ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಗಾಜಾ ಸರ್ಕಾರದ ಮುಖ್ಯಸ್ಥ, ಇಬ್ಬರು ಹಿರಿಯ ಹಮಾಸ್ ನಾಯಕರ ಹತ್ಯೆ: ಇಸ್ರೇಲ್

ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸರ್ಕಾರದ ಮುಖ್ಯಸ್ಥರಾದ ರಾಹ್ವಿ ಮುಶ್ತಾಹಾ ಮತ್ತು ಹಮಾಸ್‌ ರಾಜಕೀಯ ಬ್ಯೂರೋದ ಭದ್ರತಾ ಖಾತೆಯನ್ನು ಹೊಂದಿದ್ದ ಸಮೇಹ್ ಅಲ್-ಸಿರಾಜ್ ಮತ್ತು ಕಮಾಂಡರ್ ಸಮಿ ಔದೆ ಅವರನ್ನು ಹತ್ಯೆ ಮಾಡಲಾಗಿದೆ.

ರಾಹ್ವಿ ಮುಶ್ತಾಹಾ - ಸಮಿ ಔದೆ - ಸಮೇಹ್ ಅಲ್-ಸಿರಾಜ್
Lingaraj Badiger
Updated On : 3 Oct 2024, 5:26 pm

ಜೆರುಸಲೇಂ: ಸುಮಾರು ಒಂದು ವರ್ಷದಿಂದ ಪ್ಯಾಲೆಸ್ತೀನ್ ಉಗ್ರಗಾಮಿಗಳೊಂದಿಗೆ ಹೋರಾಡುತ್ತಿರುವ ನಮ್ಮ ಸೇನೆಯು ಗಾಜಾದಲ್ಲಿ ಮೂರು ತಿಂಗಳ ಹಿಂದೆ ನಡೆದ ದಾಳಿಯಲ್ಲಿ ಮೂವರು ಹಿರಿಯ ಹಮಾಸ್ ನಾಯಕರನ್ನು ಕೊಂದಿದೆ ಎಂದು ಇಸ್ರೇಲಿ ಮಿಲಿಟರಿ ಗುರುವಾರ ಹೇಳಿದೆ.

ಈ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸರ್ಕಾರದ ಮುಖ್ಯಸ್ಥರಾದ ರಾಹ್ವಿ ಮುಶ್ತಾಹಾ ಮತ್ತು ಹಮಾಸ್‌ ರಾಜಕೀಯ ಬ್ಯೂರೋದ ಭದ್ರತಾ ಖಾತೆಯನ್ನು ಹೊಂದಿದ್ದ ಸಮೇಹ್ ಅಲ್-ಸಿರಾಜ್ ಮತ್ತು ಕಮಾಂಡರ್ ಸಮಿ ಔದೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.

"ಮುಷ್ತಾಹಾ ಹಮಾಸ್‌ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು ಮತ್ತು ಹಮಾಸ್‌ನ ಪಡೆ ನಿಯೋಜನೆಗೆ ಸಂಬಂಧಿಸಿದ ನಿರ್ಧಾರಗಳ ಮೇಲೆ ನೇರ ಪರಿಣಾಮ ಬೀರಿದ್ದರು" ಎಂದು ಮಿಲಿಟರಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Advertisement

Also Read

ಮಧ್ಯ ಪ್ರಾಚ್ಯದಲ್ಲಿ ಹೆಚ್ಚಾದ ಉದ್ವಿಗ್ನತೆ: ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ- ಅಮೆರಿಕ ಎಚ್ಚರಿಕೆ

ಹಮಾಸ್‌ನ ಉನ್ನತ ನಾಯಕ ಯಾಹ್ಯಾ ಸಿನ್ವಾರ್‌ಗೆ ಮುಶ್ತಾಹಾ "ಬಲಗೈ" ಬಂಟ ಆಗಿದ್ದರು ಎಂದು ಇಸ್ರೇಲ್ ಸೇನೆ ಹೇಳಿದೆ. ಇನ್ನು ಸಿನ್ವಾರ್ ಜೀವಂತವಾಗಿದ್ದಾನೆ ಮತ್ತು ಗಾಜಾದಲ್ಲಿ ಅಡಗಿಕೊಂಡಿದ್ದಾನೆ ಎಂದು ಭಾವಿಸಲಾಗಿದೆ.

2015 ರಲ್ಲಿ, ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಮುಶ್ತಾಹಾ ಅವರನ್ನು "ಜಾಗತಿಕ ಭಯೋತ್ಪಾದಕ" ಎಂದು ಹೆಸರಿಸಿತ್ತು.

ಭಯೋತ್ಪಾದಕರ ವಿರುದ್ದ ಇಸ್ರೇಲ್‌ ಸಮರ ಸಾರಿದೆ. ಲೆಬನಾನ್‌ ಮೇಲೆ ಇಸ್ರೇಲ್‌ ಸೇನೆ ನಡೆಸಿದ ದಾಳಿಯಲ್ಲಿ ಈಗಾಗಲೇ ಹೆಜ್ಬುಲ್ಲಾ ಮುಖಂಡ ಹಸನ್‌ ನಸ್ರಲ್ಲಾ ಸೇರಿದಂತೆ ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement