ನೇಪಾಳ ಹೊಸ ಕರೆನ್ಸಿ (ಸಾಂದರ್ಬಿಕ ಚಿತ್ರ) 
ವಿದೇಶ

ಭಾರತಕ್ಕೆ ತಲೆನೋವು ತಂದ ನೇಪಾಳದ ಹೊಸ ಕರೆನ್ಸಿ!

ನೇಪಾಳದ ಸೆಂಟ್ರಲ್ ಬ್ಯಾಂಕ್ ಒಂದು ವರ್ಷದೊಳಗೆ ಹೊಸ ಕರೆನ್ಸಿ ನೋಟುಗಳನ್ನು ಮುದ್ರಿಸಲು ಸಿದ್ಧತೆ ನಡೆಸುತ್ತಿದ್ದು, ಇದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.

ಕಠ್ಮಂಡು: ನೇಪಾಳ ಕೇಂದ್ರೀಯ ಬ್ಯಾಂಕ್ ಹೊರ ತರಲು ನಿರ್ಧರಿಸಿರುವ ಹೊಸ ಕರೆನ್ಸಿ ಇದೀಗ ಭಾರತದ ತಲೆನೋವಿಗೆ ಕಾರಣವಾಗಿದೆ.

ಹೌದು.. ನೇಪಾಳದ ಸೆಂಟ್ರಲ್ ಬ್ಯಾಂಕ್ ಒಂದು ವರ್ಷದೊಳಗೆ ಹೊಸ ಕರೆನ್ಸಿ ನೋಟುಗಳನ್ನು ಮುದ್ರಿಸಲು ಸಿದ್ಧತೆ ನಡೆಸುತ್ತಿದ್ದು, ಇದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.

ನೇಪಾಳ ಮತ್ತು ಭಾರತದ ವಿವಾದಿತ ಪ್ರದೇಶಗಳನ್ನು ಒಳಗೊಂಡಿರುವ ಪರಿಷ್ಕೃತ ನಕ್ಷೆಯನ್ನು ಒಳಗೊಂಡಿರುವ ಚಿತ್ರದ ಹೊಸ ನೋಟನ್ನು ಮುದ್ರಿಸಲು ಮುಂದಾಗಿದೆ.

ನೇಪಾಳ ರಾಷ್ಟ್ರ ಬ್ಯಾಂಕ್ ಈಗಾಗಲೇ ಹೊಸ ನಕ್ಷೆಯೊಂದಿಗೆ ನೋಟುಗಳನ್ನು ಮುದ್ರಿಸುವ ಪ್ರಕ್ರಿಯೆಯನ್ನು ರವಾನಿಸಿದ್ದು, ಇದರಲ್ಲಿ ಕಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಸೇರಿವೆ ಎಂದು ಬ್ಯಾಂಕ್‌ನ ಜಂಟಿ ವಕ್ತಾರ ದಿಲ್ಲಿರಾಮ್ ಪೊಖರೆಲ್ ಅವರು ಆನ್‌ಲೈನ್ ನ್ಯೂಸ್ ಪೋರ್ಟಲ್ ಗೆ ತಿಳಿಸಿದ್ದಾರೆ.

ಹೊಸ ನೋಟುಗಳನ್ನು ಮುದ್ರಿಸುವ ಪ್ರಕ್ರಿಯೆಯನ್ನು ಬ್ಯಾಂಕ್ ಈಗಾಗಲೇ ರವಾನಿಸಿದ್ದು, ಆರು ತಿಂಗಳಿಂದ ಒಂದು ವರ್ಷದಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ಪೋಖರೆಲ್ ಹೇಳಿದ್ದಾರೆ.

ನೇಪಾಳದ ಅಂದಿನ ಪ್ರಧಾನಿ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ನೇತೃತ್ವದ ನೇಪಾಳದ ಕ್ಯಾಬಿನೆಟ್ ಮೇ 3 ರಂದು ನೇಪಾಳದ ಭಾಗವಾಗಿ ಈ ಪ್ರದೇಶಗಳನ್ನು ತೋರಿಸುವ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿತ್ತು. ಅಲ್ಲದೆ ಇದೇ ನಕ್ಷೆಯನ್ನು ಹೊಸ ನೋಟುಗಳಲ್ಲಿ ಮುದ್ರಿಸಲು ನಿರ್ಧರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!