾಮ ಕೇಂದ್ರವನ್ನು ಬಂದ್‌ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಕ್ಷಣಾ, ಭದ್ರತಾ ಒಪ್ಪಂದ ಬಲವರ್ಧನೆ: ಭಾರತ- ಜರ್ಮನಿ ಮಹತ್ವದ ಕ್ರಮಗಳ ಘೋಷಣೆ!

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

'ಅಜ್ಮೀರ್' ದರ್ಗಾ ಶಿವ ದೇಗುಲವಾಗಿತ್ತು: ಕೋರ್ಟ್ ಮೆಟ್ಟಿಲೇರಿದ ವಿವಾದ!

'ವಿಬಿ-ಜಿ-ರಾಮ್' ಕಾಯ್ದೆ ವಿರುದ್ಧ ಕಾನೂನು ಸಮರ: ವಿಶೇಷ ಅಧಿವೇಶನ ಕರೆದು ಚರ್ಚೆ- ಸಿಎಂ ಸಿದ್ದರಾಮಯ್ಯ

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT