ನಯೀಮ್ ಖಾಸಿಮ್ 
ವಿದೇಶ

ಇಸ್ರೇಲ್‌ನಿಂದ ಜೀವಭಯ: ಲೆಬನಾನ್ ತೊರೆದು ಇರಾನ್ ಸೇರಿದ ಹೆಜ್ಬುಲ್ಲಾದ ನೂತನ ಮುಖ್ಯಸ್ಥ ನಯೀಮ್ ಖಾಸಿಮ್!

ಇಸ್ರೇಲ್ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕರ ಸರಣಿ ಹತ್ಯೆ ನಂತರ ಉಗ್ರಗಾಮಿ ಗುಂಪಿನ ಉಪ ಕಾರ್ಯದರ್ಶಿ ನಯಿಮ್ ಖಾಸಿಮ್ ಲೆಬನಾನ್‌ ಬಿಟ್ಟು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಪ್ರಾಣಾಪಾಯದಿಂದ ಪಾರಾಗಲು ಆತ ಇರಾನ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ.

ಬೈರುತ್: ಇಸ್ರೇಲ್ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕರ ಸರಣಿ ಹತ್ಯೆ ನಂತರ ಉಗ್ರಗಾಮಿ ಗುಂಪಿನ ಉಪ ಕಾರ್ಯದರ್ಶಿ ನಯಿಮ್ ಖಾಸಿಮ್ ಲೆಬನಾನ್‌ ಬಿಟ್ಟು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಪ್ರಾಣಾಪಾಯದಿಂದ ಪಾರಾಗಲು ಆತ ಇರಾನ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಅರಬ್ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ನಾಯಕರ ಆದೇಶದ ಮೇರೆಗೆ ಖಾಸಿಮ್ ಇರಾನ್ ಸೇರಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲ್ ದಾಳಿಯಲ್ಲಿ ಹಸನ್ ನಸ್ರಲ್ಲಾ ಮತ್ತು ಹಶೆಮ್ ಸಫಿದೀನ್ ಸೇರಿದಂತೆ ಹಿಜ್ಬುಲ್ಲಾದ ಉನ್ನತ ನಾಯಕರು ಹತರಾಗಿದ್ದಾರೆ. ಖಾಸೆಮ್ ಇಸ್ರೇಲ್‌ನ ಮುಂದಿನ ಗುರಿಯಾಗಿರಬಹುದು ಎಂದು ನಂಬಲಾಗಿತ್ತು.

ಇರಾನ್ ಮೂಲಗಳನ್ನು ಉಲ್ಲೇಖಿಸಿ ದುಬೈ ಮೂಲದ ಮಾಧ್ಯಮ ಸಂಸ್ಥೆ ಎರಾಮ್ ನ್ಯೂಸ್ ತನ್ನ ವರದಿಯಲ್ಲಿ ಖಾಸಿಮ್ ಅಕ್ಟೋಬರ್ 5ರಂದು ಬೈರುತ್‌ ತೊರೆದಿದ್ದಾರೆ ಎಂದು ವರದಿ ಮಾಡಿದೆ. ಇರಾನ್‌ನ ವಿದೇಶಾಂಗ ಸಚಿವರ ವಿಮಾನದಲ್ಲಿ ಅವರನ್ನು ಕರೆದೊಯ್ಯಲಾಯಿತು. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಈ ತಿಂಗಳು ಲೆಬನಾನ್‌ಗೆ ರಾಜ್ಯ ಪ್ರವಾಸಕ್ಕೆ ಬಂದಿದ್ದರು. ಇಸ್ರೇಲ್‌ನಿಂದ ಹತ್ಯೆಯಾಗುವ ಭೀತಿಯಿಂದಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಉನ್ನತ ನಾಯಕರು ಖಾಸಿಮ್‌ನನ್ನು ಸ್ಥಳಾಂತರಿಸುವಂತೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ ನಂತರ ಖಾಸಿಮ್ ಮೂರು ಭಾಷಣಗಳನ್ನು ನೀಡಿದ್ದಾರೆ. ಎರಾಮ್ ನ್ಯೂಸ್ ಪ್ರಕಾರ, ಮೊದಲ ಭಾಷಣವನ್ನು ಬೈರುತ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ. ಆದರೆ ಎರಡನೇ ಮತ್ತು ಮೂರನೇ ಭಾಷಣಗಳನ್ನು ಟೆಹ್ರಾನ್‌ನಲ್ಲಿ ಮಾಡಲಾಗಿದೆ. ಅಕ್ಟೋಬರ್ 15ರಂದು ಕದನ ವಿರಾಮವನ್ನು ತಲುಪುವವರೆಗೆ ಹಿಜ್ಬುಲ್ಲಾ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ಖಾಸಿಮ್ ಇಸ್ರೇಲ್ಗೆ ಎಚ್ಚರಿಕೆ ನೀಡಿದರು.

ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ ನಂತರ ಖಾಸಿಮ್ ಗುಂಪಿನ ಸರ್ವೋಚ್ಚ ನಾಯಕರಾಗಿದ್ದಾರೆ. ಅರಬ್ ಮಾಧ್ಯಮ ವರದಿಗಳ ಪ್ರಕಾರ, ನಯಿಮ್ ಕಾಸಿಮ್ ಹೆಜ್ಬುಲ್ಲಾದ ಆರಂಭಿಕ ಸದಸ್ಯರಲ್ಲಿ ಒಬ್ಬರು. 1970ರ ದಶಕದಲ್ಲಿ ಅವರು ಲೆಬನಾನಿನ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದರು. ಇದರೊಂದಿಗೆ ಇಸ್ಲಾಮಿಕ್ ವಿದ್ವಾಂಸ ಅಯತೊಲ್ಲಾ ಮೊಹಮ್ಮದ್ ಹುಸೇನ್ ಫದ್ಲಲ್ಲಾ ಅವರಲ್ಲಿ ಧಾರ್ಮಿಕ ಅಧ್ಯಯನವನ್ನೂ ಮಾಡಿದರು.

1974ರಿಂದ 1988ರವರೆಗೆ ನಯೀಮ್ ಕಾಸಿಮ್ ಅವರು ಇಸ್ಲಾಮಿಕ್ ಧಾರ್ಮಿಕ ಶಿಕ್ಷಣದ ಸಂಘದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಖಾಸಿಮ್ ಹೆಜ್ಬುಲ್ಲಾ ಶಾಲೆಗಳ ಜಾಲದ ಮೇಲೆ ಕಣ್ಣಿಟ್ಟಿದ್ದರು. 1991ರಲ್ಲಿ ಸಂಘಟನೆಯ ಉಪ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರ ಶುರಾ ಕೌನ್ಸಿಲ್ ಎಂಬ ಹೆಜ್ಬುಲ್ಲಾದ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದಾರೆ. ಅವರು ಭಯೋತ್ಪಾದಕ ಗುಂಪುಗಳು ಮತ್ತು ಸರ್ಕಾರಿ ಮತ್ತು ಮಿಲಿಟರಿ ಚಟುವಟಿಕೆಗಳ ಉಸ್ತುವಾರಿ ವಹಿಸಿದ್ದಾರೆ.

ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಅಭಿಯಾನದ ಭಾಗವಾಗಿ ಗುಂಪಿನ ಬಹುತೇಕ ಉನ್ನತ ನಾಯಕತ್ವವನ್ನು ಕೊಂದಿದೆ. ಹತ್ಯೆಗೀಡಾದ ನಾಯಕರಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ, ಸ್ಥಾಪಕ ಸದಸ್ಯ ಫೌದ್ ಶುಕರ್, ಉನ್ನತ ಕಮಾಂಡರ್ ಅಲಿ ಕರಕಿ, ಸೆಂಟ್ರಲ್ ಕೌನ್ಸಿಲ್ ಉಪ ಮುಖ್ಯಸ್ಥ ನಬಿಲ್ ಕೌಕ್, ಡ್ರೋನ್ ಘಟಕದ ಮುಖ್ಯಸ್ಥ ಮೊಹಮ್ಮದ್ ಸರೂರ್, ಕ್ಷಿಪಣಿ ಘಟಕದ ಮುಖ್ಯಸ್ಥ ಇಬ್ರಾಹಿಂ ಕುಬೈಸಿ, ಕಾರ್ಯಾಚರಣೆಯ ಕಮಾಂಡರ್ ಇಬ್ರಾಹಿಂ ಅಕಿಲ್ ಮತ್ತು ಹಿರಿಯ ಕಮಾಂಡರ್ ಮೊಹಮ್ಮದ್ ನಾಸರ್ ಸೇರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT